ಕೊರೋನಾ ವೈರಸ್ ಭೀತಿಯಿಮದ ಜನರಿಗೆ ಆಗುವ ತೊಂದರೆಗಳನ್ನ ಅರಿತಿರುವ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹಾಗಾದ್ರೆ ಅವರು ಏನೆಲ್ಲಾ ಘೋಷಿಸಿದರು ಎನ್ನುವ ವಿವರ ಈ ಕೆಳಗಿನಂತಿದೆ.

ನವದೆಹಲಿ, (ಮಾ.24): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸೇರಿದಂತೆ, ದೇಶದ ರಾಜ್ಯ ಸರ್ಕಾರಗಳು ಸಹ ಇನ್ನಿಲ್ಲದ ಕಸರತ್ತು ನಡೆಸಿದೆ. ಇದಕ್ಕಾಗಿ ಕೆಲ ದಿಟ್ಟ ಕ್ರಮಗಳನ್ನ ಕೈಗೊಳ್ಳುತ್ತಿವೆ.

Add Asianetnews Kannada as a Preferred SourcegooglePreferred

ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತೊಂದೆಡೆ ಕೊರೋನಾ ಭೀತಿಯಿಂದ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳನ್ನ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಎದುರಗಬಹುದಾದ ತೊಂದರೆಗಳನ್ನ ನಿವಾರಿಸಲು ತೆರಿಗೆಯಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ.

Scroll to load tweet…

ಈ ಬಗ್ಗೆ ಕೇಂದ್ರ ವಿತ್ತ (ಹಣಕಾಸು) ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದರು.

ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಹೈಲೆಟ್ಸ್
*2018-19ರ ಐಟಿ ರಿಟರ್ನ್ಸ್ ಕೊನೆ ದಿನವನ್ನು ಜೂನ್ 31,2020ಗೆ ವಿಸ್ತರಣೆ ಮಾಡಲಾಗಿದೆ.
* ತೆರಿಗೆ ಪಾವತಿ ವಿಳಂಬಕ್ಕೆ ಬಡ್ಡಿ ದರವನ್ನ ಶೇ.12ರಿಂದ 9ಕ್ಕೆ ಇಳಿಕೆ.
* TDSಗೆ ಅವಧಿ ವಿಸ್ತರಣೆ ಇಲ್ಲ.( ವಿಳಂಬವಾದ ಹೂಡಿಕೆಗೆ ಶೇ.18ರ ಬದಲು ಶೇ.9ಕ್ಕೆ ಇಳಿಕೆ.
*ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ಕ್ಕೆ ನೀಡಲಾಗಿದ್ದ ಕೊನೆ ದಿನಾಂಕವನ್ನ ಜೂನ್ 30,2020ರ ವರೆಗೆ ವಿಸ್ತರಣೆ.
* ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳ GSTರಿಟರ್ನ್ಸ್ ಸಲ್ಲಿಕೆಗೆ ಇದ್ದ ಕೊನೆ ದಿನಾಂಕವನ್ನ ಜೂನ್ 30,2020ರ ವರೆಗೆ ಮುಂದೂಡಿಕೆ
*5 ಕೋಟಿ ರೂಗಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳಿಗೆ ಲೇಟ್ ಫೀಸ್‌ಗೆ ದಂಡವಿಲ್ಲ.
*GST ಪರಿಹಾರ ಯೋಜನೆ ಅಡಿ ಲಾಭ ಪಡೆಯುವವರಿಗೆ ಜೂನ್ 30ರವರೆಗೆ ಗಡುವು.
* ಯಾವುದೇ ATMನಿಂದ ಎಷ್ಟು ಸಲ ಹಣ ಡ್ರಾ ಮಾಡಿದರೂ ಚಾರ್ಜ್ ಇಲ್ಲ (ಮುಂದಿನ ಮೂರು ತಿಂಗಳು ವರೆಗೆ ಮಾತ್ರ)
* ಆಮದು / ರಫ್ತುದಾರರಿಗೆ ಪರಿಹಾರ: ಕಸ್ಟಮ್ಸ್ ಇಲಾಖೆ ತನ್ನ ಕರ್ತವ್ಯ ಪಾಲನೆಯಲ್ಲಿದೆ. ಜೂನ್ 30, 2020 ರವರೆಗೆ ಈ ವಿಭಾಗವು 24x7 ಅತ್ಯಗತ್ಯ ಸೇವೆಯಾಗಿ ಮುಂದುವರಿಯಲಿದೆ.

Scroll to load tweet…