ಭಾರತಕ್ಕೆ ವಿಶ್ವಬ್ಯಾಂಕ್ 7500 ಕೋಟಿ ನೆರವು ಘೋಷಣೆ!
ಕೊರೋನಾ ನಿಗಹ: ಭಾರತಕ್ಕೆ ವಿಶ್ವಬ್ಯಾಂಕ್‌ನಿಂದ 7500 ಕೋಟಿ ನೆರವು ಘೋಷಣೆ| ಆರೋಗ್ಯ ಸುರಕ್ಷತೆಗಾಗಿ ಭಾರತಕ್ಕೆ ವಿಶ್ವ ಬ್ಯಾಂಕ್‌ನಿಂದ ಹಿಂದೆಂದೂ ಸಿಗದಷ್ಟು ದೊಡ್ಡ ಮೊತ್ತದ ಪರಿಹಾರ
ವಾಷಿಂಗ್ಟನ್(ಏ.04): ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ವಿಶ್ವ ಬ್ಯಾಂಕ್ ಭಾರತಕ್ಕೆ 7500 ಸಾವಿರ ಕೋಟಿ ರು.(1 ಬಿಲಿಯನ್ ಅಮೆರಿಕನ್ ಡಾಲರ್) ನೆರವು ಘೋಷಿಸಿದೆ. ಆರೋಗ್ಯ ಸುರಕ್ಷತೆಗಾಗಿ ಭಾರತಕ್ಕೆ ವಿಶ್ವ ಬ್ಯಾಂಕ್‌ನಿಂದ ಹಿಂದೆಂದೂ ಸಿಗದಷ್ಟುದೊಡ್ಡಮೊತ್ತದ ಪರಿಹಾರ ನೀಡಿದೆ.
ರೋಗ ತಡೆಗೆ, ರೋಗ ಪತ್ತೆ ಕಾರ್ಯಕ್ಕೆ ಬೇಕಾದ ಅಗತ್ಯ ಸಾಮಗ್ರಿ ಖರೀದಿಸಲು ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುವ ಕ್ರಮಗಳಿಗೆ ವಿನಿಯೋಗ ಮಾಡಿಕೊಳ್ಳುವಂತೆ ಹೇಳಿದೆ.
30 ವರ್ಷಗಳ ಕನಿಷ್ಠಕ್ಕೆ ಕುಸಿಯಲಿದೆ ಜಿಡಿಪಿ!
ವಿಶ್ವ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ತುರ್ತು ಪರಿಹಾರ ನಿಧಿ ಯೋಜನೆಯಡಿಯಲ್ಲಿ 25 ರಾಷ್ಟ್ರಗಳ ನೆರವಿಗೆ ಮುಂದಾಗಿರುವುದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ.