ಏ.14ಕ್ಕೆ ಲಾಕ್‌ಡೌನ್ ಅಂತ್ಯ: ಪ್ರಧಾನಿ ಮೋದಿ ಸುಳಿವು
ಏ.14ಕ್ಕೆ ಲಾಕ್‌ಡೌನ್ ಮುಗಿದ ನಂತರ ಜನರೆಲ್ಲ ಏಕಾಏಕಿ ಮನೆಯಿಂದ ಹೊರಬರದೆ ಹಂತ ಹಂತವಾಗಿ ಹೊರಬರುವಂತೆ ನೋಡಿಕೊಳ್ಳಿ. ಇದರ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಒಂದೇ ರೀತಿಯ ‘ಹೊರಬರುವ ನೀತಿ’ ರೂಪಿಸಲು ಸಲಹೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.
ನವದೆಹಲಿ(ಏ.03): ಏ.14ಕ್ಕೆ ಲಾಕ್‌ಡೌನ್ ಮುಗಿದ ನಂತರ ಜನರೆಲ್ಲ ಏಕಾಏಕಿ ಮನೆಯಿಂದ ಹೊರಬರದೆ ಹಂತ ಹಂತವಾಗಿ ಹೊರಬರುವಂತೆ ನೋಡಿಕೊಳ್ಳಿ. ಇದರ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಒಂದೇ ರೀತಿಯ ‘ಹೊರಬರುವ ನೀತಿ’ ರೂಪಿಸಲು ಸಲಹೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಅದರೊಂದಿಗೆ ಅವರು ಏ.14ಕ್ಕೇ ಲಾಕ್‌ಡೌನ್ ಮುಗಿಯುವ ಸುಳಿವನ್ನೂ ನೀಡಿದ್ದಾರೆ.
ಕೊರೋನಾವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಭೆಯಲ್ಲಿ, ವೈರಸ್ ಹರಡುವುದನ್ನು ತಡೆಯಲು ಮುಂದಿನ ಕೆಲ ವಾರಗಳ ಕಾಲ ವೈರನು ಪರೀಕ್ಷೆ, ಪತ್ತೆ, ಐಸೋಲೇಷನ್ ಹಾಗೂ ಕ್ವಾರಂಟೈನ್ ಬಗ್ಗೆ ತೀವ್ರ ಗಮನ ಹರಿಸಬೇಕು. ಪ್ರತಿಯೊಬ್ಬ ಭಾರತೀಯನನ್ನೂ ರಕ್ಷಿಸುವುದು ನಮ್ಮ ಗುರಿ ಎಂದಿದ್ದಾರೆ.
ಕೊರೋನಾ ರೋಗಿಗಳ ಚಿಕಿತ್ಸೆಗೆ ಮಾಜಿ ಸಿಎಂ ಪುತ್ರ..! ವೈಟ್‌ಕೊಟ್ ಹಾಕ್ತಾರಾ ಯತೀಂದ್ರ ಸಿದ್ದರಾಮಯ್ಯ..?
ಇದಕ್ಕಾಗಿ ವೈದ್ಯಕೀಯ ಸಲಕರಣೆಗಳು ಮತ್ತು ಔಷಧಗಳ ಪೂರೈಕೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ. ಕೊರೋನಾ ಸೋಂಕಿತರಿಗಾಗಿ ಪ್ರತ್ಯೇಕ ಆಸ್ಪತ್ರೆ ಮೀಸಲಿಡಿ. ಈ ಅವಧಿಯಲ್ಲಿ ಜನರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸುವುದು ಬಹಳ ಮುಖ್ಯ. ಹೀಗಾಗಿ ಲಾಕ್‌ಡೌನ್ ಮುಗಿದ ಮೇಲೆ ಜನರು ಹಂತ ಹಂತವಾಗಿ ಮನೆಗಳಿಂದ ಹೊರಬರುವಂತೆ ಮಾಡಲು ಏನು ಮಾಡಬಹುದು ಎಂಬುದಕ್ಕೆ ಸಲಹೆ ನೀಡಿ ಎಂದು ಕೋರಿದರು.
ಜೊತೆಗೆ ಹೊಸ ಹಾಟ್ ಸ್ಪಾಟ್‌ಗಳನ್ನು ಗುರುತಿಸಿ, ಸೋಂಕು ಮತ್ತಷ್ಟುಹೆಚ್ಚಳವಾಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಕೊರೋನಾ ಹರಡತೊಡಗಿದ ನಂತರ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನಡೆಸಿದ 2ನೇ ವಿಡಿಯೋ ಕಾನ್ಫರೆನ್ಸ್ ಸಭೆ ಇದಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಗೂ ಉನ್ನತ ಅಧಿಕಾರಿಗಳು ಕೂಡ ಭಾಗವಹಿಸಿದ್ದರು.
"