ಬೆಂಗಳೂರು, (ಮಾ.23): ನಾಳೆಯಿಂದ ಅಂದ್ರೆ ಮಾರ್ಚ್ 24ರಿಂದ ಮಾ.31ರ ವರೆಗೆ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗಡೆ ಬರುವಂತಿಲ್ಲ.

ಕಳೆದ ಎರಡು ದಿನಗಳಿಂದ ಸುವರ್ಣನ್ಯೂಸ್ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿ ಲಾಕ್ ಡೌನ್‌ಗೆ ಆಗ್ರಹಿಸಿತ್ತು. ಕಾರಣ ಇಷ್ಟೇ ಯಾರನ್ನು ಭಯಪಡಿಸಬೇಕಾದ ಅವಶ್ಯತೆ ಇಲ್ಲ. ಬದಲಾಗಿ ಕೇಂದ್ರ ಸರ್ಕಾರದ ವರದಿಯಂತೆ ಮುಂದಿನ ದಿನಗಳಲ್ಲಿ ಕೊರೋನಾ ವೈರಸ್‌ ಭೀಕರತೆ ಊಹಿಸಲು ಸಾಧ್ಯವಿಲ್ಲ.

ಶನಿವಾರವೇ ರಾಜ್ಯಕ್ಕೆ ವರದಿ ಬಂದಿದ್ದು, ಲಾಕ್ ಡೌನ್ ಮಾಡದಿದ್ದರೇ ಹುಳಗಳಂತೆ ಜನರು ಸಾಯುತ್ತಾರೆ ಅಂತೆಲ್ಲಾ ಆಘಾತಕಾರಿ ವರದಿ ನೀಡಿತ್ತು. ಇದೇ ಒಂದು ಕಾರಣಕ್ಕೆ ನಿಮ್ಮ ಸುವರ್ಣನ್ಯೂಸ್, ಕರ್ನಾಟಕ ಲಾಕ್‌ ಡೌನ್‌ಗೆ ನಿರಂತರವಾಗಿ ಆಗ್ರಹಿಸಿತ್ತು.

ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!

ಈಗಾಗಲೇ ದೇಶದ 1೯ ರಾಜ್ಯಗಳು ಸಂಪೂರ್ಣವಾಗಿ ಲಾಕ್ ಡೌನ್ ಆಗಿವೆ.ಇದೀಗ ಕರ್ನಾಟಕದಲ್ಲಿ ಒಟ್ಟು 33 ಕೊರೋನಾ ಕೇಸ್‌ಗಳು ಪತ್ತೆಯಾಗಿದ್ದು, ಮತ್ತಷ್ಟು ಹೆಚ್ಚಾಗುವ ಆತಂಕ ಶುರುವಾಗಿದೆ. ಇದರಿಂದ ಜನರು ಸಾಮಾಜಿಕವಾಗಿ ಅಂದ್ರೆ ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಇದರಿಂದ ಸಾರ್ವನಜಿಕರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ, ಯಾರು ಮನೆಯಿಂದ ಹೊರಗಡೆ ಬರಬೇಡಿ. ಕಿಲ್ಲರ್ ಕೊರೋನಾವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಉದಾಹರಣಗೆ ವೈದ್ಯಕೀಯದಲ್ಲಿ ಬಹಳಷ್ಟು ಮುಂದುವರಿದಿರುವ ಚೀನಾ ಹಾಗೂ ಇಟಲಿ ನಗರಗಳಂತಹ ರಾಷ್ಟ್ರಗಳೇ ಡೆಡ್ಲಿ ಕೊರೋನಾಗೆ ಶೇಕ್-ಶೇಕ್ ಆಗಿವೆ. ಇನ್ನು ಕರ್ನಾಟಕ ಯಾವ ಮಹಾ ಅಲ್ಲವೇ. ಆದ್ದರಿಂದ ನೀವೇ ಯೋಚಿಸಿ.

ಒಂದು ವೇಳೆ ಅನಗತ್ಯವಾಗಿ ಹೊರಗಡೆ ತಿರುಗಾಡಿದ್ರೆ ಕೇಸ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಯಾಕಂದ್ರೆ ಕೊರೋನಾ ವೈರಸ್ ಬಹಳಷ್ಟು ಡೇಜರ್ ಆಗಿದ್ದು, ಅದು ರಾಜ್ಯದಲ್ಲಿ ಅಪಾಯದ ಮಟ್ಟ ಮೀರದಿರಲಿ ಎನ್ನುವ ಕಾರಣ ಸರ್ಕಾರ ಈ ರೀತಿ ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ. 

ಈಗಾಗಲೇ ಕರ್ನಾಟಕ ಬಂದ್‌ ಲೇಟಾಗಿದೆ. ಆದರೂ ಪರವಾಗಿಲ್ಲ ಜನರು ಇದಕ್ಕೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಗಡೆ ಬರಬಾರದು. ಅಗತ್ಯ ವಸ್ತುಗಳು ಮಾತ್ರ ಲಭ್ಯವಿರಲಿವೆ.  

ಏನು ಇರುತ್ತೆ: ಆಸ್ಪತ್ರೆ, ಹಾಲು, ಹಣ್ಣು, ತರಕಾರಿ, ಪೆಟ್ರೋಲ್-ಡೀಸೆಲ್ ಸೇರಿದಂತೆ  ತುರ್ತು ಸೇವೆಗಳು ಮಾತ್ರ ಸಿಗಲಿವೆ. ಇವುಗಳನ್ನ ಹೊರತುಪಡಿಸಿ ಇನ್ನುಳಿದವುಗಳು ಜನರಿಗೆ ಸಿಗುವುದಿಲ್ಲ. ಹಾಗಾದ್ರೆ ಏನೆಲ್ಲ ಸಿಗಲ್ಲ ಎನ್ನುವುದನ್ನ ಒಮ್ಮೆ ನೋಡಿ ಬಿಡಿ.

ಏನಿರಲ್ಲ ನೋಡಿ
* ಯಾವುದೇ  ಆಟೋ ರಿಕ್ಷಾ ಓಲಾ ಊಬರ್  ಇರಲ್ಲ
* ಟ್ಯಾಕ್ಸಿಗಳು ಖಾಸಗಿ ವಾಹನಗಳಿಗೆ ಓಡಾಟ ನಿರ್ಭಂಧ
* ಕೆಎಸ್‌ಆರ್‌ಟಿ ಸೇರಿದಂತೆ ಸರ್ಕಾರದ ಯಾವುದೇ ಸಾರಿಗೆ ಸೇವೆಗಳು ಇರುವುದಿಲ್ಲ.
* ಅಂಗಡಿ, ಬಾರ್, ರೆಸ್ಟೋರೆಂಟ್, ಹೋಟೆಲ್, ಮಾಲ್, ಚಿತ್ರಮಂದಿರಗಳು ಬಂದ್
* ಗುಂಪು-ಗುಂಪಾಗಿ ಓಡಾಡುವುದಕ್ಕೆ ನಿರ್ಬಂಧ
* ಸಭೆ-ಸಮಾರಂಭಗಳು ಮಾಡುವಂತಿಲ್ಲ.
* ಬಟ್ಟೆ ಅಂಗಡಿ, ಜ್ಯುವೆಲ್ಲರಿ, ಹೂವು ,ಪುಸ್ತಕದ ಅಂಗಡಿ‌ ಕ್ಲೋಸ್
* ಶಾಲೆ-ಕಾಲೇಜುಗಳಿರುವುದಿಲ್ಲ. 
* ಒಟ್ಟಿನಲ್ಲಿ ತುರ್ತು ಸೇವೆಗಳನ್ನ ಹೊರತುಪಿಡಿಸಿ ಇನ್ನುಳಿದವು ಸಿಗೋದಿಲ್ಲ.