ನವದೆಹಲಿ(ಏ.02): ಕೊರೋನಾ ವೈರಸ್‌ ನಡುವೆಯೇ ಮಾರ್ಚ್‌ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಸರ್ಕಾರಿ ನೌಕರರಿಗೆ ಪ್ರಧಾನ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಖ್ಯವಾಗಿ ಮಾರ್ಚ್ 31. 2020ರಂದು ನಿವೃತ್ತಿಯಾಗುವ ನೌಕರರಿಗಾಗಿ ಈ ಸೂಚನೆ ನೀಡಲಾಗಿದೆ.

2020 ಮಾರ್ಚ್ 31ರಂದು ನಿವೃತ್ತಿಯಾಗಲಿದ್ದ ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡುತ್ತಿದ್ದರೂ, ಅಥವಾ ಕಷೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಅಂದಿಗೆ ಅವರ ನಿವೃತ್ತಿಯಾಗುತ್ತದೆ. ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದ್ದು, ಯಾರೂ ಮನೆಯಿಂದ ಹೊರಗೆ ಓಡಾಡುವಂತಿಲ್ಲ.

ರಾಜ್ಯದ ನೌಕರರ ವೇತನ ಕಡಿತ ಇಲ್ಲ: ಸಿಎಂ ಸ್ಪಷ್ಟನೆ

ನಿವೃತ್ತಿ ನಿಯಮದ ಪ್ರಕಾರ ಮಾರ್ಚ್ 31ರಂದು ನಿವೃತ್ತಿಯಾಗುವ ಜನರು ಮನೆಯಿಂದ ಅಥವಾ ಕಷೇರಿಯಿಂದ ನಿವೃತ್ತಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ. 1400 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.