Asianet Suvarna News Asianet Suvarna News

ಕೊರೋನಾ ಭೀತಿ ನಡುವೆಯೇ ಬಂತು ಸಮಾಧಾನಕರ ಸುದ್ದಿ!

ಕೊರೋನಾ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಬಂತು ಸಮಾಧಾನ ಉಂಟು ಮಾಡುವ ಸುದ್ದಿ| ಈ ರಾಜ್ಯದಲ್ಲಿ ಕಳೆದ  24 ಗಂಟೆಯಲ್ಲಿ ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ| ಹೆಚ್ಚು ಖುಷಿ ಬೇಡ, ಕ್ರಮಗಳನ್ನು ಪಾಲಿಸಿ ಅಂದ್ರು ಸಿಎಂ

No new coronavirus case in Delhi in 24 hours Says CM Arvind Kejriwal
Author
Bangalore, First Published Mar 24, 2020, 3:55 PM IST

ನವದೆಹಲಿ(ಮಾ.24): ಇಡೀ ವಿಶ್ವದಲ್ಲಿ ಕೊರೋನಾ ಭೀತಿ ಮನೆ ಮಾಡಿದೆ. ಈವರೆಗೆ 16500 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿದೆ. ಆದರೆ ಈ ಎಲ್ಲಾ ಭಯದ ವಾತಾವರಣದ ನಡುವೆ ರಾಷ್ಟ್ರರಾಜಧಾನಿಯಿಂದ ನಿಟ್ಟುಸಿರು ಬಿಡುವ ಸುದ್ದಿ ಬಂದೆರಗಿದೆ. ಇಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿತ ಹೊಸ ಪ್ರಕರಣ ದಾಖಲಾಗಿಲ್ಲ, ಈ ಮಾಹಿತಿ ಖುದ್ದು ಸಿಎಂ ಅರವಿಂಗದ್ ಕೇಜ್ರೀವಾಲ್ ಬಹಿರಂಗಪಡಿಸಿದ್ದಾರೆ. ಹೀಗಿದ್ದರೂ ಇಷ್ಟರಲ್ಲೇ ಖುಷಿ ಪಡಬೇಡಿ, ಮುಂದೆ ಕೂಡಾ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರೀವಾಲ್ 'ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಐದು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೀಗಂತ ಹೆಚ್ಚು ಖುಷಿ ಪಡಬೇಡಿ. ಇನ್ನೂ ಹಲವಾರು ಸವಾಲುಗಳನ್ನೆದುರಿಸುವುದಿದೆ. ಯಾವುದೇ ಸ್ಥಿತಿಯಲ್ಲೂ, ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಬೇಕಿದೆ' ಎಂದಿದ್ದಾರೆ.

ಭಾರತದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದ್ದು, ಪೀಡಿತರ ಸಂಖ್ಯೆ 511ಕ್ಕೆ ತಲುಪಿದ್ದು, ಮೃತರ ಸಂಖ್ಯೆ 10ಕ್ಕೇರಿದೆ. ಕೇರಳದಲ್ಲಿ ಕೊರೋನಾಹಾವಳಿ ಅತಿ ಹೆಚ್ಚು ಇದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿ ಈವರೆಗೆ 95ಸೋಂಕಿತ ಪ್ರಕರಣಗಳು ದಾಖಲಾಗಿವೆ. 

Follow Us:
Download App:
  • android
  • ios