Asianet Suvarna News Asianet Suvarna News

ದೆಹಲಿ ಬಸ್ ನಿಲ್ದಾಣದಲ್ಲಿ ಜನಸಾಗರ; ಕೊರೋನಾ ನಿಯಂತ್ರಣದ ಮಾತು ಬಲು ದೂರ!

ಪ್ರಧಾನಿ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಘೋಷಿಸಿದರೂ ಜನರೂ ಮಾತ್ರ ಗಂಭೀರವಾಗಿ ತೆಗದುಕೊಂಡಿಲ್ಲ. ಲಾಕ್‌ನಿಂದ ನಿರ್ಗತಿಕರು ಸೇರಿದಂತೆ ಹಲವರಿಗೆ ನಿಜಕ್ಕೂ ಸಮಸ್ಯೆಗಳಾಗಿದೆ ನಿಜ. ಅಂತವರ ನೆರವಿಗೆ ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ನಿಂತಿವೆ. ಆದರೆ ಲಾಕ್‌ಡೌನ್, ಕೆಲಸ ಇಲ್ಲ ಎಂದಾಗ ಜನರೂ ತಮ್ಮ ತಮ್ಮ ಊರಿಗೆ ಹೊರಡುತ್ತಿದ್ದಾರೆ. ವೈರಸ್ ಹರಡುವಿಕೆ, ಮೋದಿ ಮನವಿಗೆ ಕಿವಿಗೊಡದ ಜನರು ಬಸ್‌ ನಿಲ್ಡಾಣದಲ್ಲಿ ತಮ್ಮ ಬಸ್‌ಗಾಗಿ ಕಾಯುತ್ತಿರುವ ದೃಶ್ಯ ದೆಹಲಿಯಲ್ಲಿ ಕಂಡುಬರುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತೋ, ಹೆಚ್ಚಾಗುತ್ತೋ ನೀವೇ  ಊಹಿಸಿಕೊಳ್ಳಿ

Labours workers heading towards Delhi Isbt to catch bus to their native after lock down
Author
Bengaluru, First Published Mar 28, 2020, 8:26 PM IST

ದೆಹಲಿ(ಮಾ.28): ಪರಿಸ್ಥಿತಿ ಎಷ್ಟೇ ಗಂಭೀರವಾಗಿರಲಿ, ತುರ್ತು ಪರಿಸ್ಥಿತಿಯೇ ಎದುರಾಗಲಿ, ಕೆಲಸ ಇಲ್ಲದಿದ್ದರೆ ಮನೆಗೆ ಹೋಗುವ ಜನ ನಾವು. ಪ್ರಧಾನಿ ಮನವಿ ಏನೇ ಇರಲಿ, ನಾನು ಚೆನ್ನಾಗಿದ್ದೇನೆ, ಇನ್ನೊಬ್ಬರ ಆರೋಗ್ಯ ನನಗ್ಯಾಕೆ ಅನ್ನೋ ಮನೋಭಾವದಿಂದ ಜನರೂ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಕೊರೋನಾ ವೈರಸ್ ಹರಡದಂತೆ ತಡೆಯಲು ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದರೂ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುತ್ತಲೇ ಇದ್ದಾರೆ.

 

COVID-19 ಲಾಕ್‌ಡೌನ್; ಮಾಲೀಕನ ವಿನೂತನ ಐಡಿಯಾ, ಕುಡುಕರಿಗೆ ಮನೆಯಲ್ಲೇ ಸಿಗುತ್ತೆ ಬಾರ್ ಅನುಭವ!.

