ನವದೆಹಲಿ(ಏ. 01) ಕೇಂದ್ರ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸಡೆಸಿದ್ದಾರೆ. ದೆಹಲಿಯ ಮಸೀದಿಯೊಂದರಲ್ಲಿನ ಜಮಾತ್ ಆತಂಕ ಇಡೀ ದೇಶವನ್ನೇ ವ್ಯಾಪಿಸಿರುವಾಗ ಈ ಸಭೆ ನಡೆದಿದ್ದು ಹಲವಾರು ಅಂಶಗಳನ್ನು ಸ್ಪಷ್ಟಪಡಿಸಲಾಗಿದೆ.

ಕೊರೋನಾ ಮಾರಿ ಹಾವಳಿ ತಡೆಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮತ್ತೊಂದಿಷ್ಟು ಸ್ಪಷ್ಟ ನಿರ್ದೇಶನಗಳನ್ನು ರವಾನಿಸಿದೆ.

* ಜಮಾತ್ ನಲ್ಲಿ ಭಾಗವಹಿಸಿದ್ದವರ ಸಂಪೂರ್ಣ ಮಾಹಿತಿ ಮತ್ತು ಅವರೊಂದಿಗೆ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಅತಿ ಶೀಘ್ರವಾಗಿ ಪತ್ತೆಮಾಡಿ ಸಾನಿಟೈಸ್ ಮಾಡಿಸುವ ಕೆಲಸ ಮಾಡಿ

* ಪತ್ತೆ ಮಾಡುವ ಕೆಲಸಕ್ಕೆ ಜನರ ಸಹಕಾರವನ್ನು ಬಳಸಿಕೊಳ್ಳಿ

* ಜಮಾತ್ ನಲ್ಲಿ ಭಾಗವಹಿಸಿದ್ದ ವಿದೇಶಿಯರು ವೀಸಾ ಕಂಡಿಶನ್ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ.  ವೀಸಾ ಕಂಡಿಶನ್ ಉಲ್ಲಂಘನೆ ಮಾಡಿದ ವಿದೇಶಗರ ಮೇಲೆ ಆಯಾ ರಾಜ್ಯಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.

ಯಾವ ಮಾಸ್ಕ್ ಎಷ್ಟು ಸೇಫ್? ಇಲ್ಲಿದೆ ಸಂಪೂರ್ಣ ವಿವರ

* ಮುಂದಿನ ಒಂದು  ವಾರದ ಒಳಗಾಗಿ ರಾಜ್ಯ ಸರ್ಕಾರಗಳು ಪಿಎಂ ಗರೀಬ್ ಕಲ್ಯಾಣ್ ಯೋಜನೆಯನ್ನು ಅನುಷ್ಠಾನ ಮಾಡಿ ವರದಿ ನೀಡಬೇಕು. ಅರ್ಹರಿಗೆ ತುರ್ತು ಸಂದರ್ಭದಲ್ಲಿ ಹಣಕಾಸು ಸಿಗುವಂತೆ ನೋಡಿಕೊಳ್ಳಬೇಕು. ಸೋಶಿಯಲ್ ಡಿಸ್ಟಂಸಿಂಗ್ ಭಂಗವಾಗದಂತೆ ನೋಡಿಕೊಳ್ಳಬೇಕು.

* ರಾಜ್ಯ-ರಾಜ್ಯಗಳ ನಡುವಿನ ಸರಕು ಸಾಗಾಟದ ಮೇಲೆಯೂ ಗಮನ ಇರಬೇಕು.

*ಅಗತ್ಯ ವಸ್ತುಗಳ ಉತ್ಪಾದನೆಗೆ ಅಡ್ಡಿ ಇಲ್ಲ, ಆದರೆ ಇಲ್ಲಿಯೂ ಸೋಶಿಯಲ್ ಡಿಸ್ಟೆಂಸಿಂಗ್ ಕಾಪಾಡಿಕೊಳ್ಳಬೇಕು