ಕಳೆದು ಹೋದ ಓದುಗ ಮತ್ತೆ ಹುಟ್ಟಿಕೊಂಡ- ಪವನ್‌ ಒಡೆಯರ್‌

ನಾನು ದೊಡ್ಡ ಓದುಗ ಅನ್ನೋದನ್ನ ಶಾಲೆ- ಕಾಲೇಜಿನಲ್ಲಿದ್ದಾಗಲೇ ಗೊತ್ತಿತ್ತು. ಯಾಕೆಂದರೆ ಆಗ ನಾನು ಶಾಲಾ-ಕಾಲೇಜಿನ ಪುಸ್ತಕಗಳನ್ನು ಓದುವುದಕ್ಕಿಂತ ಬಾಲಮಂಗಳ,

ಪತ್ತೆದಾರಿ ಕತೆಗಳ ಪುಸ್ತಕಗಳನ್ನೇ ಓದಿದ್ದು ಹೆಚ್ಚು. ನನ್ನ ಓದಿನ ಅರಿವು ವಿಸ್ತರಿಸಿದ್ದೇ ಬಾಲಮಂಗಳ ಪುಸ್ತಕ. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ನನ್ನೊಳಗಿನ ಓದುಗ ಮರೆಯಾಗಿಟ್ಟಿಬಿಟ್ಟಿದ್ದ. ಇಪ್ಪತ್ತನಾಲ್ಕು ಗಂಟೆಯೂ ಸಿನಿಮಾ, ಸಿನಿಮಾ ಅಂತ ಓಡಾಡುತ್ತಿದ್ದೆ. ಈ ಕೊರೋನಾ ಬಂದು ಯಾರನ್ನೂ ಮನೆಯಿಂದ ಆಚೆ ಹೋಗದಂತೆ ಮಾಡಿದೆ. ಈಗ ಕಳೆದು ಹೋಗಿದ್ದ ಆ ಓದುಗ ಮತ್ತೆ ಎದ್ದು ಬಂದಿದ್ದಾನೆ. ಗೆಳೆಯರು ಹೇಳಿದ ಪುಸ್ತಕಗಳನ್ನು ತಂದು ಮುಂದೆ ಹಾಕಿಕೊಂಡು ಓದಲು ಶುರು ಮಾಡಿದ್ದೇನೆ.

ಕೊರೊನಾ ವಿರುದ್ಧ ಪವನ್ ಒಡೆಯರ್ ಓದಿನ ಮಂತ್ರ..!

ದಿನಕ್ಕೆ ಒಂದರಂತೆ ಒಂದು ವಾರದಿಂದ ಐದಾರು ಪುಸ್ತಕಗಳನ್ನು ಓದಿದ್ದೇನೆ. ತಾರಾಸು ಅವರ ರಕ್ತರಾತ್ರಿ, ಕುವೆಂಪು ಅವರ ಚಂದ್ರಹಾಸ, ರವಿಬೆಳಗೆರೆ ಅವರ ಸೈಕೋಪಾತ್‌, ಶಿವರಾಮ ಕಾರಂತರ ಮೈಗಳ್ಳನ ದಿನಚರಿಯಿಂದ, ಚೋಮನ ದುಡಿ, ಶ್ರೀನಿವಾಸ್‌ ಅವರ ಸಣ್ಣ ಕತೆಗಳು, ತೇಜಸ್ವಿ ಅವರ ಮಹಾ ಪಲಾಯನ, ಚಿದಂಬರ ರಹಸ್ಯ, ಹಾಗೂ ಬೇಂದ್ರೆ ಅವರ ನಾಟ, ಜಾತ್ರೆ ಪುಸ್ತಕಗಳನ್ನು ಮುಂದೆ ಹಾಕಿಕೊಂಡು ಓದಲು ಶುರು ಮಾಡಿರುವೆ. ಇದರ ಜತೆಗೆ ಕಾಕನ ಕೋಟೆ ಪುಸ್ತಕ ಕೂಡ ಇದೆ. ಇಷ್ಟುಪುಸ್ತಕಗಳನ್ನು ಓದಿದ ಮೇಲೆ ಬೇರೆ ಪುಸ್ತಕಗಳತ್ತ ಗಮನ ಕೊಡುತ್ತೇನೆ. ಹೀಗೆ ನನ್ನೊಳಗಿನ ಓದುಗ ಎಚ್ಚರಗೊಂಡ ಮೇಲೆ ಹೊಸ ಹೊಸ ಕತೆಗಳು ಹುಟ್ಟಿಕೊಂಡಿವೆ. ನಾನು ಓದಿದ ಅಷ್ಟೂಪುಸ್ತಕಗಳು ಅದ್ಭುತ ಸಿನಿಮಾಗಳಾಗುತ್ತವೆ. ಹಾಗೆ ನಾನು ಓದುವಾಗ ಆ ಪುಸ್ತಕ, ಅದರ ಲೇಖಕ ನನ್ನಲ್ಲಿ ಹುಟ್ಟಿಸಿದ ಹೊಸ ಕತೆಯನ್ನು ಸಂಕ್ಷಿಪ್ತವಾಗಿ ಬರೆದಿಟ್ಟುಕೊಳ್ಳುತ್ತಿದ್ದೇನೆ. ಈ ಕೊರೋನಾ ಭೀತಿ ಯಾವಾಗ ತೊಲಗುತ್ತೋ ಗೊತ್ತಿಲ್ಲ. ಆದರೆ, ಅದು ಹೋಗುವ ಹೊತ್ತಿಗೆ ನನ್ನಲ್ಲಿ ಹೊಸದಾಗಿ ಐದಾರು ಕತೆಗಳಂತೂ ಸಿದ್ದವಾಗುತ್ತವೆ. ನಾನು ಓದಿದ, ಮತ್ತು ಓದುತ್ತಿರುವ ಅಷ್ಟೂ

ಪುಸ್ತಕಗಳು ನನಗೆ ಹೊಸ ಸಿನಿಮಾ ಕತೆಗಳಿಗೆ ಐಡಿಯಾಗಳನ್ನು ಕೊಡುತ್ತಿವೆ. ಇದರ ಜತೆಗೆ ನನ್ನ ನಿರ್ದೇಶನದ ರೊಮೋ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮಾಡುತ್ತಿರುವೆ.

ನೆಚ್ಚಿನ ಪೇಯಿಂಟಿಂಗ್‌ ಗಳ ಜತೆ ಸ್ಕಿ್ರಪ್ಟ್‌ ಓದುತ್ತಿರುವೆ- ಹರಿಪ್ರಿಯಾ

ನಿಜ ಹೇಳಬೇಕು ಅಂದರೆ ಭೀತಿಯಿಂದ ಸಿಕ್ಕಿರುವ ಈ ಬಿಡುವಿನ ವೇಳೆ ಯಾರಿಗೂ ಬೇಡ. ಆದರೆ, ಮನೆ ಬಿಟ್ಟು ಹೋಗುವಂತಿಲ್ಲ. ಇದು ಅನಿವಾರ್ಯ. ಹೀಗಾಗಿ ಮನೆಯಲ್ಲಿ ಓದು ನಾನು ಮಾಡುತ್ತಿರುವ ಕೆಲಸಗಳ ದೊಡ್ಡ ಪಟ್ಟಿಯೇ ಇದೆ.

