ಮಂಗಳೂರು(ಮಾ.24): ಕೊರೋನಾ ವೈರಸ್ ಸೋಂಕಿನ ಬಗ್ಗೆೆ ಜಾಗೃತಿ ಮೂಡಿಸುವ ‘ಕೊರೋನಾ ಯಕ್ಷ ಜಾಗೃತಿ’ ಯಕ್ಷಗಾನವು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

"

ಗಡಿ ನಾಡ ಜಿಲ್ಲೆ ಕೇರಳದ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾಾನ ಪ್ರಸ್ತುತ ಪಡಿಸಿರುವ ಈ ಯಕ್ಷಗಾನ ಜನರ ಮೆಚ್ಚುಗೆ ಗಳಿಸಿದೆ. ಸುಮಾರು ಒಂದು ಗಂಟೆ ಅವಧಿಯ ಈ ಯಕ್ಷಗಾನವನ್ನು ಭಾನುವಾರ ಮುಂಜಾನೆ ೩.೩೦ರ ಸುಮಾರಿಗೆ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು ಸೋಮವಾರದ ವೇಳೆಗೆ 19 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾಾರೆ.

ಕರ್ನಾಟಕ ಸಂಸದರೊಬ್ಬರ ಪುತ್ರಿಗೆ ಕೊರೋನಾ ವೈರಸ್ ದೃಢ..!

ಶ್ರೀ ಗಣೇಶ ಕಲಾವೃಂದ ಪೈವಳಿಕೆ (ದೇವಕಾನ) ಅವರ ಸಂಪೂರ್ಣ ಸಹಕಾರದೊಂದಿಗೆ ಈ ಯಕ್ಷ ಜಾಗೃತಿಯ ಪ್ರಸಂಗವನ್ನು ನೀರ್ಚಾಲಿನ ವರ್ಣ ಸ್ಟುಡಿಯೋದವರು ಚಿತ್ರೀಕರಿಸಿದ್ದಾರೆ. ಯಕ್ಷಗಾನ ಪ್ರಸಂಗ ತಜ್ಞರಾದ ಶ್ರೀಧರ ಡಿ.ಎಸ್. ಮತ್ತು ಪ್ರೊ. ಎಂ.ಎ. ಹೆಗಡೆ ಅವರು ಪ್ರಸಂಗ ಸಾಹಿತ್ಯ ರಚನೆ ಮಾಡಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊೊ. ಎಂ.ಎ. ಹೆಗಡೆ ಮತ್ತು ಅಕಾಡೆಮಿ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಈ ಪ್ರಸಂಗದ ಚಿತ್ರೀಕರಣ ನಡೆದಿದೆ.

ಕೊರೋನಾ ಭೀತಿ: ಬೆಂಗ್ಳೂರು ಬಿಟ್ಟು ಹಳ್ಳಿಕಡೆ ಹೊರಟವರು ಮಸಣ ಸೇರಿದ್ರು...!

ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆಯಲ್ಲಿ ಶಂಕರ ಭಟ್ ನಿಡುವಜೆ, ಮದ್ದಲೆಯಲ್ಲಿ ಉದಯ ಕಂಬಾರು, ಚಕ್ರತಾಳದಲ್ಲಿ ಶ್ರೀಮುಖ ಎಸ್.ಆರ್. ಮಯ್ಯ ಸಹಕರಿಸಿದ್ದಾರೆ. ಮುಮ್ಮೇಳದಲ್ಲಿ ಕೊರೋನಾ- ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿ- ವಾಸುದೇವ ರಂಗಾಭಟ್ ಮಧೂರು, ರಾಜೇಂದ್ರನಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಮಣಿಭದ್ರನಾಗಿ ಗುರುರಾಜ ಹೊಳ್ಳ ಬಾಯಾರು, ಪತ್ನಿ- ಪ್ರಕಾಶ್ ನಾಯಕ್ ನೀರ್ಚಾಲು, ಮಣಿಕರ್ಣ- ಕಿಶನ್ ಅಗ್ಗಿಿತ್ತಾಾಯ ನೆಲ್ಲಿಕಟ್ಟೆೆ, ಪುರಜನರು- ಶ್ರೀಕೃಷ್ಣ ಭಟ್ ದೇವಕಾನ, ಶಬರೀಶ್ ಮಾನ್ಯ, ಕಿರಣ್ ಕುದ್ರೆೆಕ್ಕೂಡ್ಲು ಅಭಿನಯಿಸಿದ್ದಾರೆ.

ಕೊರೋನಾ ಬಗ್ಗೆ ಜಾಗೃತಿ; ಭಾರತೀಯರಿಗೆ ಚಾಲೆಂಜಿಂಗ್ ಸ್ಟಾರ್ ಮನವಿ! 

ಶ್ರೀ ಗಣೇಶ ಕಲಾವೃಂದ ಪೈವಳಿಕೆ ವೇಷಭೂಷಣ ಸಹಕಾರವನ್ನು ನೀಡಿದ್ದಾರೆ. ನೀರ್ಚಾಲಿನ ವರ್ಣ ಸ್ಟುಡಿಯೋದವರು ಇದನ್ನು ಚಿತ್ರೀಕರಣ ನಡೆಸಿದ್ದು, ಉದಯ ಕಂಬಾರು, ವೇಣುಗೋಪಾಲ್, ಶೇಖರ ವಾಂತಿಚ್ಚಾಾಲ್, ಮಹೇಶ್ ತೇಜಸ್ವಿಿ ನೀರ್ಚಾಲ್ ಕ್ಯಾಾಮರಾ ಸಹಕಾರ ನೀಡಿದ್ದಾರೆ.