ನವದೆಹಲಿ(ಮಾ.26): ಕೊರೋನಾ ತಡೆಗಾಗಿ ಮುಂದಿನ ಒಂದುವರೆ ವರ್ಷ ಕಾಲ ದೇಶಾದ್ಯಂತ ನಿಷೇಧಾಜ್ಞೆ ಹೇರಿದರೂ, ಬಡ ಜನರ ಆಹಾರಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ಆಹಾರ ಧಾನ್ಯಗಳನ್ನು ಶೇಖರಿಸಿಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಈ ಸಂಬಂಧ ಸಂದರ್ಶನವೊಂದರಲ್ಲಿ ಮಾತನಾಡಿದ ಭಾರತೀಯ ಆಹಾರ ಕಾರ್ಪೊರೇಷನ್‌ ಅಧ್ಯಕ್ಷ ಡಿ.ವಿ ಪ್ರಸಾದ್‌ ಅವರು, ‘ಏಪ್ರಿಲ್‌ ಅಂತ್ಯದವರೆಗೆ ದೇಶಾದ್ಯಂತ ಇರುವ ಉಗ್ರಾಣಗಳಲ್ಲಿ 10 ಕೋಟಿ ಟನ್‌ ದವಸ ದಾನ್ಯಗಳು ಶೇಖರಣೆಯಾಗಲಿದೆ. ಆದರೆ. ಬಡಜನರಿಗೆ ವಾರ್ಷಿಕ 5 ಕೋಟಿಯಿಂದ 6 ಕೋಟಿವರೆಗೂ ದವಸ-ದಾನ್ಯಗಳು ಹಂಚಿಕೆಯಾಗುತ್ತದೆ. ಅಲ್ಲದೆ, 2019-20ರಲ್ಲಿ ದೇಶದಲ್ಲಿ ಸುಮಾರು 30 ಕೋಟಿ ಆಹಾರ ದಾನ್ಯಗಳು ಉತ್ಪತ್ತಿಯಾಗುವ ನಿರೀಕ್ಷೆಯಿದೆ. ಹೀಗಾಗಿ, ಎಂಥ ಸ್ಥಿತಿ ಬಂದರೂ, ದೇಶದಲ್ಲಿ ಆಹಾರದ ಕೊರತೆ ಎದುರಾಗದು. ಈ ಬಗ್ಗ ಚಿಂತಿಸಬೇಕಾದ ಅಗತ್ಯವೇ ಇಲ್ಲ’ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸದ್ಯ ಲಾಕ್‌ಡೌನ್‌ನಿಂದಾಗಿ ಸೂಪರ್‌ ಮಾರ್ಕಟ್‌ಗಳೆಲ್ಲವೂ ಖಾಲಿ ಖಾಲಿಯಾಗಿದ್ದು, ಆನ್‌ಲೈನ್‌ ಶಾಪಿಂಗ್ ಕೂಡಾ ಬಹುತೇಕ ಸ್ಥಗಿತವಾಗಿದೆ. ದಿನಸಿ ಅಂಗಡಿಗಳೆದುರು ಜನರು ಸರತಿ ಸಾಲಿನಲ್ಲಿ ನಿಂತು ದಿನನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ.