ಮೋದಿಯನ್ನು ಹನುಮಂತನಿಗೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ
ಹೈಡ್ರಾಕ್ಸಿಕ್ಲೋರೋಕ್ವಿನ್ಗೆ ಕೊರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬ ಬೆನ್ನಲ್ಲಿಯೇ ರಫ್ತು ಈ ಔಷಧಿ ಮೇಲಿನ ನಿಷೇಧವನ್ನು ಭಾರತ ಭಾಗಶಃ ಹಿಂಪಡೆದಿದೆ. ಅಮೆರಿಕ ಸೇರಿದಂತೆ ಕೊರೋನಾ ವೈರಸ್‌ನಿಂದ ಬಾಧಿಸ್ಲಪಟ್ಟ ಹಲವಾರು ದೇಶಗಳಿಗೆ ಭಾರತ ಈ ಔಷಧಿಯನ್ನು ರಫ್ತು ಮಾಡುತ್ತಿದೆ. ಇದೇ ಸಂದರ್ಭ ಬ್ರೆಜಿಲ್‌ನ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತನಿಗೆ ಹೋಲಿಸಿದ್ದಾರೆ.
ದೆಹಲಿ(ಏ.10): ಹೈಡ್ರಾಕ್ಸಿಕ್ಲೋರೋಕ್ವಿನ್ಗೆ ಕೊರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂಬ ಬೆನ್ನಲ್ಲಿಯೇ ರಫ್ತು ಈ ಔಷಧಿ ಮೇಲಿನ ನಿಷೇಧವನ್ನು ಭಾರತ ಭಾಗಶಃ ಹಿಂಪಡೆದಿದೆ. ಅಮೆರಿಕ ಸೇರಿದಂತೆ ಕೊರೋನಾ ವೈರಸ್‌ನಿಂದ ಬಾಧಿಸ್ಲಪಟ್ಟ ಹಲವಾರು ದೇಶಗಳಿಗೆ ಭಾರತ ಈ ಔಷಧಿಯನ್ನು ರಫ್ತು ಮಾಡುತ್ತಿದೆ. ಇದೇ ಸಂದರ್ಭ ಬ್ರೆಜಿಲ್‌ನ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತನಿಗೆ ಹೋಲಿಸಿದ್ದಾರೆ.
ಮಲೇರಿಯಾ ಔಷಧಿಯನ್ನು ತಮ್ಮ ದೇಶಕ್ಕೂ ಕಳುಹಿಸಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಾಮಾಯಣದ ಬಗ್ಗೆ ಪ್ರಸ್ತಾಒಇಸಿರುವ ಬ್ರೆಜಿಲ್ ಅಧ್ಯಕ್ಷ ರಾಮಾಯಣದಲ್ಲಿ ಲಕ್ಷಮಣನನ್ನು ಉಳಿಸಲು ಹನುಮಂತ ಹಿಮಾಲಯದಿಂದ ಸಂಜೀವಿನಿ ಹೊತ್ತು ತಂದಿರುವುದರ ಬಗ್ಗೆಯೂ ಬರೆದಿದ್ದಾರೆ.
ಭಾರತ ಔಷಧಿ ರಫ್ತು ಮಾಡದಿದ್ದರೆ ಪ್ರತೀಕಾರ: ಟ್ರಂಪ್ ಎಚ್ಚರಿಕೆ!
ಕೊರೋನಾ ವೈರಸ್ ವಿರುದ್ಧ ಮಲೇರಿಯಾ ಔಷಧ ಕೆಲಸ ಮಾಡುವುದರಿಂದ ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧವನ್ನು ಭಾರತ ಭಾಗಶಃ ರದ್ದುಪಡಿಸಿದೆ. ಕೊರೋನಾ ವೈರಸ್ ಸೋಂಕಿನಿಂದ ತತ್ತರಿಸಿರುವ ಹಲವು ರಾಷ್ಟ್ರಗಳಿಗೆ ಭಾರತ ಈಗ ಔಷಧ ರಫ್ತು ಮಾಡುತ್ತಿದೆ. ಲಾಟಿನ್ ಅಮೆರಿಕದ ದೊಡ್ಡ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ 14000 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿ 660 ಜನ ಕೊರೋನಾ ಮಾರಿಗೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಕೊರೋನಾ ಸುಮಾರು 75000 ಜನರನ್ನು ಕೊಂದಿದ್ದು, 13 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದಾರೆ.
ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!
ರಾಮಾಯಣದ ಜೊತೆಗೇ ಜೀಸಸ್ ಕ್ರೈಸ್ಟ್ ಬಗ್ಗೆಯೂ ಬ್ರೆಜಿಲ್ ಅಧ್ಯಕ್ಷ ಪ್ರಸ್ತಾಪಿಸಿದ್ದು, ಎರಡೂ ದೇಶಗಳು ಜೊತೆಯಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡಿ ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮನ ಸಹೋದರ ಲಕ್ಷ್ಮಣನ ಜೀವ ಉಳಿಸಲು ಹನುಮಂತ ಸಂಜೀವಿನಿ ತಂದಂತೆ, ಜೀಸಸ್ ರೋಗಿಗಳ ಶುಶ್ರೂಶೆ ಮಾಡಿ ಬಾರ್ಟಿಮಿಯುವಿನ ಅಂಧತ್ವ ನಿವಾರಿಸಿದಂತೆ ಭಾರತ ಹಾಗೂ ಬ್ರೆಜಿಲ್ ಪರಸ್ಪರ ಸಹಕಾರದೊಂದಿಗೆ ಈ ಮಹಾಮಾರಿ ವಿರುದ್ಧ ಗೆಲ್ಲಲಿದೆ ಎಂದಿದ್ದಾರೆ. ರಾಮಾಯಣದ ಪ್ರಕಾರ ಹನುಮಂತರ ಲಕ್ಷ್ಮಣನ ಜೀವ ಉಳಿಸಲು ಹಿಮಾಲಯ ಪರ್ವತದಿಂದ ಸಂಜೀವಿನಿ ಮೂಲಿಕೆಯನ್ನು ತಂದಿದ್ದ.
"