ಲಂಡನ್‌(ಏ.03): ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ಸೋಂಕು ಗುರುವಾರ ಮತ್ತೊಂದು ನೆನಪಿಸಿಕೊಳ್ಳಬಾರದ ದಾಖಲೆ ಮುಟ್ಟಿದೆ. ವಿಶ್ವದ 200 ದೇಶಗಳನ್ನು ಆವರಿಸಿಕೊಂಡಿರುವ ಕೊರೋನಾ ಇದೀಗ 9.70 ಲಕ್ಷ ಜನರಿಗೆ ತಗುಲಿದೆ.

ಜೊತೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 50000 ದಾಟಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೇವಲ 3 ತಿಂಗಳ ತರುವಾಯ ಇಡೀ ವಿಶ್ವಕ್ಕೆ ವ್ಯಾಪಿಸಿದ್ದ ಸೋಂಕು ಇದೀಗ ಯುರೋಪ್‌ ದೇಶಗಳನ್ನೇ ಹೆಚ್ಚು ಆವರಿಸಿಕೊಂಡಿದೆ. ಒಟ್ಟು ಸೋಂಕಿತರ ಪೈಕಿ 5 ಲಕ್ಷಕ್ಕೂ ಹೆಚ್ಚು ಮತ್ತು ಸಾವನ್ನಪ್ಪಿದ 35000ಕ್ಕೂ ಹೆಚ್ಚು ಜನ ಯುರೋಪಿಯನ್ನೇ ಎಂಬುದು ಆತಂಕಕಾರಿ ವಿಷಯ.

ಕೊರೋನಾ ಭೀತಿ: ನಾವ್‌ ಶವ​ಸಂಸ್ಕಾ​ರ ಮಾಡಲ್ಲ ಎಂದ ಮನೆ​ಯ​ವರು!

ಸದ್ಯ 2.20 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಇಟಲಿ ಮತ್ತು ಸ್ಪೇನ್‌ 2, 3ನೇ ಸ್ಥಾನದಲ್ಲಿವೆ. ಇನ್ನು 13000ಕ್ಕೂ ಹೆಚ್ಚು ಸಾವಿನೊಂದಿಗೆ, ಮಡಿದವರ ಪಟ್ಟಿಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ.

ಸ್ಪೇನ್‌, ಫ್ರಾನ್ಸ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಗುರುವಾರ ಒಂದೇ ದಿನ ವಿಶ್ವದಾದ್ಯಂತ 35000ಕ್ಕೂ ಹೆಚ್ಚು ಹೊಸ ಕೇಸು ಬೆಳಕಿಗೆ ಬಂದಿದ್ದು, 3000 ಜನ ಸಾವನ್ನಪ್ಪಿದ್ದಾರೆ. ಸೋಂಕು ನಿಗ್ರಹದ ಕ್ರಮವಾಗಿ ವಿಶ್ವದ 780 ಕೋಟಿ ಜನಸಂಖ್ಯೆ ಪೈಕಿ ಇದೀಗ ಅಂದಾಜು 390 ಕೋಟಿ ಜನರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ.