ಕೋಲಾರ(ಮಾ.27): ಲಾಕ್‌ಡೌನ್‌ ನಡುವೆಯೇ ಕೋಲಾರದ ತಹಸೀಲ್ದಾರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮಾಲೂರು ತಹಶಿಲ್ದಾರ್ ನಿಧನರಾಗಿದ್ದಾರೆ.

ಮಾಲೂರು ತಹಸೀಲ್ದಾರ್ ಕೆ. ಮುನಿರಾಜು (58) ಮೃತರು. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಕಳೆದ 3 ತಿಂಗಳ ಹಿಂದೆ ಕೆ. ಮುನಿರಾಜು ಮಾಲೂರಿಗೆ ತಹಶಿಲ್ದಾರ್ ಆಗಿ ನೇಮಕವಾಗಿದ್ದರು.

ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಶರಣಾದ KSRP ಪೇದೆ

ಮಾರ್ಚ್ 25 ರಂದು ಶಾಸಕ ಕೆ.ವೈ. ನಂಜೇಗೌಡ ಜೂತೆಗೂಡಿ ಕರೋನಾ ಸೋಂಕಿನ ಕುರಿತು ಪ್ರಚಾರ ಮಾಡಿದ್ದ ತಹಶಿಲ್ದಾರ್ ದಕ್ಷ ಅಧಿಕಾರಿಯಾಗಿದ್ದರು. ನಿಧನಕ್ಕೆ ಶಾಸಕ ಕೆ.ವೈ. ನಂಜೇಗೌಡ, ಸಂಸದ ಎಸ್. ಮುನಿಸ್ವಾಮಿ, ಜಿಲ್ಲಾಧಿಕಾರಿ ಸಿ ಸತ್ಯಭಾಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೇಮ ವೈಫಲ್ಯ: ಬಾವಿಗೆ ಹಾರಿ ಪ್ರಾಣಬಿಟ್ಟ ಜೋಡಿ ಹಕ್ಕಿಗಳು!