ನವದೆಹಲಿ(ಏ. 05)  ದೇಶದ ಒಗ್ಗಟ್ಟು ತೋರಿಸಲು ಮತ್ತು ಕೊರೋನಾ ವಿರುದ್ಧದ ಹೋರಾಟ ಹೇಗಿದೆ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ದೀಪ ಬೆಳಗುವಿಕೆ ಕರೆಗೆ ಸಾರ್ಕ್ ದೇಶಗಳು ಕೈಜೋಡಿಸಿವೆ.

ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ವಿಯೆಟ್ನಾಂ, ಜಪಾನ್, ಜರ್ಮನಿ, ಟುನೇಶಿಯಾ, ಮೆಕ್ಸಿಕೋ ಸೇರಿದಂತೆ ಹಲವು ದೇಶಗಳು 9 ಗಂಟೆಗೆ 9 ನಿಮಿಷ ದೀಪ ಬೆಳಗುವ ಕಾರ್ಯಕ್ಕೆ ಕೈಜೋಡಿಸಿವೆ.

ಕೊರೋನಾ ಪರಿಣಾಮ; ಇದ್ದಕ್ಕಿದ್ದಂತೆ ಆತಂಕಕಾರಿ ಮಾಹಿತಿ ಕೊಟ್ಟ ಕೇಂದ್ರ ಆರೋಗ್ಯ ಇಲಾಖೆ

ಕೊರೋನಾ ವಿರುದ್ಧ ಸಮರ ಸಾರಿದ್ದ  ಕೇಂದ್ರ ಸರ್ಕಾರ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿತ್ತು. ಪರಿಸ್ಥಿತಿ ಬದಲಾವಣೆಗಳ ಹಂತ ತೆಗೆದುಕೊಳ್ಳುತ್ತಿರುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗುವಿಕೆಗೆ ಕರೆ ನೀಡಿದ್ದೆರು.