ನವದೆಹಲಿ(ಏ. 10) ಕೊರೋನಾ ವೈರಸ್ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರ ಹಿತ  ಕಾಪಾಡಲು ಬದ್ಧ ಎಂದು ತಿಳಿಸಿದ್ದಾರೆ.

ದೂರವಾಣಿ ಮೂಲಕ ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಮಾತನಾಡಿದ್ದಾರೆ. ಭಾರತೀಯ ಮೂಲದವರ ಸ್ಥಿತಿಗತಿಗಳ ವಿವರ ಪಡೆದುಕೊಂಡಿದ್ದಾರೆ ಮತ್ತು ಪಡೆದುಕೊಳ್ಳುತ್ತಿದ್ದಾರೆ. 

ಕೊರೋನಾ ಹುಟ್ಟಡಗಿಸಲು 3t ಸೂತ್ರ
 
ಭಾರತೀಯರ ಸ್ಥಿತಿಗತಿ ಗಂಭೀರವಾಗಿ ತೆಗೆದುಕೊಂಡ ಪ್ರಧಾನಿ, ಭಾರತೀಯರು ಯಾವ ವ್ಯವಸ್ಥೆಯಲ್ಲಿದ್ದಾರೆ ಎಂಬ ಮಾಹಿತಿ ತೆಗೆದುಕೊಂಡು ಅವರನ್ನು ಸರಿಯಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ

3.3ಮಿಲಿಯನ್ ಗೂ ಅಧಿಕ ಭಾರತೀಯ ಮೂಲದವರು ಗಲ್ಫ್ ರಾಷ್ಟ್ರಗಳಲ್ಲಿ ವಿವಿಧ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಮೋದಿ ಭಾರತೀಯ ರಾಯಭಾರಿಗಳ ಜತೆಗೂ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ

* ಮಾರ್ಚ್ 17 ರಂದು ಸೌದಿ ರಾಜ ಮೊಹಮದ್ ಬಿನ್ ಸಲ್ಮಾನ್ ಜತೆ ಮೋದಿ ಮಾತನಾಡಿದ್ದಾರೆ.

* ಮಾರ್ಚ್ 26 ರಂದು ಅಬುದಾಬಿಯ ರಾಜ ಶೇಕ್ ಮೊಹಮದ್ ಬಿನ್ ಜಯೀದ್ ಅಲ್ ನಹ್ಯಾನ್ ಜತೆ ಮೋದಿ ಮಾತು

ಕೊರೋನಾ; ಹೈಕೋರ್ಟ್ ಗೆ ವರದಿ ಸಲ್ಲಿಸಿದ ಸರ್ಕಾರ

* ಮಾರ್ಚ್ 26ರಂದೇ ಕತಾರ್ ನ ಅಮೀರ್ ಶೇಖ್ ತಮೀಮ್ ಬಿನ್ ಹಮಾದ್ ಥಾಯಿ ಅವರೊಂದಿಗೆ ಸಂಭಾಷಣೆ

* ಕುವೈತ್ ಪ್ರಧಾನಿ ಶೇಖ್ ಸಭಾ ಅಲ್-ಕಲೀದ್ ಅಲ್-ಹಮೀದ್ ಅವರೊಂದಿಗೆ ಏಪ್ರಿಲ್ 1 ರಂದು ಕೊರೋನಾ ಸಂಕಷ್ಟದ ಚರ್ಚೆ

* ಬಹರೇನ್ ರಾಜ್ ಹಮೀದ್ ಬಿನ್ನ ಇಸ್ಲಾ ಅಲ್ ಖಲೀಫಾ ಅವರೊಂದಿಗೆ ಏಪ್ರಿಲ್ 6 ರಂದು ಮಾತುಕತೆ

 

ಇಂಗ್ಲೀಷ್‌ ನಲ್ಲಿಯೂ ಓದಿ