ಬೆಂಗಳೂರು(ಏ.03): ಪ್ರಧಾನಿ ಮೋದಿ ಏ.05ರಂದು ಎಲ್ಲರೂ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಿ ಎಂದ ಸೂಚನೆ ನೀಡಿರುವುದಕ್ಕೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಟಾಂಗ್ ಕೊಟ್ಟಿದ್ದಾರೆ.

ಮೋದಿ ಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾನ್ಯ ಮೋದಿಯವರು ಏಪ್ರಿಲ್ 5 ರ ರಾತ್ರಿ 9 ಗಂಟೆಗೆ 9 ನಿಮಿಷಗಳು ಮನೆಯ ದೀಪಗಳ ಸ್ವಿಚ್ ಅಫ್ ಮಾಡಲು ರಾಷ್ಟ್ರವನ್ನು ಕೋರಿದ್ದಾರೆ. 130 ಕೋಟಿ ಭಾರತೀಯರನ್ನು ಮಾನ್ಯ ಮೋದಿ ಮರುಳು ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9ನಿಮಿಷ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮೋದಿ ಭಾರತೀಯ ವಿದ್ಯುತ್ ಮಂಡಳಿಗೆ ನಿರ್ದೇಶನ ನೀಡಬಹುದು! ಭಾರತದ ಜನರು ಮೂರ್ಖರೇ! ಲಕ್ಷಾಂತರ ಸಂಖ್ಯೆಯಲ್ಲಿ ಸಿಲುಕಿರುವ ದಿನಕೂಲಿ ನೌಕರರನ್ನು ಅವರವರ ಮನೆಗಳಿಗೆ ಸೇರಿಸುವ ವ್ಯವಸ್ಥೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ರೈತರಿಗೆ ದೇಶಾಧ್ಯಂತ ಆಗುತ್ತಿರುವ ನಷ್ಟವನ್ನು ಭರಿಸಲಿ. ಬಾರತ ಸರ್ಕಾರದ ಗುಪ್ತಚರ ಇಲಾಖೆ ಸಂಪೂರ್ಣ ವಿಪಲವಾಗಿದೆ. ಅಮೆರಿಕ ಅಧ್ಯಕ್ಷ ಭಾರತ ಪ್ರವಾಸವನ್ನು ರದ್ದುಗೊಳಿಸಿ, ವಿದೇಶದಿಂದ ಬರುವವರಿಗೆ ನಿರ್ಬಂಧಗಳನ್ನು  ವಿಧಿಸಿದ್ದಾರೆ ಬಾರತಕ್ಕೆ ಈ ಪರಿಸ್ಥಿತಿ ವದಗಿಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕ್ವಾರೆಂಟೈನ್ ಉಲ್ಲಂಘಿಸಿದವನಿಂದ ಸೋಂಕಿತರ ಚಿಕಿತ್ಸಾವೆಚ್ಚ ವಸೂಲಿ

ವಿದೇಶದಲ್ಲಿ ಬಾಕಿಯಾಗುವ ಭಾರತಿಯರಿಗೆ ಬಾರತಕ್ಕೆ ವಾಪಾಸ್ ಆಗುವ ನಿರ್ಧಾರವನ್ನು ಸರ್ಕಾರ ಪ್ರಕಟಿಸುವವರಿಗೂ ಅವರ ಸಂಪೂರ್ಣ ಖರ್ಚುಗಳನ್ನು ಭಾರತ ಸರ್ಕಾರ ಭರಿಸುವ ನಿರ್ಧಾರ ಕೈಗೊಳ್ಳಬೇಕಿತ್ತು. ವೆಂಟಿಲೇಟರ್ಸ್ ಖರೀದಿ, ಟೆಸ್ಟಿಂಗ್ ಕಿಟ್, ಸಾಲದ ಈ.ಎಂ.ಐ ಮುಂದೂಡಿಕೆ ಕಥೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.