Asianet Suvarna News Asianet Suvarna News

ಲಾಠಿ ಇಲ್ಲದೆ ಪೊಲೀಸ್ರು ಕೆಲಸ ಮಾಡಬೇಕು: ಭಾಸ್ಕರ್ ರಾವ್ ಆದೇಶ

ಪೊಲೀಸರು ತಮ್ಮ ತಮ್ಮ ಲಾಠಿಗಳನ್ನು ಠಾಣೆಯಲ್ಲೆ ಬಿಟ್ಟು ಬರಬೇಕು| ಸಿಎಆರ್ ಮತ್ತು ಕೆಎಸ್ಆರ್‌ಪಿ ಪೊಲೀಸರು ಮಾತ್ರ ಲಾಠಿ ಇಟ್ಟುಕೊಳ್ಳಬೇಕು| CAR KSRP ಪೊಲೀಸರನ್ನ ಅನಾವಶ್ಯಕವಾಗಿ ಬಂದೋಬಸ್ತ್‌ಗೆ ಬಳಸಿಕೊಳ್ಳಬಾರದು|

Bengaluru City Police Commissioner Bhaskar Rao says Police Do not use Lathi
Author
Bengaluru, First Published Mar 27, 2020, 8:51 AM IST

ಬೆಂಗಳೂರು(ಮಾ.27): ಮಹಾಮಾರಿ ಕೊರೋನಾ ತಡೆಗೆ ಭಾರತ ಲಾಕ್‌ಡೌನ್‌ ಇದೆ. ಈ ಸಂದರ್ಭದಲ್ಲಿ ಮನೆಯಿಂದ ಯಾರೂ ಹೊರಗಡೆ ಬರದೆ ಇರುವ ಕೊರೋನಾ ವೈರಸ್‌ ಅನ್ನು ದೇಶದಿಂದ ಹೊಡೆದೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. 

ಆದರೆ, ಜನರು ಅಗತ್ಯ ಸಾಮಾಗ್ರಿಗಳನ್ನ ಖರೀದಿಸಲು ಮನೆ ಬಿಟ್ಟು ಬಂದಾಗ ಪೊಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ.ಹೀಗಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್ ರಾವ್‌ ಕುಟ್ಟುನಿಟ್ಟಿನ ಆದೇಶವೊಂದನ್ನ ಹೊರಡಿಸಿದ್ದಾರೆ. 

ಕೊರೋನಾ ಆತಂಕ: ಮಂಡ್ಯದ ಮಿಮ್ಸ್‌ಗೆ 50 ಲಕ್ಷ ನೀಡಿದ ಸಂಸದೆ ಸಮಲತಾ

ಪೊಲೀಸರು ಲಾಠಿ ಇಲ್ಲದೆ ಕೆಲಸ ಮಾಡಬೇಕು, ಪೊಲೀಸರು ತಮ್ಮ ತಮ್ಮ ಲಾಠಿಗಳನ್ನು ಠಾಣೆಯಲ್ಲೆ ಬಿಟ್ಟು ಬರಬೇಕು. ಸಿಎಆರ್ ಮತ್ತು ಕೆಎಸ್ಆರ್‌ಪಿ ಪೊಲೀಸರು ಮಾತ್ರ ಲಾಠಿ ಇಟ್ಟುಕೊಳ್ಳಬೇಕು. ಆದರೆ CAR KSRP ಪೊಲೀಸರನ್ನ ಅನಾವಶ್ಯಕವಾಗಿ ಬಂದೋಬಸ್ತ್‌ಗೆ ಬಳಸಿಕೊಳ್ಳಬಾರದು ಎಂದು ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. 

ಲಾಕ್‌ಡೌನ್ ಎಫೆಕ್ಟ್‌: 1 ದಿನದಲ್ಲಿ ತೀರಕ್ಕೆ ಬಂತು 72 ಸಾವಿರಕ್ಕೂ ಹೆಚ್ಚು ಕಡಲಾಮೆ

ಬೆಂಗಳೂರಿನ ಎಲ್ಲ ವಿಭಾಗಕ್ಕೂ ಕಂಟ್ರೋಲ್ ರೂಂ ಮೂಲಕ ವಾಕಿಯಲ್ಲಿ ಆದೇಶ ರವಾನಿಸಿದ್ದಾರೆ. ಪೇಪರ್ ಹುಡುಗರು, ತರಕಾರಿ ಮಾರುವವರಿಗೆ ಸುಖಾ ಸುಮ್ಮನೆ ತೊಂದರೆ ಕೊಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios