Asianet Suvarna News Asianet Suvarna News

ಕೊರೋನಾ ಲಾಕ್‌ಡೌನ್‌: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್

ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ| 49 ಮಂದಿಯ ವಿರುದ್ಧ ಪ್ರಕರಣ ದಾಖಲು|ಜೂಜು ಕೋರರನ್ನು ಬಂಧಿ​ಸಿ 48300 ರು. ನಗದು, 6 ಮೋಟರ್‌ ಬೈಕ್‌ ವಶಪಡಿಸಿಕೊಂಡ ಪೊಲೀಸರು| 

Lathi Charge of Gambling Centers in Channapattana in Ramnagar District
Author
Bengaluru, First Published Mar 28, 2020, 11:49 AM IST

ಚನ್ನಪಟ್ಟಣ(ಮಾ.28): ಕೊರೋನಾ ಲಾಕ್‌ಡೌನ್‌ ನಡುವೆಯೂ ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಯುಗಾದಿ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಮಂದಿಗೆ ಲಾಠಿ ರುಚಿ ತೋರಿಸಿರುವ ತಾಲೂಕಿನ ಪೊಲೀಸರು, ಜೂಜು ಅಡ್ಡೆಗಳ ಮೇಲೆ ವ್ಯಾಪಕ ದಾಳಿ ನಡೆಸಿದ್ದಾರೆ. 

ತಾಲೂಕಿನ 5 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 8 ವಿವಿಧ ಜೂಜು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, 49 ಮಂದಿ ವಿರುದ್ಧಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು 49 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ವಿವಿಧ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸ್‌ ಅಧಿ​ಕಾರಿಗಳ ತಂಡ ಜೂಜು ಕೋರರಿಗೆ ಎಚ್ಚರಿಕೆ ನೀಡಿದ್ದು, ಕೊರೋನಾ ಆತಂಕದ ನಡುವೆಯೂ ಸಾಮಾಜಿಕ ಅಂತರವನ್ನು ಉಲ್ಲಂಘಿಸಿದ ಜೂಜು ಆಡುತ್ತಿದ್ದ ಹಿನ್ನೆಲೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ.

ಹೋಂ ಕ್ವಾರೆಂಟೈನ್‌: 235 ಮಂದಿ ಕೈಗೆ ಸೀಲ್

ಬುಧವಾರ ನಗರದ ಹನುಮಂತ ನಗರದ ಸಮೀಪ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿಮಾಡಿದ ಗ್ರಾಮಾಂತರ ಪೊಲೀಸರು 6 ಮಂದಿ ಜೂಜು ಕೋರರನ್ನು ಬಂಧಿ​ಸಿ 48300 ರು. ನಗದು, 6 ಮೋಟರ್‌ ಬೈಕ್‌ ವಶಪಡಿಸಿಕೊಂಡಿದ್ದಾರೆ. ಗುರುವಾರ ರಾತ್ರಿ ತಾಲೂಕಿನ ಕಳ್ಳಿಹೊಸೂರು ಗ್ರಾಮದ ತೋಟದಲ್ಲಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ಇಲ್ಲಿನ ಗ್ರಾಮಾಂತರ ಪೊಲೀಸರು, 6 ಮಂದಿಯನ್ನು ಬಂಧಿ​ಸಿ, 20350 ರು. ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ತಾಲೂಕ ನೇರಳೂರು ಗ್ರಾಮದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ ಅಕ್ಕೂರು ಪೊಲೀಸರು 5800 ರು. ನಗದು ವಶಪಡಿಸಿಕೊಂಡು, 8 ಮಂದಿ ಜೂಜುಕೋರರನ್ನು ಬಂ​ಸಿದ್ದಾರೆ. ಮಂಗಳವಾರ ರಾತ್ರಿ ನಗರದ ಮಂಗಳವಾರಪೇಟೆ ಬಳಿ ಆನಂದ ಶಾಲೆಯ ಬಳಿ ಜೂಜಾಟ ನಡೆಯುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ನಗರ ಪೊಲೀಸರು, 9 ಮಂದಿಯನ್ನು ಬಂದಿಸಿ, 3170 ರು.ವಶಪಡಿಸಿಕೊಂಡಿದ್ದಾರೆ.

ಮಹಾಮಾರಿ ಕೋವಿಡ್ 19: ಫ್ರಾನ್ಸ್‌ನ ಪ್ರಜೆಗೆ ಕೊರೋನಾ ಸೋಂಕು ದೃಢ

ಬುಧವಾರ ತಾಲೂಕಿನ ರಾಮನರಸಿಂಹರಾಜ ಪುರದ ಗ್ರಾಮದ ರಸ್ತೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿರುವ ಎಂ.ಕೆ.ದೊಡ್ಡಿ ಪೊಲೀಸರು, 7 ಜನ ಆರೋಪಿಗಳನ್ನು ಬಂ​ಸಿ,4700 ರು. ಹಣ ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಇದೇ ವ್ಯಾಪ್ತಿಯ ಹರೂರು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಬಳಿ ಜೂಜಾಟದಲ್ಲಿ ತೊಡಗಿದ್ದ 4 ಮಂದಿಯನ್ನು ಬಂ​ಸಿ, 2850 ರು.ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ನಕಲಿ ಸಿಬಿಐ ಅಧಿ​ಕಾರಿ ಬಂಧನ

ಚನ್ನಪಟ್ಟಣ: ಸಿಬಿಐ ಅ​ಕಾರಿ ಎಂದು ಹೇಳಿಕೊಂಡು ತನ್ನ ವಾಹನದ ಮೇಲೆ ಹಾಕಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್‌ ಬಂ​ಧಿಸುವಲ್ಲಿ ಸಫಲಗೊಂಡಿದ್ದಾರೆ.ಮಹೇಶ್‌ ಬಂ​ತ ಆರೋಪಿ. ತಾಲೂಕಿನ ಹನಿಯೂರು ಗ್ರಾಮದ ಈತ ತನ್ನ ದ್ವಿಚಕ್ರವಾಹನದ ಮೇಲೆ ಸಿಬಿಐ ಎಂದು ಬರೆದು ಕೊಂಡಿದ್ದನ್ನು ಕಂಡು ಬಿ.ವಿ.ಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದ ಗ್ರಾಮಾಂತರ ಸಿಪಿಐ ವಸಂತ್‌ ಕಂಡು ಗುಮಾನಿಗೊಂಡು ವಿಚಾರಿಸಿದಾಗ ಈತ ನಕಲಿ ಸಿಬಿಐ ಎಂದು ತಿಳಿದು ಬಂದಿದೆ. ಈತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂ​ಧಿಸಿದಂತೆ ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios