ಬೆಂಗಳೂರು(ಏ.03): ಕೊರೋನಾ ವೈರಸ್‌ ವಿಚಾರದಲ್ಲಿ ರಾಜಕೀಯ ಲಾಭ ಹುಡುಕಿದವರು ಬಿಜೆಪಿಯವರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ. 

 

ಈ ಬಗ್ಗೆ ಗುರುವಾರ ರಾತ್ರಿ ಸರಣಿ ಟ್ವೀಟ್‌ ಮಾಡಿರುವ ಅವರು, ಈ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ. ಪೂರ್ವ ತಯಾರಿ ಇಲ್ಲದೇ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಯಿತು. ಅಧಿವೇಶನ ಮುಂದೂಡಲು ಹೇಳಿದರೂ ಮುಂದೂಡಲಿಲ್ಲ. ಜನತಾ ಕರ್ಫ್ಯೂ ಬಳಿಕ ಚಪ್ಪಾಳೆ ತಟ್ಟಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

 

ಕೊರೋನಾ ಆತಂಕ: ಸಂಸದರ ನಿಧಿ ಪಿಎಂ ಫಂಡ್‌ಗೆ ಸಿದ್ದರಾಮಯ್ಯ ಆಕ್ರೋಶ

ವಿಮಾನ ನಿಲ್ದಾಣಗಳಲ್ಲಿ ಹೊರದೇಶದಿಂದ ಬರುವವರ ನಿಗಾ ಇಡಲಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚನಾತ್ಮಕ ಟೀಕೆ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದು ಅವರು ಹರಿಹಾಯ್ದಿದ್ದಾರೆ.