ಮೈಸೂರು(ಮಾ.03): ಹಳೆಯ ವಿದ್ಯಾರ್ಥಿ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಹಳೆ ವಿದ್ಯಾರ್ಥಿನಿ ಜೊತೆ ಸರಸವಾಡಿದ್ದ ಶಿಕ್ಷಕನ ಫೋಟೋಗಳು ವೈರಲ್ ಆಗ್ತಿದ್ದಂತೆ ಶಿಕ್ಷಕನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹಳೆಯ ವಿದ್ಯಾರ್ಥಿನಿ ಜತೆ ಶಿಕ್ಷಕ ಅಕ್ರಮ ಸಂಬಂಧ ಪ್ರಕರಣದಲ್ಲಿ ಆರೋಪಿ ಶಿಕ್ಷಕ ಸಿದ್ದರಾಜುನನ್ನು ಅಮಾನತು ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬಂದ ಮರು ದಿನವೇ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಸ್ಟೂಡೆಂಟ್ ಜೊತೆ ಶಿಕ್ಷಕನ ಲವ್ವಿ ಡವ್ವಿ; ರಾಸಲೀಲೆ ಫೋಟೋಗಳು ವೈರಲ್!

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಿದ್ದರಾಜುನನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ. ನಿನ್ನೆಯಷ್ಟೇ ಸಾರ್ಕಾರಿ ಶಾಲಾ ಶಿಕ್ಷಕ ಸಿದ್ದರಾಜು ಹಳೆಯ ವಿದ್ಯಾರ್ಥಿನಿ ಜತೆಗಿದ್ದ ಅಶ್ಲೀಲ ಚಿತ್ರಗಳು ವೈರಲ್ ಆಗಿದ್ದವು. ಶಿಕ್ಷಕನನ್ನು ವಜಾ ಮಾಡುವಂತೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು.