ಫ್ರಾಂಕ್‌ಫರ್ಟ್, (ಮಾ.29):ಕೊರೋನಾ ವೈರಸ್ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವುದರಿಂದ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಸಚಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಥಾಮಸ್ ಸ್ಕಾಫರ್ (54) ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫೀಯರ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಲಾಕ್‌ಡೌನ್: ಎಣ್ಣೆ ಸಿಗದೇ ಕರ್ನಾಟಕದಲ್ಲಿ 6 ಜನರು ಆತ್ಮಹತ್ಯೆ

ಥಾಮಸ್ ಸ್ಕಾಫರ್ ಅವರ ಮೃತ ದೇಹ ಶನಿವಾರದಂದು ರೈಲ್ವೆ ಹಳಿಯೊಂದರ ಬಳಿ ಪತ್ತೆಯಾಗಿದೆ ಎಂದು ವೀಸ್‌ಬಿಡನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಥಾಮಸ್ ಸ್ಕಾಫರ್ ಸಾವಿನಿಂದ ಆಘಾತವಾಗಿದೆ. ಅವರು ಕಳೆದ 10 ವರ್ಷಗಳಿಂದ ನಮ್ಮ ರಾಜ್ಯದ ಹಣಕಾಸು ಮಂತ್ರಿಯಾಗಿ ಕಾರ್ಯ ನಿಭಾಯಿಸುತ್ತಿದ್ದರು. ಕೊರೋನಾ ಎದುರಾದಗ ಆರ್ಥಿಕತೆ ಸಮಸ್ಯೆಯನ್ನು ಸರಿಮಾಡಲು ಹಗಲು-ರಾತ್ರಿ ಶ್ರಮಿಸುತ್ತಿದ್ದರು ಎಂದು ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫೀಯರ್ ಹೇಳಿದ್ದಾರೆ.

ಇನ್ನು ಜರ್ಮನಿಯಲ್ಲಿ ಇದುವರಗೆ  52,547 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 389 ಜನರು ಸಾವನ್ನಪ್ಪಿದ್ದಾರೆ.