ಪೂರ್ವ ದೆಹಲಿಯ ಆನಂದ್ ವಿಹಾರ್ ಬಳಿ ಇರುವ ಸ್ವಾಮಿ ವಿವೇಕಾನಂದ ಅಂತರ್ ರಾಜ್ಯ ಬಸ್ ನಿಲ್ದಾಣ(ISBT) ಇದೀಗ ತುಂಬಿ ತುಳುಕುತ್ತಿದೆ. ಬರೋಬ್ಬರಿ 25 ಏಕರೆ ಪ್ರದೇಶದಲ್ಲಿರುವ ಈ ಬಸ್ ನಿಲ್ದಾಣದಲ್ಲಿ ಜನರಿಂದ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ISBT ಬಸ್ ನಿಲ್ದಾಣದಿಂದ ಉತ್ತರ ಪ್ರದೇಶ, ಉತ್ತರಖಂಡ ಸೇರದಂತೆ ಹಲವು ರಾಜ್ಯಗಳಿಗೆ ಬಸ್ ಸೇವೆ ಕಲ್ಪಿಸುತ್ತಿದೆ. ಲಾಕ್‌ಡೌನ್ ಬಳಿಕ ಜನರು ತಮ್ಮ ಊರುಗಳಿಗೆ ತೆರಳಲು ನಿಲ್ದಾಣಕ್ಕೆ ಬರುತ್ತಲೇ ಇದ್ದಾರೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಹೀಗಿರುವಾಗಿ ದೇಶದಲ್ಲಿ ಕೊರೋನಾ ವೈರಸ್ ತಡೆಯುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುವುದು ಸಹಜ.

ದೆಹಲಿಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು  ತಮ್ಮ ಊರಿಗೆ ತೆರಳಲು ಧಾವಿಸುತ್ತಿದ್ದಾರೆ. ದ ದೆಹಲಿ ಬಸ್ ನಿಲ್ದಾಣ ಮಾತ್ರವಲ್ಲ, ದೆಹಲಿ ಹಾಗೂ ಉತ್ತರ ಪ್ರದೇಶ ಗಡಿಯಲ್ಲೂ ಜನ ಸಾಗರವೇ ಇದೆ.  ಡೌನ್‌ನಿಂದ ಊಟ ಹಾಗೂ ಉಳಿದುಕೊಳ್ಳಲು ಯಾವುದೇ ಸಮಸ್ಯ ಆಗಬಾರದು ಎಂದು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಿದೆ. ಆದರೆ ಜನರು ಮಾತ್ರ ನಾವು ಊರಿಗೆ ಹೊರಟೇ ತೀರುತ್ತೇವೆ ಅನ್ನೋ ಮಟ್ಟದಲ್ಲಿ ಇದ್ದಾರೆ.

 

ದೆಹಲಿಯ ISBT ಬಸ್ ನಿಲ್ದಾಣದಿಂದ ಉತ್ತರ ಪ್ರದೇಶ ಹಾಗೂ ಉತ್ತರಖಂಡ್ ರಾಜ್ಯಗಳಿಗೆ ಪ್ರತಿ ದಿನ 1,400 ರಿಂದ 1,500 ಬಸ್ ಪ್ರತಿ ದಿನ ಓಡಾಡುತ್ತಿದೆ. ಇನ್ನೂ 1,800 ರಿಂದ 2,000 ಸ್ಥಳೀಯ ಸಿಟಿ ಬಸ್‌ಗಳು ಇದೇ ಬಸ್ ನಿಲ್ದಾಣದಿಂದ ಪ್ರತಿ ದಿನ ಕಾರ್ಯನಿರ್ವಹಿಸುತ್ತಿದೆ. ದೆಹಲಿ ನಗರವನ್ನುಪೂರ್ವ ದೆಹಲಿಯನ್ನು ಜೋಡಿಸುವ ಈ ಬಸ್ ನಿಲ್ದಾಣ ಭಾರತದ ಅತ್ಯಂತ ಹೆಚ್ಚು ಬಸ್ ಸೇವೆ ಹಾಗೂ ಜನಸಂದಣಿ ಹೊಂದಿರುವ ಬಸ್ ನಿಲ್ದಾಣ. ಇದೀಗ ಈ ಬಸ್ ನಿಲ್ದಾಣ ತುಂಬಿ ತುಳುಕುತ್ತಿದ್ದು, ಕೊರೋನಾಗೆ ಕೈಗೊಂಡ ಪ್ರಯತ್ನಗಳೆಲ್ಲಾ ನೀರಿನಲ್ಲಿ ಮಾಡಿದ ಹೋಮದ ರೀತಿ ಭಾಸವಾಗುತ್ತಿದೆ. 

 

Follow Us:
Download App:
  • android
  • ios