Asianet Suvarna News Asianet Suvarna News

ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ

ಕೊರೋನಾ ಮಾಹಾಮಾರಿ ಬಂದು ಬಡ, ನಿರ್ಗತಿಕರ ಅನ್ನ ಕಸಿದುರುವುದ ಮಾತ್ರವಲ್ಲದೇ ರೈತರ ಬದುಕಿನ ಮೇಲೆ ಬರೆ ಹಾಕಲಾರಂಬಿಸಿದೆ. ಅನ್ನದಾತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಲ್ಲದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದರಿಂದ ಎಚ್ಚೆತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸಭೆ ಕರೆದು ರೈತರಿಗೆ ಅನುಕೂಲವಾಗುವಂತ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅವುಗಳು ಈ ಕೆಳಗಿನಂತಿವೆ.
Yediyurappa takes Some decisions to protect farmers Who Faced Problems Coronavirus Lockdown
Author
Bengaluru, First Published Apr 1, 2020, 3:27 PM IST
ಬೆಂಗಳೂರು, (ಏ.01): ಕೊರೋನಾ ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ವಾರದಿಂದ ರೈತರು ತೊಂದರೆಯಲ್ಲಿ ಸಿಲುಕಿದ್ದಾರೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ, ಬೇಡಿಕೆ ಮತ್ತು ಮಾರುಕಟ್ಟೆ ಲಭ್ಯವಾಗದೆ ಬೆಳೆಗಳನ್ನು ರೈತ ರಸ್ತೆಗೆ ಚೆಲ್ಲಿ ಹೋಗುತ್ತಿರುವ ಕುರಿತು ಸಾಲು ಸಾಲು ವರದಿ ಮಾಧ್ಯಮಗಳಲ್ಲಿ ಬಿತ್ತಾರವಾಗಿದ್ದವು

ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಇಂದು (ಬುಧವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರುಗಳು ಜೊತೆಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ  ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. 

15 ಕೆಜಿಗೆ 10 ರು, ಟೊಮೆಟೋ ರಸ್ತೆಗೆ ಸುರಿದ ರೈತರು

ಬಳಿಕ ಸಿಎಂ ಬಿಎಸ್‌ವೈ ಸುದ್ದಿಗಾರರೊಂದಿಗೆ ಮಾತನಾಡಿದ ಸಭೆಯ ತೆಗೆದುಕೊಂಡ ತೀರ್ಮಾನಗಳನ್ನು ತಿಳಿಸಿದರು. 

* ಕಳೆದ ಒಂದು ವಾರದಿಂದ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತವಾಗಿತ್ತು. ಇದೀಗ ವಸ್ತುಗಳ ಸರಬರಾಜನ್ನು ಮುಂದುವರೆಸಲು ಸೂಚನೆ ನೀಡಲಾಗಿದೆ.

* ಹಣ್ಣು-ತರಕಾರಿ ಸರಬರಾಜಿಗೆ ಸಮಸ್ಯೆ ಆಗದಂತೆ ಪೊಲೀಸರಿಗೆ ತಿಳಿಸಲಾಗಿದೆ. ಇನ್ನೂ ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ.

* ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ. ಆದರೆ, ಜನ ಒಮ್ಮೆಲೆ ಹೆಚ್ಚು ಸಂಗ್ರಹಿಸುವ ಅಗತ್ಯ ಇಲ್ಲ.  ವಸ್ತುಗಳ ಖರೀದಿಯ ನೆಪದಲ್ಲಿ ಜನ ಗುಂಪುಗೂಡುವಂತಿಲ್ಲ. ಸಾಮಾಜಿಕ ಅಂತರದಿಂದ ವಸ್ತುಗಳನ್ನು ಖರೀದಿ ಮಾಡಬೇಕು

* ರೈತರ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಸಾಗಿಸಲೂ ಸಹ ಅನುಮತಿಸಲಾಗುತ್ತಿದೆ. ಸರಕು ಸಾಗಾಣೆ ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ತಿಳಿಸಲಾಗಿದೆ. 

* ಕೆಎಂಎಫ್‌ನಿಂದ ಬರುವ ಹೆಚ್ಚುವರಿ ಹಾಲನ್ನು ಖರೀದಿಸಿ ಕೊಳಗೇರಿ ಪ್ರದೇಶಗಳಲ್ಲಿ ಉಚಿತವಾಗಿ ಹಾಲು ವಿತರಣೆ ಮಾಡಲೂ ತೀರ್ಮಾನ ತೆಗೆದುಕೊಳ್ಳಲಾಗಿದೆ.

* ಅಕ್ಕಿ ಮಿಲ್, ದಾಲ್ ಮಿಲ್ ತೆರೆಯಲು ಸೂಚಿಸಲಾಗಿದೆ. ರೇಷ್ಮೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಬೆಳೆ ನಷ್ಟವಾದ ಕಾರಣ ಆತ್ಮಹತ್ಯೆಗೆ ಶರಣಾದ (ಕಲಬುರಗಿ) ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದರು.
Follow Us:
Download App:
  • android
  • ios