Asianet Suvarna News Asianet Suvarna News

ಕ್ವಾರಂಟೈನ್‌ಗೆ ಮರ ಏರಿದರು!

ಪಶ್ಚಿಮ ಬಂಗಾಳದ 7 ಕೂಲಿ ಕಾರ್ಮಿಕರ ಅಪರೂಪದ ಕುಟುಂಬ| ಕ್ವಾರಂಟೈನ್‌ಗೆ ಮರ ಏರಿದರು!|

West Bengal labourers who recently returned to village quarantine themselves on tree
Author
Bangalore, First Published Mar 30, 2020, 9:09 AM IST

ಕೋಲ್ಕತಾ(ಮಾ.30): ಕೊರೋನಾ ಶಂಕಿತರು 14 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬ ನಿಯಮವನ್ನು ವಿದ್ಯಾವಂತರೇ ಗಾಳಿಗೆ ತೂರುತ್ತಿರುವಾಗ, ಪಶ್ಚಿಮ ಬಂಗಾಳದ 7 ಕೂಲಿ ಕಾರ್ಮಿಕರ ಅಪರೂಪದ ಕುಟುಂಬ, ಸಾಮಾಜಿಕ ಪ್ರತಿ ಮೆರೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇತ್ತೀಚೆಗೆ ಚೆನ್ನೈನಿಂದ ಪಶ್ಚಿಮ ಬಂಗಾಳದಲ್ಲಿ ತಮ್ಮ ಊರಿಗೆ ರೈಲಿನಲ್ಲಿ ಹೋಗಿದ್ದರು. ಈ ಹಿನ್ನೆಲೆ ವೈದ್ಯರ ಬಳಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ತಾವು ಸೋಂಕಿತರಲ್ಲ ಎಂಬುದು ದೃಢಪಟ್ಟಿದೆ. ಆದಾಗ್ಯೂ, ವೈದ್ಯರು 14 ದಿನ ಪ್ರತ್ಯೇಕವಾಗಿರಬೇಕು ಎಂದು ಸೂಚಿಸಿದ್ದಾರೆ.

ಆದರೆ, ತಮ್ಮದು ಒಂದು ಕೋಣೆಯ ಮಣ್ಣಿನ ಮನೆಯಾಗಿದ್ದರಿಂದ, 7 ಮಂದಿ ಪ್ರತ್ಯೇಕವಾಗಿರುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ, ಗ್ರಾಮದ ಒಳಕ್ಕೂ ಹೋಗದೆ ಒಂದು ಆಲದ ಮತ್ತು 2 ಮಾವಿನ ಮರಗಳ ಕೊಂಬೆಗಳಲ್ಲೇ ಕಳೆದ ಒಂದು ವಾರದಿಂದ ವಾಸಿಸುತ್ತಿದ್ದಾರೆ.

Follow Us:
Download App:
  • android
  • ios