ಕೊರೋನಾ ಭೀತಿ: ಬೆಂಗ್ಳೂರು ಬಿಟ್ಟು ಹಳ್ಳಿಕಡೆ ಹೊರಟವರು ಮಸಣ ಸೇರಿದ್ರು...!
ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಅನಿರ್ವಾರ್ಯವಾಗಿ ಲಾಕ್‌ಡೌನ್ ಮಾಡಿದೆ. ಮತ್ತೊಂದೆಡೆ ನಗರವಾಸಿಗಳು ಹಳ್ಳಿಗೆ ಹೋಗ್ಬೇಡಿ ಎಂದು ಮನವಿ ಮಾಡಿದ್ರು, ಕೇಳದೇ ಹಳ್ಳಿಗೆ ಹೋಗುತ್ತಿದ್ದ ಕುಟುಂಬದ ಕಾರು ಅಪಘಾತಕ್ಕೀಡಾಗಿದೆ.
ಬಾಗಲಕೋಟೆ, (ಮಾ.24): ಯಾರು ಮನೆಯಿಂದ ಹೊರಗಡೆ ಬರಬೇಡಿ. ನಗರವಾಸಿಗಳು ಹಳ್ಳಿಗೆ ಹೋಗ್ಬೇಡಿ ಎಂದು ಎಷ್ಟು ಮನವಿ ಮಾಡಿಕೊಂಡರು ಕೇಳದೇ ಹೊರಟವರು ರಸ್ತೆ ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಇಂದು (ಮಂಳವಾರ) ಬೆಳ್ಳಂಬೆಳಗ್ಗೆ ಕಾರು ಅಪಘಾತ ಸಂಭವಿಸಿ ಮೂವರರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಕೊರೋನಾ ಬಗ್ಗೆ ಜಾಗೃತಿ; ಭಾರತೀಯರಿಗೆ ಚಾಲೆಂಜಿಂಗ್ ಸ್ಟಾರ್ ಮನವಿ!
ಬೆಂಗಳೂರಿನಿಂದ ಬೀದರ್‌ಗೆ ಈ ಕುಟುಂಬ ಕಾರಿನಲ್ಲಿ ತೆರಳುತ್ತಿತ್ತು. ಆದ್ರೆ, ಕಾರು ಬಾಗಲಕೋಟೆ ಜಿಲ್ಲೆಯ ಹಿರೇಕೊಡಗಲಿ ಕ್ರಾಸ್ ಬಳಿ ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಬಸವಣ್ಣೆಪ್ಪ (81), ಸುವಣಾ೯ (32) ಮತ್ತು ಸವಿತಾ ಮೃತ ದುದೈ೯ವಿಗಳು. ಗಾಯಗೊಂಡ ಜಾಹ್ನವಿ, ಯಶ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಪ್ರಾಣಾಪಾಯದಿಂದ ಚಾಲಕ ಪ್ರಭು ಪಾರಾಗಿದ್ದು,ಸ್ಥಕ್ಕೆ ಇಳಕಲ್ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರೋನಾ ಭೀತಿಯಿಂದಾಗಿ ಬೆಂಗಳೂರಿನಿಂದ ಇಳಕಲ್ ಮೂಲಕ ಬೀದರ್‌ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಒಂದು ವೇಳೆ ಇವರು ಬೆಂಗಳೂರಿನಲ್ಲೇ ಇದ್ದಿದ್ದರೇ ಪ್ರಾಣ ಉಳಿತ್ತಿತ್ತು.