Asianet Suvarna News Asianet Suvarna News

ಹಾಪ್‌ಕಾಮ್ಸ್‌ ತರಕಾರಿಗೆ ಭಾರೀ ಬೇಡಿಕೆ! 20 ಲಕ್ಷದ ವಹಿವಾಟು 40 ಲಕ್ಷಕ್ಕೆ ವೃದ್ಧಿ

ಬೆಂಗಳೂರು ವಿಭಾಗ ವ್ಯಾಪ್ತಿಗೆ ಬರುವ 226 ಹಾಪ್‌ಕಾಮ್ಸ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ (ಮಾರುಕಟ್ಟೆಗಳು ಸ್ಥಗಿತಕ್ಕೂ ಮುನ್ನ) ಪ್ರತಿದಿನ 50ರಿಂದ 60 ಟನ್‌ ತರಕಾರಿ ಮಾರಾಟವಾಗುತ್ತಿತ್ತು. ಇದೀಗ ಏಕಾಏಕಿ 85 ರಿಂದ 90 ಟನ್‌ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತಿದೆ. ಆಲ್ಲದೆ, ಪ್ರತಿದಿನ .20 ಲಕ್ಷ ವಹಿವಾಟು ನಡೆಯುತ್ತಿತ್ತು. ಅದರೆ, ಇದೀಗ 40 ಲಕ್ಷಕ್ಕೆ ವೃದ್ಧಿಸಿದೆ.

 

High demand for HOPCOMS vegetables and fruits in Bangalore
Author
Bangalore, First Published Mar 31, 2020, 10:24 AM IST
  • Facebook
  • Twitter
  • Whatsapp

ಬೆಂಗಳೂರು(ಮಾ.31): ಕೊರೋನಾ ಸೋಂಕು ಹರಡುವುದನ್ನು ತಡೆಯಲು ನಗರದ ಪ್ರಮುಖ ಮಾರುಕಟ್ಟೆಗಳು ಲಾಕ್‌ಡೌನ್‌ ಮಾಡಿರುವುದು ಪರೋಕ್ಷವಾಗಿ ಹಾಪ್‌ಕಾಮ್ಸ್‌ನ ತರಕಾರಿ ಮತ್ತು ಹಣ್ಣು ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಏಕಾಏಕಿ ಶೇ.50ರಷ್ಟುಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಷ್ಟವಾಗಿದೆ.

ಬೆಂಗಳೂರು ವಿಭಾಗ ವ್ಯಾಪ್ತಿಗೆ ಬರುವ 226 ಹಾಪ್‌ಕಾಮ್ಸ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ (ಮಾರುಕಟ್ಟೆಗಳು ಸ್ಥಗಿತಕ್ಕೂ ಮುನ್ನ) ಪ್ರತಿದಿನ 50ರಿಂದ 60 ಟನ್‌ ತರಕಾರಿ ಮಾರಾಟವಾಗುತ್ತಿತ್ತು. ಇದೀಗ ಏಕಾಏಕಿ 85 ರಿಂದ 90 ಟನ್‌ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತಿದೆ. ಆಲ್ಲದೆ, ಪ್ರತಿದಿನ .20 ಲಕ್ಷ ವಹಿವಾಟು ನಡೆಯುತ್ತಿತ್ತು. ಅದರೆ, ಇದೀಗ 40 ಲಕ್ಷಕ್ಕೆ ವೃದ್ಧಿಸಿದೆ.

ಕೊರೋನಾ ಫೈಟ್: ಪ್ರಧಾನಿ ಕೇರ್ಸ್‌ಗೆ ಕೈ ತುಂಬಾ ದೇಣಿಗೆ ನೀಡಿದ ಕ್ರಿಕೆಟರ್ಸ್

ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಂದ ನಗರಕ್ಕೆ ತರಕಾರಿ ಬರುವುದು ಕಡಿಮೆಯಾಗಿದೆ. ತರಕಾರಿ ಸಾಗಿಸುವ ವಾಹನಗಳನ್ನು ಮನೆಯಿಂದ ಹೊರಕ್ಕೆ ತೆಗೆಯಲು ಮಾಲಿಕರು ಮತ್ತು ಚಾಲಕರು ಮುಂದಾಗುತ್ತಿಲ್ಲ. ಇದರಿಂದ ಬೇಡಿಕೆಗೆ ತಕ್ಕಷ್ಟುಪೂರೈಕೆ ಆಗುತ್ತಿಲ್ಲ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಗ್ರಾಹಕರಿಗೆ ಸಲಹೆ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಲೆ ಹೆಚ್ಚಳ:

ಪ್ರತಿ ದಿನ ನಗರಕ್ಕೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಭಾಗಗಳಿಂದ ತರಕಾರಿ ಪೂರೈಕೆಯಾಗುತ್ತಿತ್ತು. ಆದರೆ, ಇದೀಗ ಬೆಂಗಳೂರು ಗ್ರಾಮಾಂತರ ಭಾಗಗಳಿಂದ ಮಾತ್ರ ತರಕಾರಿ ಮತ್ತು ಹಣ್ಣು ಪೂರೈಕೆಯಾಗುತ್ತಿದೆ. ಅಲ್ಲದೆ, ರೈತರು ತಮ್ಮ ಸ್ವಂತ ವಾಹನಗಳಲ್ಲಿ ತರಕಾರಿಯನ್ನು ಸಾಗಿಸುತ್ತಿದ್ದು, ಹೆಚ್ಚುವರಿ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ.

ಪರಿಣಾಮ ತರಕಾರಿ ಮತ್ತು ಹಣ್ಣುಗಳಿಗೆ ಪ್ರತಿ ಕೆ.ಜಿಗೆ ಬೆಲೆಯಲ್ಲಿ .5 ರಿಂದ 10 ರವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ತಿಳಿಸಿದರು.

ಅರ್ಧದಷ್ಟುಮೊಬೈಲ್‌ ವಾಹನ ಸ್ಥಗಿತ

ಹಾಪ್‌ಕಾಮ್ಸ್‌ ವ್ಯಾಪ್ತಿಯಲ್ಲಿ ಒಟ್ಟು 25 ಮೊಬೈಲ್‌ ಹಣ್ಣು ಮಾರಾಟ ಮಳಿಗೆಗಳಿವೆ. ಕೊರೋನಾ ವೈರಸ್‌ ಸೋಂಕು ಹರಡುತ್ತದೆ ಎಂಬ ಭಯದಿಂದಾಗಿ ಇವುಗಳ ಚಾಲಕರು ಮನೆಯಿಂದ ಹೊರ ಬರುತ್ತಿಲ್ಲ. ಪರಿಣಾಮ 10 ವಾಹನಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಾಹನಗಳು ನಗರದ ವಿವಿಧ ಭಾಗಗಳಲ್ಲಿನ ವಸತಿ ಸಮುಚ್ಚಯಗಳು, ಬಡಾವಣೆಗಳ ಕೇಂದ್ರ ಸ್ಥಳಗಳಲ್ಲಿ ನಿಲ್ಲಿಸಲಿವೆ. ಈ ವಾಹನಗಳಲ್ಲಿಯೂ ಅತಿ ಹೆಚ್ಚು ಬೇಡಿಕೆಯಿದೆ ಎಂದು ಪ್ರಸಾದ್‌ ವಿವರಿಸಿದರು.

ಫ್ರಾನ್ಸ್‌ ಜಲಾಂತರ್ಗಾಮಿಗಳಿಗೆ 2600 ಜನ ಸತ್ತಿದ್ದು ಗೊತ್ತಿಲ್ಲ!

ಕೊರೋನಾ ಹಿನ್ನೆಲೆಯಲ್ಲಿ ಹಾಪ್‌ ಕಾಮ್ಸ್‌ಗಳಲ್ಲಿ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಹಣ್ಣು ತರಕಾರಿ ಪೂರೈಕೆ ಮಾಡಲು ರೈತರು ಮುಂದಾಗುತ್ತಿಲ್ಲ. ಬರುತ್ತಿರುವ ತರಕಾರಿಯನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ. ರೈತರು ಹೆಚ್ಚು ತರಕಾರಿ ಪೂರೈಕೆ ಮಾಡಿದಲ್ಲಿ ಗ್ರಾಹಕರಿಗೂ ನೆರವಾಗಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ಹಾಪ್‌ಕಾಮ್ಸ್‌ ತಿಳಿಸಿದ್ದಾರೆ.

-ರಮೇಶ್‌ ಬನ್ನಿಕುಪ್ಪೆ

Follow Us:
Download App:
  • android
  • ios