ಸಿಂಗಾಪುರ್(ಏ.10): ವಿಡಿಯೋ ಕಾನ್ಫರೆನ್ಸ್‌ಗೆ ಬಳಸಲಾಗುವ ಫೇಮಸ್ ಝೂಮ್‌ ಬಳಸುವುದನ್ನು ಶಿಕ್ಷಕರು ನಿಲ್ಲಿಸಿದ್ದಾರೆ. ಮನೆಯಲ್ಲೇ ಇದ್ದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಳಸಲಾಗುತ್ತಿದ್ದ ಝೂಮ್‌ನಲ್ಲಿ ಮಕ್ಕಳು ಫಾಠ ಕೇಳುತ್ತಿರುವಾಗಲೇ ಆಶ್ಲೀಲ ಚಿತ್ರಗಳು ಪರದೆಯ ಮೇಲೆ ಮೂಡಿಬಂದಿದೆ.

ಝೂಮ್ ಹ್ಯಾಕ್‌ ಮಾಡಿದ ಹ್ಯಾಕರ್ಸ್ ಪಾಠ ನಡೆಯುವಾಗಲೇ ಅಶ್ಲೀಲ ಚಿತ್ರಗಳನ್ನು ಝೂಮ್‌ನಲ್ಲಿ ಹರಿಬಿಟ್ಟಿದ್ದಾರೆ. ಝೂಮ್‌ಗೆ ಸಂಬಂಧಿಸಿದ ಭದ್ರತಾ ವಿಚಾರಗಳು ಸರಿಯಾಗುವ ತನಕ ಆನ್‌ಲೈನ್‌ ತರಗತಿಗಳೂ ನಡೆಯುವುದಿಲ್ಲ ಎಂದು ಸಿಂಗಾಪುರದ ಶಿಕ್ಷಣ ಇಲಾಖೆ ಗುರುವಾರ ತಿಳಿಸಿದೆ.

ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಪೊಲೀಸ್ ವರದಿ ತಯಾರಿಸುವುದಾಗಿ ಟೆಕ್ನಾಲಜಿ ಶಿಕ್ಷಣ ಆರೋನ್ ತಿಳಿಸಿದ್ದಾರೆ. ಮನೆಯಲ್ಲೇ ಇದ್ದು ಕಲಿಯುವ ವ್ಯವಸ್ಥೆ ಮುಂದುವರಿಯಲಿದ್ದು, ಕಲೆವು ಬೇರೆ ಫ್ಲಾಟ್‌ಫಾರ್ಮಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಝೂಮ್ ಜೊತೆ ಚರ್ಚಿಸಿ ಸೆಕ್ಯುರಿಟಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಹಳೆ ವಿದ್ಯಾರ್ಥಿನಿ ಜೊತೆ ರಾಸಲೀಲೆಯಾಡಿದ್ದ ಶಿಕ್ಷಕ ಅಮಾನತು

ಸೆಕೆಂಡರಿ ವಿಭಾಗದ ವಿದ್ಯಾರ್ಥಿಗಳಿಗೆ ಜಿಯೋಗ್ರಫಿ ಪಾಠ ನಡೆಸುವ ವೇಳೆ ಹ್ಯಾಕರ್ಸ್‌ ಶಿಶ್ನದ ಫೋಟೋವನ್ನು ಝೂಮ್‌ಗೆ ಹರಿಯಬಿಟ್ಟಿದ್ದಾರೆ. ಆನ್‌ಲೈನ್‌ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರಲ್ಲಿ ಹ್ಯಾಕರ್ಸ್ ತಮ್ಮ ಎದೆಯ ಭಾಗಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಇದನ್ನು ತನ್ನ ತಾಯಿಗೆ ತಿಳಿಸಿದ್ದಾಳೆ.

ಸ್ಟೂಡೆಂಟ್ ಜೊತೆ ಶಿಕ್ಷಕನ ಲವ್ವಿ ಡವ್ವಿ; ರಾಸಲೀಲೆ ಫೋಟೋಗಳು ವೈರಲ್!

"