ಕ್ಯಾಲಿಫೋರ್ನಿಯಾ(ಮಾ.27): ಕೊರೋನಾ ವೈರಸ್ ಹುಟ್ಟಿದಾಗಲೇ ಹಲವು ರಾಷ್ಟ್ರಗಳು ಎಚ್ಚರಿಕೆ ವಹಿಸಬೇಕಿತ್ತು. ಹೋಗಲಿ ಬಿಡಿ, ನೊಬೆಲ್ ಪುರಸ್ಕೃತ, ಸ್ಟಾನ್‌ಪೋರ್ಡ್ ಯುನಿವರ್ಸಿಟಿ ಜೈವಿಕ ಭೌತಶಾಸ್ತ್ರಜ್ಞ ಮೈಕಲ್ ಲಿವಿಟ್ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರಣ ಲೆವಿಟ್ ಕೊರೋನಾ ಹರಡುವ ಮೊದಲೇ ಎಚ್ಚರಿ ನೀಡಿದ್ದರು. 80,000ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಲಿದೆ, 3,000ಕ್ಕೂ ಹೆಚ್ಚು ಜನರು ಸಾವಿಗೀಡಾಗಲಿದ್ದಾರೆ ಎಂದಿದ್ದರು.  ಇದೀಗ ಲಿವಿಟ್ ಅಂಕಿ ಅಂಶಗಳನ್ನು ದಾಟಿ ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. 

ಲಾಕ್‌ಡೌನ್ ಮಾಡಿದ್ರೆ ಸಾಕಾಗಲ್ಲ: ಭಾರತಕ್ಕೆ ವಾರ್ನಿಂಗ್ ಕೊಟ್ಟ ವಿಶ್ವಸಂಸ್ಥೆ

ಕೊರೋನಾ ವೈರಸ್ ಕುರಿತು ಎಚ್ಚರಿಕೆ ನೀಡಿದ್ದ ಮೈಕಲ್ ಲೆವಿಟ್ ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಕೋವಿಡ್ 19 ಸೋಂಕಿತ ರಾಷ್ಟ್ರಗಳು  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯ. ಈಗಾಗಲೇ ಹೆಚ್ಚಿನ ರಾಷ್ಟ್ರಗಳು ಇದನ್ನು ಪಾಲಿಸುತ್ತಿದೆ. ಮುಂದಿನ ವಾರದಿಂದ ಕೊರೋನಾ ವೈರಸ್ ಹರಡುವಿ ಪ್ರಮಾಣ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಶೀಘ್ರದಲ್ಲೇ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರಲಿದೆ. ಆದರೆ ಅಂತರ, ಶುಚಿತ್ವ ಸೇರಿದಂತೆ ಮುಂಜಾಗ್ರತ ಕ್ರಮಗಳು ಅತ್ಯಗತ್ಯ ಎಂದು ಮೈಕಲ್ ಲೆವಿಟ್ ಹೇಳಿದ್ದಾರೆ. ಕೊರೋನಾ ವೈರಸ್ ಚೀನಾ ದೇಶವನ್ನು ಹಿಂಡಿ ಹಿಪ್ಪೆ ಮಾಡಲಿದೆ ಎಂದು ತಜ್ಞರು, ವೈದ್ಯರು ಹೇಳುವ ಸೂಚಿಸುವ ಮೊದಲೇ ಲೆವಿಟ್ ಹೇಳಿದ್ದರು. ಇದೀಗ ಸಿಹಿ ಸುದ್ದಿ ನೀಡಿರುವುದು ಜನರಲ್ಲಿ ಕೊಂಚ ಆಶಾವಾದ ಮೂಡಿಸಿದೆ. ಹಾಗಂತ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.