Asianet Suvarna News Asianet Suvarna News

ಮನೆಯಲ್ಲೇ ಕುಳಿತು ಮಾಸ್ಕ್ ತಯಾರಿಸೋದು ಹೇಗೆ? ಸ್ಮೃತಿ ಇರಾನಿ ಟ್ಯುಟೋರಿಯಲ್

ಕೊರೋನಾ ವಿರುದ್ಧದ ಹೋರಾಟ/ ಮಾಸ್ಕ್ ತಯಾರಿಸಿದ ಕೇಂದ್ರ ಸಚಿವೆ/ ಮನೆಯಲ್ಲೇ ಕುಳಿತುನ ಮಾಸ್ಕ್ ತಯಾರಿಸುವುದು ಹೇಗೆ? ನಿಮ್ಮ ಬಳಿ ಹೊಲಿಗೆ ಯಂತ್ರ ಇಲ್ಲವಾದರೆ ಏನಾಯ್ತು

Union Minister Smriti Irani Mask Making Tutorial During Coronavirus Lockdown
Author
Bengaluru, First Published Apr 10, 2020, 3:50 PM IST

ನವದೆಹಲಿ(ಏ. 10)  ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಜನರಿಗೆ ಮಾಸ್ಕ್ ಮತ್ತು ಸಾನಿಟೈಸರ್ ಅತಿ ಅಗತ್ಯದ ವಸ್ತುಗಳಾಗಿವೆ. ಇದೆಲ್ಲದರ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾಸ್ಕ್ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಂತಹಂತವಾಗಿ ಮಾಸ್ಕ್ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ. 

ಬಿಳಿ ಬಟ್ಟೆಯನ್ನು ಕಟ್ ಮಾಡುವುದರಿಂದ ಇರಾನಿ ತಮ್ಮ ಟ್ಯುಟೋರಿಯಲ್ ಆರಂಭಿಸಿದ್ದಾರೆ.  ನಿಮ್ಮ ಬಳಿ ಮಶಿನ್ ಇಲ್ಲವಾದರೆ ಏನಾಯ್ತು ಸೂಜಿ ದಾರದ ಮೂಲಕವೇ ಮಾಸ್ಕ್ ಸಿದ್ಧ ಮಾಡಿಕೊಳ್ಳಿ ಎಂದು ಇರಾನಿ ಹೇಳುತ್ತಾ ಹೋಗಿದ್ದಾರೆ.

ವೈದ್ಯರಿಗೆ ಐಷಾರಾಮಿ ಹೊಟೇಲ್ ಬಿಟ್ಟುಕೊಟ್ಟ ನಟ

ಒಂದಾದ ಮೇಲೆ ಒಂದರಂತೆ ಮಾಸ್ಕ್ ತಯಾರಿಕೆಯ ಸ್ಟೆಪ್ ತೋರಿಸಿರುವ ಕೇಂದ್ರ ಜವಳಿ ಸಚಿವೆ ಮನೆಯಲ್ಲೇ ಇರಿ ಎಂಬ ಸಂದೇಶ ನೀಡಿದ್ದಾರೆ. ಕಾರಣವಲ್ಲಿದೇ ಹೊರಗೆ ಓಡಾಡಬೇಡಿ. ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಕೇಂದ್ರ ಸಚಿಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಏಪ್ರಿಲ್ 14 ರ ತನಕ ಲಾಕ್ ಡೌನ್ ಆದೇಶ ನೀಡಿದೆ. ಈ ನಡುವೆ ಭಾರತದಲ್ಲಿ ಹತ್ತಿತ ಹತ್ತಿರ 8 ಸಾವಿರ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಏಪ್ರಿಲ್ 30 ರವರೆಗೂ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ. 

Follow Us:
Download App:
  • android
  • ios