ನವದೆಹಲಿ(ಮಾ.30): ಭಾರತದಲ್ಲಿ ಕೊರೋನಾ ತನ್ನ ಅಟ್ಟಹಾಸ ಅರಂಭಿಸಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಮಾರ್ಚ್ 24 ರಂದು ಬಿಡುಗಡೆಯಾದ ವರದಿಯೊಂದು ಭಾರೀ ಸದ್ದು mAಡಿತ್ತು. ಭಾರತೀಯರನ್ನು ಬೆಚ್ಚಿ ಬೀಳಿಸಿದೆ. ಈ ವರದಿಯನ್ವಯ ಕೊರೋನಾ ಅಬ್ಬರ ಹೀಗೇ ಮುಂದುವರಿದರೆ ಹಾಗೂ ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ 18 ರಿಂದ 24 ಕೋಟಿ ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವರದಿ ಜನರನ್ನು ಮತ್ತಷ್ಟು ಕಂಗಾಲು ಮಾಡಿದೆ. ಹೀಗಿರುವಾಗ ಈ ವರದಿಯ ಕುರಿತು ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿ ಸ್ಪಷ್ಟನೆ ನೀಡಿದೆ.

ಹೌದು ಈ ವರದಿ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾನಿಲಯ ಈ ವರದಿಯಲ್ಲಿ ಬಳಸಲಾದ ನಮ್ಮ ಲೋಗೋ ಅಧಿಕೃತವಲ್ಲ. ಈ ಕುರಿತು ನಾವು CDDEP ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಧನ್ಯವಾದಗಳು ಎಂದಿದೆ.

ಲಾಕ್‌ಡೌನ್ ನಿಯಮ ಕಠಿಣವಾಗಿ ಪಾಲಿಸಿದರೆ ಭಾರತದಲ್ಲಿ ಹರಡೋಲ್ಲ ರೋಗ

ಏನಿದು CDDEP?

ಯುಎಸ್‌ ಮೂಲಕ CDDEP, ದ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಆಂಡ್ ಪಾಲಿಸಿ ಈ ವರದಿಯನ್ನು ಪ್ರಕಟಿಸಿತ್ತು. ಇದರಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡುವ ಮೂರನೇ ಹಾಗೂ ತೀರಾ ಅಪಾಯಕಾರಿ ಹಂತದಲ್ಲಿದೆ ಎಂದಿತ್ತು. ಆದರೆ ಸರ್ಕಾರ ಭಾರತದಲ್ಲಿ ಕೊರೋನಾ ಮೂರನೇ ಹಂತಕ್ಕೆ ತಲುಪಿಲ್ಲ ಎಂಬ ಸ್ಪಷ್ಟನೆ ನೀಡಿದೆ.     

ಇನ್ನು ಈ ವರದಿಯಲ್ಲಿ ಇತರ ರಾಷ್ಟ್ರಗಳಗೆ ಹೋಲಿಸಿದರೆ, ಭಾರತದಲ್ಲಿ ಕೊರೋನಾ ನಿಯಂತ್ರಿಸಲು ಹವಾಮಾನ ಪೂರಕವಾಗಿದೆ. ಅಲ್ಲದೇ ಇಲ್ಲಿ ಅತಿ ಹೆಚ್ಚು ಯುವಜನಾಂಗ ಇರುವುದು ಲಾಭದಾಯಕ ಎಂದಿತ್ತು. ಹೀಗಿದ್ದರೂ ಇಲ್ಲಿ ಅಪೌಷ್ಠಿಕತೆ ಹಾಗೂ ಸಾಮಾಜಿಕ ಅಂತರ ಪಾಲಿಸದಿದ್ದರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆಗಳೂ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಅದೇನಿದ್ದರೂ ಭಾರತದಲ್ಲಿ ಕೊರೋನಾ ನಿಯಂತ್ರಿಸಲು ಇತರೆ ರಾಷ್ಟ್ರಗಳಿಗಿಂತ ಹೆಚ್ಚು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುವುದು ವಾಸ್ತವ ಹಾಗೂ ಭಾರತೀಯರ ಸಮಾಧಾನ ತಂದುಕೊಳ್ಳುವ ವಿಷಯ.