-ತುಂಬಾ ಕತೆಗಳು ನನಗೆ ಮೇಲ್‌ ಬಂದಿವೆ. ಕೆಲವು ಒಂದು ಸಾಲಿನಲ್ಲಿವೆ, ಕೆಲವು ಚಿತ್ರಕಥೆ ರೂಪದಲ್ಲಿವೆ. ಇನ್ನೂ ಕೆಲವು ಸಂಭಾಷಣೆಗಳ ಸಮೇತ ಸ್ಕಿ್ರಪ್ಟ್‌ ಕಳುಹಿಸಿದ್ದಾರೆ. ಇವುಗಳನ್ನು ಒಂದೊಂದಾಗಿ ಓದುತ್ತಿದ್ದೇನೆ. ಓದುವ ಜತೆಗೆ ಅವುಗಳ ಕುರಿತು ನನ್ನದೇ ಆದೆ ಪುಟ್ಟನೋಟ್‌ ಮಾಡುತ್ತಿರುವೆ.

-ನನಗೆ ಮೊದಲಿನಿಂದಲೂ ಬರೆಯುವ ಹವ್ಯಾಸ ಇದೆ. ಹೀಗೆ ನಾನು ಈ ಹಿಂದೆಯೇ ಬರೆದಿಟ್ಟಿರುವ ಸಣ್ಣ ಸಣ್ಣ ನೋಟ ಹಾಗೂ ಕತೆಗಳ ರೂಪದ ಬರಹಗಳನ್ನು ಸಿನಿಮಾ ಮಾಡಬಹುದೇ ಎನ್ನುವ ನಿಟ್ಟಿನಲ್ಲಿ ಅವುಗಳ ಮರು ಓದಿಗೆ ಕೂತಿರುವೆ.

'ಹ್ಯಾಪಿ' ಆ್ಯಂಡ್‌ 'ಲಕ್ಕಿ' ಹುಟ್ಟುಹಬ್ಬ ಆಚರಿಸಿದ ನಟಿ ಹರಿ ಪ್ರಿಯಾ!

- ನಾನು ಮನೆಯಲ್ಲಿ ಬಿಡುವಾಗಿದ್ದರೆ ನನ್ನ ಇಷ್ಟದ ಕೆಲಸ ಅಂದರೆ ಪೇಯಿಟಿಂಗ್‌ ಮಾಡುವುದು. ಹೀಗೆ ಮಾಡಿದ ಪೇಯಿಟಿಂಗ್‌ ಗಳನ್ನು ಮೊದಲು ಅಮ್ಮನಿಗೆ ತೋರಿಸಿ ಅವರು ಖುಷಿ ಆದಾಗ ನಾನು ಅವುಗಳನ್ನು ಜೋಪಾನವಾಗಿಡುವುದು.

- ಓದು, ಬರವಣಿಗೆ, ಪೇಯಿಂಟಿಂಗ್‌ ಮಾಡುವ ಜತೆಗೆ ತುಂಬಾ ಆತ್ಮಿಯರು, ಆಪ್ತರು ಎನಿಸಿರುವ ನೆಂಟರ ಮನೆಯ ಮಕ್ಕಳ ಜತೆ ವಿವಿಧ ಗೇಮ್‌ ಗಳನ್ನು ಆಡುವುದು. ಇದರಲ್ಲಿ ಸ್ಟೋರಿ ಬಿಲ್ಡಿಂಗ್‌ ಗೇಮ್‌ ಚೆನ್ನಾಗಿದೆ. ಅಂದರೆ ಒಬ್ಬರು ಕತೆ ಶುರು ಮಾಡಿದ್ದನ್ನು ಮತ್ತೊಬ್ಬರು ಮುಂದುವರಿಸಿಕೊಂಡು ಹೋಗುವುದು. ತುಂಬಾ ಖುಷಿ ಕೊಡುತ್ತಿರುವ ಗೇಮ್‌ ಇದು.

-ಈ ಎಲ್ಲವೂ ಒಂಚೂರು ಬೋರ್‌ ಅನಿಸಿದರೆ ಅಥವಾ ಚೇಜ್‌ ಬೇಕು ಅಂದಾಗ ಯೂಟ್ಯೂಬ್‌ ನೋಡಿ ಹೊಸ ಹೊಸ ಅಡುಗೆ ರೆಸಿಪಿಗಳನ್ನು ಮಾಡುವುದು.

