ಸಬ್‌ಮರೀನ್‌ನಲ್ಲಿ ಸಂಚಾರಕ್ಕೆ ಹೊರಟಾಗ ಕೇವಲ 5 ಸಾವಾಗಿತ್ತು|  2 ತಿಂಗಳ ಬಳಿಕ ಹೊರಬಂದಾಗ ಸಾವಿರಾರು ಸಾವಿನ ಮಾಹಿತಿ

ಪ್ಯಾರಿಸ್‌(ಮಾ.31): ಕೊರೋನಾ ವೈರಸ್‌ ಬಗ್ಗೆ ಇಂದು ಜಗತ್ತಿನ ಹಳ್ಳಿ ಹಳ್ಳಿಗಳಿಗೂ ಗೊತ್ತಾಗಿದೆ. ಆದರೆ ಜಲಾಂತರ್ಗಾಮಿಗಳಲ್ಲಿ ಕೆಲಸ ಮಾಡುವವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

ಅಚ್ಚರಿ ಎನ್ನಿಸಿದರೂ ಇದು ನಿಜ. ಸಮರ ಜಲಾಂತರ್ಗಾಮಿಗಳಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇರುತ್ತಾರೆ ಹಾಗೂ ಅವರು ಸುಮಾರು 60ರಿಂದ 70 ದಿನ ಕಾಲ ಸಾಗರದಾಳದಲ್ಲಿ ಸಾಗುವ ಜಲಾಂತರ್ಗಾಮಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಅಲ್ಲಿಯವರೆಗೂ ಇವರಿಗೆ ಬಾಹ್ಯ ಜಗತ್ತಿನ ಆಗುಹೋಗುಗಳ ಸಂದೇಶಗಳನ್ನು ನೌಕಾಪಡೆ ಅಧಿಕಾರಿಗಳು ಕಳಿಸುವುದಿಲ್ಲ.

ಕೊರೋನಾ ಲಾಕ್‌ಡೌನ್‌: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್

ಕೊರೋನಾ ತೀವ್ರವಾಗಿರುವ ಫ್ರಾನ್ಸ್‌ನಲ್ಲೂ ಇದೇ ಆಗಿದೆ. ಅಣ್ವಸ್ತ್ರ ಸಜ್ಜಿತ ಫ್ರಾನ್ಸ್‌ ಜಲಾಂತರ್ಗಾಮಿಯಲ್ಲಿ 110 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಫೆಬ್ರವರಿಯಲ್ಲೇ ಸಾಗರದಾಳದಲ್ಲಿ ಕೆಲಸ ಆರಂಭಿಸಿದ್ದಾರೆ. ವಾಪಸು ಬರುವುದು ಏಪ್ರಿಲ್‌ ಆಗಬಹುದು. ಅಲ್ಲಿಯವರೆಗೆ ಅವರಿಗೆ ಕೊರೋನಾ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಫ್ರಾನ್ಸ್‌ ನೌಕಾಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿವೃತ್ತ ಅಡ್ಮಿರಲ್‌ ಡಾಮಿನಿಕ್‌ ಸಾಲೇಸ್‌ ಅವರೇ ಇದಕ್ಕೆ ನಿದರ್ಶನ. ಅವರ ತಂದೆ ಈ ಹಿಂದೆ ತೀರಿಹೋದಾಗ ಸಾಲೇಸ್‌ ಅವರು 60 ದಿನಗಳ ಜಲಾಂತರ್ಗಾಮಿ ಮಿಶನ್‌ನಲ್ಲಿದ್ದರು. ಅವರು ಮಿಶನ್‌ ಮುಗಿಸಿ ಬಂದಾಗಲೇ ತಂದೆಯ ಸಾವಿನ ವಿಷಯ ತಿಳಿಸಲಾಯಿತು.

ಹ್ಯಾಂಡ್‌ ಶೇಕ್‌ಗೆ ಬೈ ಬೈ, ನಮಸ್ಕಾರ ಎಲ್ಲದಕ್ಕೂ ಸೈ..ಫ್ರಾನ್ಸ್ ಅಧ್ಯಕ್ಷರೇ ಹೀಗಾದ್ರು!

ಫ್ರಾನ್ಸ್‌ನಲ್ಲಿ ಕೊರೋನಾಗೆ 2600 ಮಂದಿ ಬಲಿಯಾಗಿದ್ದು, 40 ಸಾವಿರ ಮಂದಿ ವ್ಯಾಧಿಗೆ ತುತ್ತಾಗಿದ್ದಾರೆ.