Big Breaking:ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!

ದಿನದಿಂದ ದಿನಕ್ಕೆ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಿದೆ. ಜನರು ಸರ್ಕಾರ ಆದೇಶವನ್ನ ದಿಕ್ಕರಿಸಿ ಸುತ್ತಾಡುತ್ತಿದ್ದು,  ಮುಂದುವರಿದ್ದು, ತೀವ್ರ ಆತಂಕ ಮೂಡಿಸಿದೆ.  ಕೊನೆಗೆ ಎಚ್ಚೆತ್ತ ರಾಜ್ಯ ಸರ್ಕಾರ ಇಡೀ ಕರ್ನಾಟಕವನ್ನ ಲಾಕ್ ಡೌನ್ ಮಾಡಲು ಆದೇಶಿಸಿದೆ.

Corona crisis Karnataka Government decides to shut down entire State

ಬೆಂಗಳೂರು[ಮಾ.23]: ಕರ್ನಾಟಕವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಕೊನೆಗೂ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 31ರ ವರೆಗೆ  ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ.

ಇಂದು (ಸೋಮವಾರ) ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ, ಕರ್ನಾಟಕವನ್ನ ಲಾಕ್ ಡೌನ್ ಮಾಡುವ ಬಗ್ಗೆ ಸಂಜೆ ವೇಳೆಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇದೀಗ ಸಿಎಂ ಲಾಕ್ ಡೌನ್ ಘೋಷಣೆ ಮಾಡಿದರು.

ಕರ್ನಾಟಕ ಸಂಪೂರ್ಣ ಲಾಕ್: ಏನು ಇರುತ್ತೆ? ಏನು ಇರಲ್ಲ?

ಕೋವಿಡ್ 19 ವೈರಸ್ ಮಹಾಮಾರಿ ಕರ್ನಾಟಕದಲ್ಲಿ ತನ್ನ ಪ್ರತಾಪವನ್ನು ಹೆಚ್ಚುಗೊಳಿಸುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯಂತೆ ಇವತ್ತು (ಸೋಮವಾರ) ಒಂದೇ ದಿನ 7 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ 3ನೇ ಸ್ಥಾನಕ್ಕೇರಿದೆ.

ಸೋಮವಾರ ಒಂದೇ ದಿನ 7 ಜನರಿಗೆ ಕೊರೋನಾ: 3ನೇ ಸ್ಥಾನಕ್ಕೇರಿದ ಕರ್ನಾಟಕ

ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ (71), ಕೇರಳ (60) ಎರಡನೇ ಸ್ಥಾನದಲ್ಲಿದ್ರೆ, ನಂತರ ಸ್ಥಾನದಲ್ಲಿ ಕರ್ನಾಟಕ ಇದೆ. ಈ ಕಾರಣದಿಂದ ಕಠಿಣ ನಿರ್ಧಾರವನ್ನು ತೆಗೆದುಕೊಂಡಿರುವ ರಾಜ್ಯ ಸರಕಾರವು ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಿದೆ. ಲಾಕ್ ಡೌನ್ ಈ ಮೊದಲೇ ಘೋಷಿಸಬೇಕಿತ್ತು. ಆದ್ರೆ, ಇದು ಟೂ ಲೇಟ್.

ಈಗಾಗಲೇ ಭಾರತದಲ್ಲಿ ಒಟ್ಟು 14 ಜಿಲ್ಲೆಗಳು ಲಾಕ್ ಡೌನ್‌ ಆಗಿದ್ದು, ಇದೀಗ ಕರ್ನಾಟಕ ಸಹ ಸ್ತಬ್ಧವಾಗಲಿದೆ.  ರಾಜ್ಯದ ಜನತೆಯ ಹಿತದೃಷ್ಠಿಯಿಂದ ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿದೆ.

ಜನ್ರ ನಿರ್ಲಕ್ಷ್ಯಕ್ಕೆ ಗರಂ ಆದ PM,ಕರ್ನಾಟಕ ಲಾಕ್‌ಡೌನ್‌ಗೆ ಚಿಂತಿಸಿದ CM; ಮಾ.23ರ ಟಾಪ್ 10 ಸುದ್ದಿ!

ಪರಿಸ್ಥಿತಿ ಗಂಭಿರತೆ ಅರಿತು ಮನೆಯಲ್ಲಿಯೇ ಇರಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಇದುವರೆಗೂ ರಾಜ್ಯದಲ್ಲಿ 27 ಕೊರೋನಾ ಕೇಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 9 ಜಿಲ್ಲೆಗಳಲ್ಲಿ  ನಿರ್ಬಂಧ ಹೇರಲಾಗಿದೆ. 

ಆದರೂ ಸಹ ಜನರು ಯಾವುದ್ಕೂ ಕೇರ್ ಮಾಡದೇ ಅನಗತ್ಯವಾಗಿ ಮನೆಯಿಂದ ಹೊರಬರುತ್ತಿದ್ದಾರೆ.  ಕೊರೋನಾ ವೈರಸ್ ಮತ್ತಷ್ಟು ಹರಡುವ ಸಾಧ್ಯತೆ ಇರುವುದರಿಂದ ಕರ್ನಾಟಕ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಮೊದಲೇ ಕರ್ನಾಟಕವನ್ನು ಲಾಕ್ ಡೌನ್ ಮಾಡಬೇಕಿತ್ತು.  ಆದ್ರೆ, ರಾಜ್ಯ ಸರ್ಕಾರ ತಡವಾಗಿ ನಿರ್ದಾರ ಕೈಗೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. 

ಅನಗತ್ಯ ಹೊರಗೆ ಬಂದ್ರೆ ಹುಷಾರ್
ಕೊರೋನಾ ಮಾಹಾಮಾರಿಯಿಂದ ಸಾವು ಮನೆ ಬಾಗಿಲಿಗೆ ಬಂದು ನಿಂತಿದೆ. ಆದರೂ ನಮ್ಮ ಜನ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವುದು ಹಾಗೂ ಸಂಚರಿಸುವುದನ್ನ ಮಾಡುತ್ತಿದ್ದಾರೆ.

ಕೊರೋನಾ ವಿರುದ್ಧ ಹೋರಾಟಕ್ಕೆ ಉದ್ಯಮಿಗಳು ಸಾಥ್, ಒಬ್ಬರಿಂದ 100 ಕೋಟಿ ಘೋಷಣೆ

ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಗರಂ ಆಗಿದ್ದು, ಸುಖಸುಮ್ಮನೆ ಹೊರಗೆ ಬಂದ್ರೆ ಲಾಠಿ ರುಚಿ ತೋರಿಸುತ್ತೆ ಜತೆಗೆ ಕೇಸ್ ದಾಖಲಿಸಿಕೊಳ್ಳುತ್ತೆ ಹುಷಾರ್.

ಸರ್ಕಾರ ಏನು ಮಾಡಬಾರದು ಎಂದು ಸರ್ಕಾರ ಬಾಯಿ ಬಡ್ಕೊಳ್ಳುತ್ತಿದೆ. ಆದ್ರೆ, ಜನರು ಮಾತ್ರ ಸರ್ಕಾರದ ಆದೇಶವನ್ನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗೆ ನಿರ್ಲಕ್ಷ್ಯ ಮಾಡಿದ್ರೆ, ಮುಂದೊಂದು ದಿನ ಹುಳಗಳ ರೀತಿಯಲ್ಲಿ ಹೆಣಗಳು ಬೀಳುವುದಂತೂ ಸತ್ಯ.

Latest Videos
Follow Us:
Download App:
  • android
  • ios