ನಾಗರಿಕರಿಗಗೆ ಕೊರೋನಾ ಸಂಬಂಧಿತ ಮಾಹಿತಿ ಒದಗಿಸಲು ಸರ್ಕಾರದಿಂದ ಟ್ವಿಟರ್ ಖಾತೆ| ಕೊರೋನಾ ವಿರುದ್ಧ ಸಮರದಲ್ಲಿ ಈ ಕುರಿತಾದ ಮಾಹಿತಿ ನಮಗೆ ತಿಳಿದಿರಬೇಕು| ಮೊದಲ ಟ್ವೀಟ್‌ನಲ್ಲಿ ಸಹಾಯವಾಣಿ ನಂಬರ್ ಶೇರ್

ನವದೆಹಲಿ(ಏ.01): ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯು ಕೊರೋನಾ ವೈರಸ್ ಸಂಬಂಧಿತ ಮಾಹಿತಿ, ಸುದ್ದಿಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟ್ವಿಟರ್ ಖಾತೆಯೊಂದನ್ನು ತೆರೆದಿದೆ. ಕೊರೋನಾ ಸಂಬಂಧಿತ ಮಾಹಿತಿಗಾಗೇ ತೆರೆಯಲಾದ ಈ ಖಾತೆ ಹೆಸರು #IndiaFightsCorona ಹಾಗೂ ಬಳಕೆದಾರರ ಐಡಿ @CovidnewsbyMIB ಎಂದಿದೆ.

ಈ ಖಾತೆಯಿಂದ ಮಾಡಲಾದ ಮೊದಲಲ ಟ್ವೀಟ್‌ನಲ್ಲಿ ಮಾಹಿತಿ ಪಡೆಯಲು ಉಪಯುಕ್ತವಾದ ಸಹಾಯವಾಣಿ ನಂಬರ್‌ ಶೇರ್ ಮಾಡಲಾಗದೆ. 

Scroll to load tweet…

ಅಲ್ಲದೇ ಪ್ರಿಯ ನಾಗರಿಕರೇ, ಕೊರೋನಾ ವಿರುದ್ಧದ ಈ ಹೋರಾಟದಲ್ಲಿಅಗತ್ಯ ಮಾಹಿತಿ ನಮಗೆ ತಿಳಿದಿರಬೇಕು. ಸೂಕ್ತ ಮಾಹಿತಿ ನಾವು ತಿಳಿದುಕೊಳ್ಳವುದು ಅತ್ಯಗತ್ಯ ಎಂದು ಬರೆಯಲಾಗಿದೆ.