ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!
2019 ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಬೆಳಕಿಗೆ ಬಂದಿದ್ದ ಮಾರಾಕ ಕೊರೋನಾ ವೈರಸ್ ಈಗ ಜಗತ್ತನ್ನೇ ವ್ಯಾಪಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲೂ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇವತ್ತು ಅಂದ್ರೆ ಶನಿವಾರ ಒಂದೇ ದಿನದಲ್ಲಿ 12 ಹೊಸ ಕೇಸ್‌ಗಳು ಪತ್ತೆಯಾಗಿವೆ. ಹಾಗಾದ್ರೆ ಒಟ್ಟು ಎಷ್ಟು..? ಯಾವ-ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೋನಾ ಕೇಸ್ ದಾಖಲಾಗಿವೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಮಾ.28): ಇಡೀ ಭಾರತ ಲಾಕ್‌ಡೌನ್ ಆದ್ರೂ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕಾಡ್ಗಿಚ್ಚಿನಂತೆ ವ್ಯಾಪಿಸ್ತಿರೋ ಮಹಾಮಾರಿ ಭಾರತದಲ್ಲಿ 900ರ ಗಡಿದಾಟಿ, 1 ಸಾವಿರದತ್ತ ಹೋಗಿದ್ದರೇ, ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ಇತ್ತ ಕರ್ನಾಟಕದಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲಿ 1-2 ಕೇಸ್‌ಗಳು ದೃಢವಾಗುತ್ತಿದ್ದವು. ಇದೀಗ ಪ್ರತಿ ದಿನ 10 ರಿಂದ 15 ಮಂದಿಗೆ ಸೋಂಕು ಕನ್ಫರ್ಮ್ ಆಗುತ್ತಿರುವುದು ಬೆಳಕಿಗೆ ಬರುತ್ತಿವೆ. ಇದರಿಂದ ಮೂರನೇ ಹಂತಕ್ಕೆ ಕಾಲಿಟಿದ್ಯಾ ಎನ್ನುವ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.
ರಾಜ್ಯದಲ್ಲಿ ಒಂದೇ ದಿನ ಗರಿಷ್ಠ ಕೊರೋನಾ ಕೇಸ್, ನಟಿಗೂ ತಟ್ಟಿತಾ ವೈರಸ್?ಮಾ.28ರ ಟಾಪ್ 10 ಸುದ್ದಿ!
ಇವತ್ತು ಅಂದ್ರೆ ಶನಿವಾರ ಒಂದೇ ದಿನದಲ್ಲಿ 12 ಜನರಿಗೆ ಕೊರೋನಾ ಮಾರಿ ಅಂಟಿರುವುದು ದೃಢವಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಇಲ್ಲಿವರೆಗೆ ರಾಜ್ಯದಲ್ಲಿ ಒಟ್ಟು 76 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 3 ಜನರು ಸಾವನ್ನಪ್ಪಿದ್ದರೆ, 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಟ್ಕಳದಲ್ಲಿ ಮತ್ತೆ ಮೂವರಿಗೆ ಕೊರೋನಾ ಕಂಟಕ..!
ಉತ್ತರ ಕನ್ನಡದ ಭಟ್ಕಳದಲ್ಲಿ ನಿನ್ನೆಯಷ್ಟೇ (ಶುಕ್ರವಾರ) 10 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇಂದು (ಶನಿವಾರ) ಮತ್ತೆ ಮೂವರಿಗೆ ಸೋಂಕು ತಗುಲಿದೆ. ದುಬೈನಿಂದ ಬಂದಿದ್ದ 65 ವರ್ಷದ ವ್ಯಕ್ತಿಯ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿಗೂ ವೈರಸ್ ದೃಢವಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್..?
* ಬೆಂಗಳೂರು- 41 ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ ಒಂದು ಸಾವಾಗಿದೆ.
* ಕಲಬುರಗಿ- 3 ಕೊರೋನಾ ಕೇಸ್‌ಗಳು ದೃಢವಾಗಿದ್ದು, ಈ ಪೈಕಿ ಓರ್ವ ವೃದ್ಧ ಸಾವನ್ನಪ್ಪಿದ್ದಾನೆ.
* ಕೊಡಗು- 1
* ಚಿಕ್ಕಬಳ್ಳಾಪುರ-8
* ಮೈಸೂರು- 3
* ಧಾರವಾಡ- 1
* ದಕ್ಷಿಣ ಕನ್ನಡ- 7
* ಉತ್ತರ ಕನ್ನಡ- 7
* ದಾವಣಗೆರೆ- 3
* ಉಡುಪಿ- 1
* ತುಮಕೂರು-1 , ಅದು ಸಾವಾಗಿದೆ.
1 ಲಕ್ಷ ಟೆಸ್ಟಿಂಗ್ ಕಿಟ್ ಆಮದಿಗೆ ಕರ್ನಾಟಕ ನಿರ್ಧಾರ
ಹೌದು.. ಕೊರೋನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಲು ಮುಂದಾಗಿರೋ ಕರ್ನಾಟಕ, ಚೀನಾದಿಂದ 1 ಲಕ್ಷ ಟೆಸ್ಟಿಂಗ್ ಕಿಟ್ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಆದ್ರೆ, ಕೇಂದ್ರ ಸರ್ಕಾರ ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಿದ್ದರಿಂದ ಚೀನಾದಿಂದ ಆಮದು ಮಾಡಿಕೊಳ್ಳೋದೇ ದೊಡ್ಡ ಸವಾಲಾಗಿದೆ. ಈ ನಡುವೆ ಚೀನಾಗೆ ಚಾರ್ಟೆಡ್ ಫ್ಲೈಟ್ ಕಳಿಸಿ ಕಿಟ್ ತರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಚೀನಾ, ಇಟಲಿ ಮೀರಿಸಿದ ಅಮೆರಿಕ!
ಮೈ ಮರೆತರೆ ದೇಶಕ್ಕೆ ಗಂಡಾಂತರ..!
ಅಮೆರಿಕಾದಲ್ಲಿ ಕ್ಷಣ ಕ್ಷಣಕ್ಕೂ ಕೊರೋನಾ ಸೋಂಕಿತರ ಹೆಚ್ಚುತ್ತಿದೆ.. ಈ ನಡುವೆ ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಭಾರತವೂ ಸಹ ಎಚ್ಚರ ತಪ್ಪಿದ್ರೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದೆ.
ಸಾಮೂಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಡೇಂಜರ್ ಜೋನ್‌ಗೆ ಭಾರತ ಹೋಗಲಿದ್ದು, ಅಂತರ ಕಾಯ್ದುಕೊಳ್ಳದಿದ್ದರೆ 20 ಕೋಟಿ ಜನರಿಗೆ ಕೊರೊನಾ ಹರಡುವ ಅಪಾಯವಿದೆ. ಕೇವಲ 60 ದಿನಗಳಲ್ಲಿ 20 ಕೋಟಿ ಜನರಿಗೆ ಸೋಂಕು ಹರಡೋ ಸಾಧ್ಯತೆಯಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರೆ ಭಾರತ ಭಾರೀ ಗಂಡಾಂತರಕ್ಕೆ ಸಿಲುಕಲಿದ್ದು, ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಾದ್ರೆ ಮಾತ್ರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಲಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಕೆ ಕೊಟ್ಟಿದೆ.