ಕೊರೋನಾ ಆತಂಕ: ಮಂಡ್ಯದ ಮಿಮ್ಸ್‌ಗೆ 50 ಲಕ್ಷ ನೀಡಿದ ಸಂಸದೆ ಸುಮಲತಾ

ಭಾರತ ಲಾಕ್‌ಡೌನ್‌|ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಸ್ಪಂದನೆ|  ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೀಡಿದ ಸಂಸದೆ|

Mandya MP Sumalatha Ambareesh Given 50 Lakhs to Mandya MIMS

ಮಂಡ್ಯ(ಮಾ.27): ಮಹಾಮಾರಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು ದೇಶಾದ್ಯಂತ ಜನರು ತಲ್ಲಣಗೊಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರವರೆಗೆ ಭಾರತ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. 

ಇನ್ನು ಇದೇ ಸಂದರ್ಭದಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಂದಿಸಿದ್ದು,  ಮಂಡ್ಯದ ಮಿಮ್ಸ್‌ಗೆ ಕೊರೋನಾ ವಿರುದ್ಧ ಹೊರಾಡುವ ಸಲುವಾಗಿ ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೀಡಿದ್ದಾರೆ.

ಲಾಕ್‌ಡೌನ್ ಎಫೆಕ್ಟ್‌: 1 ದಿನದಲ್ಲಿ ತೀರಕ್ಕೆ ಬಂತು 72 ಸಾವಿರಕ್ಕೂ ಹೆಚ್ಚು ಕಡಲಾಮೆ
 

ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸುಮಲತಾ ಅಂಬರೀಶ್ ಅವರು, ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮಹಾಮಾರಿ ಕೊರೋನಾ ಸೋಂಕಿಗೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಶಯಾಸ್ಪದ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಚಿಕಿತ್ಸೆಗೆ ಸಂಬಂಧಿಸಿದಂತೆ ತುರ್ತು ವೈದ್ಯಕೀಯ ಸೇವೆಯನ್ನ ನೀಡುವ ಸಲುವಾಗಿ ನೀಡುವ ಸಲುವಾಗಿ ಮಂಡ್ಯ ನಗರದ ಮಿಮ್ಸ್‌ ಬೋಧಕ ಆಸ್ಪತ್ರೆಗೆ ವೆಂಟಿಲೇಟರ್‌ ಯಂತ್ರಗಳನ್ನು ಒದಗಿಸಲು 2019-20 ನೇ ಸಾಲಿನ 17ನೇ ಮಂಡ್ಯ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗಯ ಮೊದಲನೇ ಕಂತಿನ ಅನುದಾನದಡಿಯಲ್ಲಿ 50 ಲಕ್ಷ ರೂ. ಹಣವನ್ನ ಬಿಡುಗಡೆಗೊಳಿಸಲು ತುರ್ತು ಅನುಮೋದನೆ ನೀಡಲು ಕೋರಲಾಗಿದೆ. ಹಾಗೂ ಈಗಾಗಲೇ ಉಲ್ಲೇಖಿತ ಪತ್ರದಲ್ಲಿ ಸೂಚಿಸಿರುವ ಮೊದಲನೇ ಕಂತಿನ 50 ಲಕ್ಷ ಕಾಮಗಾರಿ ಬದಲಾವಣೆ ಕುರಿತು ಶೀಗ್ರದಲ್ಲಿ ಸೂಚಿಸಲಾಗುವುದು ಎಂದು ಬರೆದಿದ್ದಾರೆ. 
 

Latest Videos
Follow Us:
Download App:
  • android
  • ios