ಬೆಂಗಳೂರು(ಮಾ.27): ಇಂದಿನಿಂದ ಅಗತ್ಯ ಸೇವೆ ನೀಡುವವರಿಗಾಗಿ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ಸುಗಳು ಕಾರ್ಯನಿರ್ವಹಿಸಲಿವೆ. ಬಿಎಂಟಿಸಿ ಸೇವೆ ಇರೋದು ಜನಸಾಮಾನ್ಯರಿಗಲ್ಲ, ಕೇವಲ ಅವಶ್ಯಕ ಸೇವೆಗಳ ನೌಕರರಿಗೆ ಮಾತ್ರ ಜೊತೆಗೆ, ವೈದ್ಯರು, ದಾದಿಯರು, ಆಸ್ಪತ್ರೆ ನೌಕರರು, ಸೆಕ್ಯೂರಿಟಿ ಗಾರ್ಡ್‌ಗಳು, ಬ್ಯಾಂಕ್ ಉದ್ಯೋಗಿಗಳು, ಹಾಗೂ ಮಾಧ್ಯಮದವರಿಗೆ ಮಾತ್ರ ಈ ಬಿಎಂಟಿಸಿಯಲ್ಲಿ ಪ್ರಯಾಣಿಸಲು ಸಾಧ್ಯ, ಯಾವುದೇ ಕಾರಣಕ್ಕೂ ಮನೆಯಿಂದ ಜನಸಾಮಾನ್ಯರು ಹೊರಗೆ ಬರಬೇಡಿ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರತಿ ಬಸ್‌ನಲ್ಲಿ ಗರಿಷ್ಠ 20 ಜನ ಮಾತ್ರ ಪ್ರಯಾಣಿಸಬಹುದಾಗಿದೆ. ಬಸ್ಸನ್ನು ಚಲಾಯಿಸುವ ಎಲ್ಲ ಚಾಲಕ ನಿರ್ವಾಹಕರುಗಳಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. 

ಅಪ್ಪಾ.. ಹೊರಗೋಗ್ಬೇಡಾ ಕೊರೋನಾವಿದೆ: ಪೊಲೀಸಪ್ಪ ಮಗಳ ಮಾತ ಕೇಳಿಯೊಮ್ಮೆ!

ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಮೆಡಿಕಲ್ ಶಾಪ್, ಕಾರ್ಪೊರೇಷನ್, ಮೆಟ್ರೋ ಸಿಬ್ಬಂದಿ, ಖಾಸಗಿ ಸೆಕ್ಯೂರಿಟಿ ಗಾರ್ಡ್,ಬ್ಯಾಂಕ್ ಸಿಬ್ಬಂದಿ, ರಕ್ತ ದಾನಿಗಳು, ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡುವ ನಾಗರಿಕರು, ರೋಗಿಗಳನ್ನು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದಿರುವ ಅಂಗಡಿ ಕಾರ್ಮಿಕರು, ಡೆಲಿವರಿ ಹುಡುಗರು, ಪೆಟ್ರೋಲ್ ಬಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿಯನ್ನು ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. 

ಕೊರೋನಾ ಮಧ್ಯೆಯೂ ಜನಕ್ಕೆ ಸಂತೆಯದ್ದೇ ಚಿಂತೆ: ಪೊಲೀಸರ ಲಾಠಿ ಏಟಿಗೆ ಕಾಲ್ಕಿತ್ತ ಮಂದಿ!

ರಾಜ್ಯದೆಲ್ಲೆಡೆ ಕೊರೋನಾ ಮಹಾಮಾರಿಯನ್ನು ತಡೆಯುವ ಪ್ರಯುಕ್ತ ಲಾಕ್‌ಡೌನ್ ಘೋಷಿಸಿದೆ. ಇದರ ನಡುವೆ ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬಿಎಂಟಿಸಿಯ ಬಸ್ಸುಗಳನ್ನು ಕಾರ್ಯಾಚರಣೆ ಗೊಳಿಸಲಾಗುತ್ತಿದೆ. ಸದರಿ ಸೇವೆಯು ತುರ್ತು ಸೇವೆಗಳ ಸೌಲಭ್ಯಗಳನ್ನು ಒದಗಿಸುವ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಸೇವೆ ಪಡೆಯಲು ಪೊಲೀಸ್ ಸಂಸ್ಥೆ ವಿತರಿಸಿರುವ ಗುರುತಿನ ಚೀಟಿ ಅತ್ಯಾವಶ್ಯವಾಗಿರುತ್ತದೆ ದಯವಿಟ್ಟು ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಸಹಕರಿಸಬೇಕು ಎಂದು ಸಚಿವ ಸವದಿ ಮನವಿ ಮಾಡಿಕೊಂಡಿದ್ದಾರೆ.