ಲಂಡನ್‌(ಏ.10): ಕೊರೋನಾ ವೈರಸ್‌ನಿಂದ ವಿಶ್ವಾದ್ಯಂತ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 50 ಕೋಟಿ ಜನರು ಬಡತನದ ಕೂಪಕ್ಕೆ ತಳ್ಳಲ್ಪಡುವ ಭೀತಿ ಇದೆ ಎಂದು ಜಾಗತಿಕ ದತ್ತಿ ಸಂಸ್ಥೆಯಾದ ‘ಆಕ್ಸ್‌ಫಾಮ್‌’ ಆತಂಕ ವ್ಯಕ್ತಪಡಿಸಿದೆ.

ಶ್ರೀಮಂತ ದೇಶಗಳು ಕೊರೋನಾ ಹೊಡೆತಕ್ಕೆ ತತ್ತರಿಸಿರುವ ಬಡ ದೇಶಗಳ ನೆರವಿಗೆ ಧಾವಿಸಬೇಕು. ಇಲ್ಲದೇ ಹೋದರೆ 50 ಕೋಟಿ ಜನರು ಬಡತನಕ್ಕೆ ನೂಕಲ್ಪಡುತ್ತಾರೆ. ನೆರವಿಗೆ ಶ್ರೀಮಂತ ದೇಶಗಳು ಧಾವಿಸದೇ ಇದ್ದರೆ ಬಡತನದ ವಿರುದ್ಧದ ಜಾಗತಿಕ ಹೋರಾಟಕ್ಕೆ ಹಿನ್ನಡೆಯಾಗಲಿದೆ ಎಂದು ಆಕ್ಸ್‌ಫಾಮ್‌ ಹೇಳಿದೆ.

ಮೋದಿಯನ್ನು ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ

ಇದಕ್ಕಾಗಿ ಲಂಡನ್‌ನ ಕಿಂಗ್ಸ್‌ ಕಾಲೇಜು ಹಾಗೂ ಆಸ್ಪ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವನ್ನು ಅದು ಉಲ್ಲೇಖಿಸಿದೆ. ಅಧ್ಯಯನದಲ್ಲಿ ಜಗತ್ತಿನ ಶೇ.6ರಿಂದ 8ರಷ್ಟುಜನಸಂಖ್ಯೆ ಬಡತನ ಅಪ್ಪಿಕೊಳ್ಳಲಿದೆ.

ಕೊರೋನಾ ಕಾರಣ ಸರ್ಕಾರಗಳು ತಮ್ಮ ದೇಶವನ್ನೇ ಲಾಕ್‌ಡೌನ್‌ ಮಾಡುವ ಪರಿಣಾಮ ಇದಾಗಿದೆ ಎಂದು ಹೇಳಲಾಗಿತ್ತು. ಬಾಂಗ್ಲಾದೇಶದಲ್ಲಿ ಈಗಾಗಲೇ ಶೇ.80ರಷ್ಟುಗಾರ್ಮೆಂಟ್ಸ್‌ ನೌಕರರನ್ನು ವೇತನ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ವರದಿ ಹೇಳಿದೆ.