ಹೀಗೆ ನಮ್ಮ ವರ್ಕ್ ಫ್ರಮ್‌ ಹೋಮ್‌ ಲೈಫ್‌ ನಡೆಯುತ್ತಿದೆ. ಯಾಕೆಂದರೆ ಈ ಕೆಲಸಗಳಿಗೆ ಶೂಟಿಂಗ್‌ ಇದ್ದಾಗ ಟೈಮ್‌ ಕೊಡಕ್ಕೆ ಆಗಲ್ಲ. ಈಗ ಕೊರೋನಾ ಆ ಟೈಮ್‌ ಅನ್ನು ಈ ರೀತಿ ಬಳಸಿಕೊಳ್ಳುತ್ತಿವೆ. ಸಾಧ್ಯವಾದಷ್ಟುಬೇಗ ಈ ಭೀತಿಯ ಹಾಲಿಡೇ ಮುಕ್ತಾಯಗೊಳ್ಳಲಿ.

ಮಗನ ಜತೆ ಕ್ರಿಕೆಟ್‌, ಅರ್ಜುನ್‌ ಜನ್ಯಾ ಜತೆ ಸಂಗೀತ- ಜೋಗಿ ಪ್ರೇಮ್‌

ಮನೆ ಅಂಗಳದಲ್ಲಿ ಮಗನ ಜತೆ ಕ್ರಿಕೆಟ್‌, ಅರ್ಜುನ್‌ ಜನ್ಯಾ ಜತೆ ಸಂಗೀತದ ಕೆಲಸ, ಶೂಟ್‌ ಆಗಿರುವ ಏಕ್‌ ಲವ್‌ ಯಾ ಚಿತ್ರದ ದೃಶ್ಯಗಳನ್ನು ಮತ್ತೆ ಮತ್ತೆ ನೋಡುತ್ತಿರುವೆ...ಇದು ನನ್ನ ಪ್ರತಿ ದಿನದ ಕೆಲಸಗಳು. ಮನೆ ಬಿಟ್ಟು ಎಲ್ಲೂ ಹೋಗುತ್ತಿಲ್ಲ. ಸ್ಟುಡಿಯೋದಲ್ಲಿ ಸಂಗೀತ ಕೆಲಸ ಮಾಡುತ್ತಿದ್ದರೂ ಹೆಚ್ಚು ಜನ ಇಲ್ಲ. ನಾನು, ಅರ್ಜುನ್‌ ಜನ್ಯಾ ಹೊರತಾಗಿ ಇಬ್ಬರು ಅಥವಾ ಮೂವರು ಅಷ್ಟೆ.

ಆನಿವರ್ಸರಿ ದಿನ ಸ್ನೇಹಿತರ ದಿನ ನೆನಪಿಸಿಕೊಂಡ ರಕ್ಷಿತಾ...ಕಾರಣ!

ಉಳಿದಂತೆ ಯಾರೂ ಇಲ್ಲ. ಹೆಚ್ಚಿನ ಸಮಯ ಮಗನ ಜತೆ ಕಳೆಯುತ್ತಿರುವೆ. ಏನೇ ಕೆಲಸಗಳಿದ್ದರೂ ನೇರವಾಗಿ ಭೇಟಿ ಮಾಡಿಕೊಂಡು ಮುಗಿಸಿಸುತ್ತಿದೆ. ಈಗ ಕೇವಲ ಫೋನ್‌ನಲ್ಲೇ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿರುವೆ. ಬಹುಶಃ ಸಿನಿಮಾ ಹೊರತಾದ ವೈಯಕ್ತಿಕ ಜೀವನದ ಸಣ್ಣ ಸಣ್ಣ ಖುಷಿ ಸಂಗತಿಗಳನ್ನು ಅನುಭವಿಸುತ್ತಿದ್ದೇನೆ.