Asianet Suvarna News Asianet Suvarna News

ಕೊರೋನಾ: ಅಪಾ​ಯ​ದ​ಲ್ಲಿ ಇರು​ವ​ವ​ರಿಗೆ ಹೈಡ್ರೋ​ಕ್ಸಿ ಮಾತ್ರೆ ನೀಡಲು ಶಿಫಾರಸು!

ಕೊರೋನಾ: ಅಪಾ​ಯ​ದ​ಲ್ಲಿ ಇರು​ವ​ವ​ರಿಗೆ ಹೈಡ್ರೋ​ಕ್ಸಿ ಮಾತ್ರೆ ನೀಡಲು ಶಿಫಾರಸು!| ಶಂಕಿತ ಮತ್ತು ಕೊರೋನಾ ವೈರಸ್‌ ದೃಢಪಟ್ಟರೋಗಿ​ಗ​ಳಿಗೆ ಚಿಕಿತ್ಸೆ ನೀಡು​ತ್ತಿ​ರುವ ಆರೋಗ್ಯ ಕಾರ್ಯ​ಕ​ರ್ತರಿಗೆ ರೋಗ ಬರ​ದಂತೆ ತಡೆ​ಯಲು ಮಾತ್ರೆ

Modi govt assesses chloroquine stock a potential COVID 19 drug as it awaits WHO results
Author
Bangalore, First Published Mar 24, 2020, 1:00 PM IST

ನವ​ದೆ​ಹ​ಲಿ(ಮಾ.24): ಕೊರೋನಾ ನಿಯಂತ್ರ​ಣಕ್ಕೆ ಭಾರ​ತೀಯ ವೈದ್ಯ​ಕೀಯ ಸಂಶೋ​ಧನಾ ಮಂಡಳಿ ರಚಿ​ಸಿರುವ ರಾಷ್ಟ್ರೀಯ ಕಾರ್ಯ​ಪಡೆ ಅತ್ಯಂತ ಅಪಾ​ಯ​ದ​ಲ್ಲಿ​ರುವ ಜನ​ರು ಅಥವಾ ಆರೋಗ್ಯ ಕಾರ್ಯ​ಕ​ರ್ತ​ರಿಗೆ ಹೈಡ್ರೋ​ಕ್ಸಿ- ಕ್ಲೋರೊ​ಕ್ವೈ​ನ್‌ ಎಂಬ ಮಾತ್ರೆ​ ನೀಡ​ಬೇಕು ಎಂದು ಶಿಫಾ​ರಸು ಮಾಡಿದೆ.

ಶಂಕಿತ ಮತ್ತು ಕೊರೋನಾ ವೈರಸ್‌ ದೃಢಪಟ್ಟರೋಗಿ​ಗ​ಳಿಗೆ ಚಿಕಿತ್ಸೆ ನೀಡು​ತ್ತಿ​ರುವ ಆರೋಗ್ಯ ಕಾರ್ಯ​ಕ​ರ್ತರಿಗೆ ರೋಗ ಬರ​ದಂತೆ ತಡೆ​ಯಲು ಹೈಡ್ರೋ​ಕ್ಸಿ- ಕ್ಲೋರೊ​ಕ್ವೈ​ನ್‌ ಮಾತ್ರೆ​ ನೀಡ​ಬೇಕು. ಪ್ರಯೋ​ಗಾ​ಲ​ಯ​ಗಳಲ್ಲಿ ಅಧ್ಯ​ಯನದ ವೇಳೆ ಈ ಮಾತ್ರೆ ಕೊರೋನಾ ವೈರಸ್‌ ವಿರುದ್ಧ ಪರಿ​ಣಾ​ಮ​ಕಾರಿ ಆಗಿ ಕಾರ್ಯ​ನಿ​ರ್ವ​ಹಿ​ಸಿ​ರು​ವುದು ಕಂಡು ಬಂದಿದೆ.

ಹೀಗಾಗಿ ಅಪಾ​ಯ​ದ​ಲ್ಲಿ​ರುವ ಜನ​ರಿಗೆ ಈ ಮಾತ್ರೆ​ಗ​ಳನ್ನು ನೀಡ​ಬ​ಹುದು ಎಂದು ಭಾರ​ತೀಯ ಔಷಧ ನಿಯಂತ್ರಣ ನಿರ್ದೇ​ಶ​ನಾ​ಲಯ (ಡಿ​ಜಿ​ಸಿ​ಐ) ಅನು​ಮೋ​ದನೆ ನೀಡಿದೆ.

Follow Us:
Download App:
  • android
  • ios