ಕೊರೋನಾ ಬಗ್ಗೆ ಜಾಗೃತಿ; ಭಾರತೀಯರಿಗೆ ಚಾಲೆಂಜಿಂಗ್ ಸ್ಟಾರ್ ಮನವಿ!

ಕೊರೋನಾ ವೈರಸ್‌ ಹರಡುತ್ತಿದ್ದಂತೆ ಈಗಾಗಲೇ ಕರ್ನಾಟಕವೇ ಲಾಕ್ ಡೌನ್ ಆಗಿದೆ. ವೈದ್ಯಕೀಯವಾಗಿ ಮುಂದುವರಿದ ರಾಷ್ಟ್ರಗಳಿಗೇ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಂಥದ್ರಲ್ಲಿ ಭಾರತದಲ್ಲಿ ಹರಡಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಚಾಲೆಂಜಿಂಗ್ ಸ್ಟಾರ್ ಮನವಿ ಮಾಡಿಕೊಂಡಿದ್ದು ಹೀಗೆ....

Actor Darshan request Fans to stay at home due to coronavirus

ಇಡೀ ವಿಶ್ವವನ್ನೇ ಕೊರೋನಾ ವೈರಸ್ ನಡುಗಿಸುತ್ತಿದೆ. ಚೀನಾದಲ್ಲಿ ಜನ್ಮ ತಾಳಿದ ಆ ವೈರಸ್, ಇದೀಗ ಇಟಲಿಯನ್ನು ನುಂಗಿ ನೀರು ಕುಡಿಯುತ್ತಿದೆ. ಯಾರೂ ಏನೂ ಮಾಡದ ಸ್ಥಿತಿ ತಲುಪಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರೇ ತಮ್ಮ ರಕ್ಷಣೆಗೆ ಯೋಧನಂತೆ ಹೋರಾಡಬೇಕು. ಎಷ್ಟು ಹೇಳಿದರೂ ಮಂದಿ ಮನೆಯಲ್ಲಿ ಕೂರಲು ಕೇಳುತ್ತಿಲ್ಲ. 

ಬಹುತೇಕ ಕಚೇರಿಗಳು ತಮ್ಮಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ಘೋಷಿಸಿವೆ. ಶಾಲಾ-ಕಾಲೇಜುಗಳ  ಪರೀಕ್ಷೆಯನ್ನು ಮುಂದೂಡಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ ಸರಕಾರ. ಅಷ್ಟೇ ಅಲ್ಲದೇ ಚಿತ್ರರಂಗದ ಗಣ್ಯರು ಈಗಾಗಲೇ ಮನೆಯಲ್ಲಿ ಟೈಂ ಕಳೆಯುತ್ತಿದ್ದಾರೆ. ಸರ್ಕಾರ ಕಠಿಣ ಕ್ರಮ ಕೈಗೊಂಡರೂ ಜನರು ಹೊರ ಬರುವುದನ್ನು ನಿಲ್ಲಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ದರ್ಶನ್ ಜನರಿಗೆ ಮನವಿ ಮಾಡಿದ್ದು ಹೀಗೆ...

‘ರಾಬರ್ಟ್‌’ನ ದೋಸ್ತಾ ಕಣೋ ಹಾಡು ಕೇಳಿ ಹಾಯಾಗಿರಿ ಅನ್ನುತ್ತಿದೆ ಸ್ಯಾಂಡಲ್‌ವುಡ್‌!

'ಕೊರೋನಾ ವೈರಸ್‌ನಿಂದ ಪಾರಾಗುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಗವರ್ನಮೆಂಟ್, ಡಾಕ್ಟರ್‌, ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ದಯಮಾಡಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ.  ದಯಮಾಡಿ ನಿಮ್ಮ ಫ್ಯಾಮಿಲಿಗಾಗಿ, ನಿಮ್ಮ ನೆರೆಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ. ಈ ಸೋಂಕು ಬಹಳ ಅಪಾಯಕಾರಿ. ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣ ಹೋಮಕ್ಕೆ ತುತ್ತಾಗುತ್ತೆ. ಇಟಲಿ, ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ.  ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು, ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸಿ..' ಎಂದು ಆಗ್ರಹಿಸಿದ್ದಾರೆ. 

 

ಇಟಲಿ ಮತ್ತು ಸ್ಪೇನ್ ದೇಶಗಳಲ್ಲಿ ಜಾಗೃತ ಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ಬಗ್ಗೆ ಜನರಿಗೆ ತಿಳಿಸುತ್ತಾ 'Common sense is not common' ಎನ್ನುವ ಹಾಗೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios