ರಾಂಪುರ್(ಮಾ.30): ಆಯಾ ಜಿಲ್ಲಾಡಳಿತ ಭಾರತ ಲಾಕ್‌ಡೌನ್ ವೇಳೆ ತುರ್ತು ಸೇವೆಯಿಂದ ಹಿಡಿತು ಎಲ್ಲಾ ಸೇವೆಯನ್ನು ನೀಡುತ್ತಿದೆ. ಜನರಿಗೂ ಅನೂಕೂಲವಾಗಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಹೀಗೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿನ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ವ್ಯಕ್ತಿಯೋರ್ವ ಕರೆ ಮಾಡಿ ಲಾಕ್‌ಡೌನ್ ಕಾರಣ ತನಗೆ ಸಮೋಸ ಸಿಗುತ್ತಿಲ್ಲ. ಆದಷ್ಟೂ ಬೇಗ ಸಮೋಸ ಕಳಹಿಸಿಕೊಡುವಂತೆ ಹೇಳಿದ್ದಾನೆ.

ರಾಜ್ಯದಲ್ಲಿ ಲಾಕ್‌ಡೌನ್ ಎಲ್ಲಿಯವರೆಗೆ? ಸಿಎಂ ಪತ್ರಿಕಾ ಪ್ರಕಟಣೆ ರಿಲೀಸ್

ಮೊದಲ ಕರೆಗೆ ಸದ್ಯ ತುರ್ತು ಅಗತ್ಯವಿದ್ದರೆ ಕರೆ ಮಾಡಿ ಸುಖಾಸುಮ್ಮನೆ ಕರೆ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ. ಆದರೆ  ಆತ ಮಾತ್ರ ಕೇಳಲೇ ಇಲ್ಲ. ಪದೇ ಪದೇ ಕರೆ ಮಾಡಿ ಸಮೋಸ ಕಳುಹಿಸುವಂತೆ ಕಾಟ ಕೊಡಲು ಆರಂಭಿಸಿದ್ದಾನೆ. ಕಂಟ್ರೋಲ್ ರೂಂ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮತ್ತೆ ಕರೆ ಮಾಡಿದಾಗ ಜಿಲ್ಲಾಧಿಕಾರಿಯೇ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಆತನ ವಿಳಾಸ ಕೇಳಿ 2 ಸಮೋಸ ಬದಲು 4 ಸಮೋಸ ಕಳುಹಿಸಲು ಒಪ್ಪಿಕೊಂಡಿದ್ದಾರೆ.

 

ಕರೆ ಬಳಿಕ 4 ಸಮೋಸ ಆರ್ಡರ್ ಮಾಡಿ, ಇಬ್ಬರು ಅಧಿಕಾರಿಗಳಿಗೆ ಆತನ ಬಳಿ ತೆರಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ವ್ಯಕ್ತಿಗೆ ಆತನ ಪ್ರದೇಶ ಶುಚಿ ಮಾಡುವ ಶಿಕ್ಷೆಯನ್ನು ನೀಡಿದ್ದಾರೆ. ಶಿಕ್ಷೆಯ ಆರ್ಡರ್ ಹಾಗೂ ಸಮೋಸ ಹಿಡಿದ ಅಧಿಕಾರಿಗಳು ನೇರವಾಗಿ ಕರೆ ಮಾಡಿದ ವ್ಯಕ್ತಿ ಮನೆಗೆ ಬಂದಿದ್ದಾರೆ. ಬಾಗಿಲು ತೆರೆದಾಗ 4 ಸಮೋಸ ನೋಡಿ ಅಹಂಕಾರದಿಂದ ಬೀಗಿದ ವ್ಯಕ್ತಿಗೆ ಶಿಕ್ಷೆಯ ಆರ್ಡರ್ ಕೂಡ ಕೈಗೆ ನೀಡಿದ್ದಾರೆ.

 

ಅಷ್ಟರಲ್ಲೇ ಆತನಿಗೆ ತನ್ನ ತಪ್ಪಿನ ಅರಿವಾಗಿದೆ. ಅಧಿಕಾರಿಗಳ ಜೊತೆ ರಸ್ತೆ, ಅಂಗಡಿ ಮುಂಗಟ್ಟುಗಳ ಪ್ರದೇಶ, ಮನೆ, ಕಟ್ಟಗಳ ಸಂದಿಯಲ್ಲಿ ಕ್ರಿಮಿನಾಶಕ ಸಿಂಪಡಿಸಿ ಶುಚಿ ಕಾರ್ಯ ಮಾಡಿದ್ದಾನೆ. ಈತ ಈ ರೀತಿ ಶುಚಿತ್ವ ಮಾಡುವ ಫೋಟೋವನ್ನು ಜಿಲ್ಲಾಧಿಕಾರಿ ಸಾಮಾಜಿಕ ಜಾಲತಾಣಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ  ಉತ್ತರ ಪ್ರದೇಶದಲ್ಲಿ ವೈರಲ್ ಆಗಿದೆ.