ಜೈಪುರ(ಜೂ. 28)  ಮದುವೆ ಸಮಾಂಭಕ್ಕೆ ಇಂತಿಷ್ಟೆ ಜನರನ್ನು ಆಹ್ವಾನಿಸಬೇಕು ಎಂದು ಕೊರೋನಾ ಕಾರಣಕ್ಕೆ ಸರ್ಕಾರ ನಿಯಮ ಮಾಡಿದೆ. ಈ ನಿಯಮ ಮುರಿದ ಕುಟುಂಬವೊಂದು ಬರೋಬ್ಬರಿ 6.26  ಲಕ್ಷ ರೂ. ದಂಡ ತುಂಬಬೇಕಾಗಿದೆ.

ಕೊರೋನಾ ನಿಯಮ ಮುರಿದ ಕಾರಣಕ್ಕೆ ಮೂರು ದಿನದ ಒಳಗಾಗಿ ಕುಟುಂಬ  6.26  ಲಕ್ಷ ರೂ. ದಂಡ ತುಂಬಬೇಕು ಎಂದು ಜೈಪುರ ಆಡಳಿತ ಸೂಚಿಸಿದೆ.

ಬೆಂಗಳೂರಿನಲ್ಲಿ ಹೊಸ ಕೋವಿಡ್ ಕೇಂದ್ರಗಳು, ಎಲ್ಲೆಲ್ಲಿ?

ಐವತ್ತು ಜನರನ್ನು ಆಹ್ವಾನಿಸಲು ಅನುಮತಿ ಪಡೆದಿದ್ದ ಕುಟುಂಬದ ಮದುವೆಗೆ  250  ಜನರು ಬಂದಿದ್ದರು.  ಮಾಸ್ಕ್ ಧರಿಸಿದ್ದು ಕಂಡುಬರಲಿಲ್ಲ, ಸಾಮಾಜಿಕ ಅಂತರದ ಕತೆ ಕೇಳಲೇಬೇಡಿ. ಮದುಮಗ ಸೇರಿದಂತೆ  15 ಜನರಿಗೆ ಕೊರೋನಾ ದೃಢಪಟ್ಟಿತ್ತು.  ಇದಾದ ನಂತರ ಮದುವೆಗೆ ಆಗಮಿಸಿದ್ದ  58   ಜನರನ್ನು ಕ್ವಾರಂಟೈನ್ ಮಾಡಿ ಸೋಂಕು ಕಾಣಿಸಿಕೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಜೂನ್  22  ರಂದು ನಡೆದ ಮದುವೆಗೆ ಸಂಬಂಧಿಸಿ ಕುಟುಂಬದ ಮೇಲೆ ಎಫ್ ಐಆರ್ ಸಹ ದಾಖಲಾಗಿದೆ.  ನಿಯಮ ಮುರಿದ ಕುಟುಂಬ 6.26  ಲಕ್ಷ ರೂ. ದಂಡವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕು ಎಂದು ಭಿಲ್ವಾರಾ ಡಿಸಿ ಆದೇಶಿಸಿದ್ದಾರೆ.