ನವದೆಹಲಿ(ಏ. 05) ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 4.1 ದಿನದಲ್ಲಿ ದ್ವಿಗಣವಾಗುತ್ತಿದೆ. ಒಂದು ವೇಳೆ ದೆಹಲಿ ಜಮಾತ್ ತಬ್ಲಿಘಿ ಪ್ರಕರಣಗಳು ಇಲ್ಲವಾಗಿದ್ದರೆ ಇದು 7.4 ದಿನ ಇರುತ್ತಿತ್ತು ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಅಂದರೆ ಜಮಾತ್ ಕಾರಣದಿಂದ ಯಾವ ಪ್ರಮಾಣದ ಆತಂಕ ಸೃಷ್ಟಿಯಾಗಿದೆ ಎಂಬುದನ್ನು ವಿವರಿಸಿದೆ.

ಕೇಂದ್ರ  ಆರೋಗ್ಯ ಇಲಾಖೆ ಜಾಯಿಂಟ್ ಸಕ್ರೆಟರಿ ಲಾವ್ ಅಗರ್ ವಾಲ್ ಈ ಮಾಹಿತಿ ನೀಡಿದ್ದಾರೆ. ಕಳೆದ ಶನಿವಾರದಿಂದ 472 ಕೊರೋನಾ ಸೋಂಕಿತ ಕೇಸುಗಳು ದೃಢವಾಗಿದ್ದು 11 ಕೊರೋನಾ ಸಾವು ಸಂಭವಿಸಿದೆ ಎಂದು ಅಗರ್ ವಾಲ್ ತಿಳಿಸಿದ್ದಾರೆ. ದೇಶದಲ್ಲಿ 3374 ಕೊರೋನಾ ಸೋಂಕಿತರ ಸಂಖ್ಯೆ ಇದ್ದರೆ 79 ಸಾವಾಗಿದೆ. 267 ಜನ ಚೇತರಿಕೆ ಕಂಡಿದ್ದಾರೆ.

ಆದರೆ ರಾಜ್ಯವಾರು ಲೆಕ್ಕ ಮತ್ತೊಂದು ಅಂಶವನ್ನು ತೆರೆದಿಡುತ್ತಿದೆ. ಎಲ್ಲ ರಾಜ್ಯಗಳನ್ನು ಸೇರಿಸಿದರೆ 3624 ಕೇಸು ದೃಢವಾಗಿದ್ದು 106 ಸಾವಾಗಿದ್ದರೆ 284 ಜನ ಚೇತರಿಸಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಂಕಿ ಅಂಶ ತಾಳೆಯಾಗುತ್ತಿಲ್ಲ.

ಕ್ಯಾಬಿನೇಟ್ ಸಕ್ರೆಟರಿ ರಾಜೀವ್ ಗೌಬಾ ಆಯ್ದ ಜಿಲ್ಲಾ ನ್ಯಾಯಾಧೀಶರು, ಎಸ್ ಪಿಗಳು, ಮೆಡಿಕಲ್ ಆಫೀಸರ್ಸ್ ರಾಜ್ಯದಲ್ಲಿ ನಿರ್ವಹಣೆ ನೋಡಿಕೊಳ್ಳುತ್ತಿರುವವರ ಸಭೆ ನಡೆಸಿದ್ದಾರೆ. ಒಂದು  ಕಡೆ ಕೊರೋನಾ ತನ್ನ ಸಂಖ್ಯೆಯನ್ನು ವ್ಯಾಪಿಸಿಕೊಂಡೆ ಸಾಗುತ್ತಿದ್ದರೆ ಇನ್ನೊಂದು ಕಡೆ ತಬ್ಲಿಘಿಗಳ ಆತಂಕ ಹೆಚ್ಚಾಗಿದೆ. ದೆಹಲಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬಂದವರು ಎಲ್ಲಿ ಹೋದರು ಎಂಬ ಪತ್ತೆ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ.