ನವದೆಹಲಿ(ಏ.04): ಲಾಕ್‌ಡೌನ್‌ ಉಲ್ಲಂಘಿಸಿ ದೇಶದ ಹಲವೆಡೆ ತೀವ್ರ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಲು ಕಾರಣವಾದ ದೆಹಲಿಯ ತಬ್ಲೀಘಿ ಜಮಾತ್‌ ಮರ್ಕಜ್‌ನ ಹಣದ ಮೂಲವನ್ನು ಶೋಧಿಸಲು ಪೊಲೀಸರು ಮುಂದಾಗಿದ್ದಾರೆ. ತಬ್ಲೀಘಿ ಜಮಾತ್‌ಗೆ ಕೊಲ್ಲಿ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬಂದಿರುವ ಬಗ್ಗೆ ಮಾಹಿತಿ ದೊರಕಿದ್ದು, ಈ ಕುರಿತ ಎಲ್ಲ ವಿವರ ನೀಡುವಂತೆ ದೆಹಲಿ ಪೊಲೀಸರು ತಬ್ಲೀಘಿ ಜಮಾತ್‌ನ ಮುಖ್ಯಸ್ಥ ಮೌಲಾನಾ ಸಾದ್‌ಗೆ ಸಮನ್ಸ್‌ ನೀಡಿದ್ದಾರೆ.

ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ನಿಜಾಮುದ್ದೀನ್ ಸೋಂಕು, ಕೇಂದ್ರ ಬಿಚ್ಚಿಟ್ಟ ಸತ್ಯ

ತಬ್ಲೀಘಿ ಜಮಾತ್‌ನ ಪೂರ್ಣ ಹೆಸರು, ವಿಳಾಸ, ನೋಂದಣಿ ವಿವರ, ವಿವಿಧ ವಿಭಾಗಗಳ ಮುಖ್ಯಸ್ಥರು, ಮರ್ಕಜ್‌ ಸಮಿತಿಯ ಸದಸ್ಯರು, ಕಳೆದ ಮೂರು ವರ್ಷಗಳ ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಕೆ ವಿವರ, ಪ್ಯಾನ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ತಬ್ಲೀಘಿ ಜಮಾತ್‌ನ ನೌಕರರ ಪಟ್ಟಿ, ಜ.1ರ ನಂತರ ಇಲ್ಲಿಯವರೆಗೆ ಏರ್ಪಡಿಸಿದ ಧಾರ್ಮಿಕ ಕಾರ್ಯಕ್ರಮಗಳ ವಿವರ, ಮರ್ಕಜ್‌ನ ನಕ್ಷೆ, ಆವರಣದಲ್ಲಿರುವ ಸಿಸಿಟೀವಿ ಕ್ಯಾಮೆರಾಗಳ ವಿವರ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಪಡೆದ ಅನುಮತಿ, ಮರ್ಕಜ್‌ ಹಾಗೂ ಸರ್ಕಾರಿ ಅಧಿಕಾರಿಗಳ ನಡುವೆ ಈ ಕುರಿತು ನಡೆದ ಪತ್ರ ವ್ಯವಹಾರ, ಧಾರ್ಮಿಕ ಕಾರ್ಯಕ್ರಮಗಳ ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳು, ಮಾಚ್‌ರ್‍ 12ರ ನಂತರ ನಡೆದ ಕಾರ್ಯಕ್ರಮಕ್ಕೆ ಬಂದ ಎಲ್ಲಾ ವಿದೇಶಿ ಹಾಗೂ ಸ್ವದೇಶಿ ಅನುಯಾಯಿಗಳ ವಿವರವನ್ನು ನೀಡುವಂತೆ ಸಾದ್‌ಗೆ ನೀಡಿದ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

"

ಮಾ.12 ಕಾರ್ಯಕ್ರಮದ ನಂತರ ಕೊರೋನಾ ಸೋಂಕು ಹರಡುವುದು ಬೆಳಕಿಗೆ ಬಂದ ಮೇಲೆ ಮರ್ಕಜ್‌ ಕಟ್ಟಡವನ್ನು ಖಾಲಿ ಮಾಡಲು ಏನು ಕ್ರಮ ಕೈಗೊಂಡಿದ್ದೀರಿ? ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹಾಗೂ ಕ್ವಾರಂಟೈನ್‌ ಮಾಡಲು ಏನು ಕ್ರಮ ಕೈಗೊಂಡಿದ್ದೀರಿ? ತಬ್ಲೀಘಿ ಜಮಾತ್‌ನ ಯಾರ್ಯಾರಿಗೆ ಸೋಂಕು ತಗುಲಿತ್ತು ಎಂಬ ವಿವರವನ್ನೂ ನೀಡಲು ಸೂಚಿಸಲಾಗಿದೆ.

647 ಜನಕ್ಕೆ ವೈರಸ್‌:ಎಲ್ಲರಿಗೂ ತಬ್ಲೀಘಿ ನಂಟು!

ದೇಶಾದ್ಯಂತ ಬೆಳಕಿಗೆ ಬಂದ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ತಬ್ಲೀಘಿಗಳ ಪಾಲೇ ಶೇ.30ಕ್ಕಿಂತ ಹೆಚ್ಚಿದೆ. ಇನ್ನು ದೆಹಲಿಯಲ್ಲಂತೂ ಪತ್ತೆಯಾದ ಒಟ್ಟು 384 ಪ್ರಕರಣಗಳಲ್ಲಿ ತಬ್ಲೀಘಿಗಳ ಸಂಖ್ಯೆ 259 ಇದೆ. ಅಂದರೆ ಒಟ್ಟುಪಾಲಿನಲ್ಲಿ ಶೇ.67ರಷ್ಟುಇವರದ್ದೇ ಆಗಿದೆ.

ಇದಲ್ಲದೆ, ಕಳೆದ 24 ತಾಸುಗಳಲ್ಲಿ ಕೊರೋನಾ ಸೋಂಕಿನಿಂದ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ. ಅದರಲ್ಲೂ ಕೆಲವರಿಗೆ ತಬ್ಲೀಘಿ ಸಂಪರ್ಕವಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಅವರು ತಿಳಿಸಿದ್ದಾರೆ.

ಕರ್ನಾಟಕ, ತಮಿಳುನಾಡು, ದೆಹಲಿ, ಅಸ್ಸಾಂ, ಹಿಮಾಚಲಪ್ರದೇಶ, ಹರಾರ‍ಯಣ, ಜಮ್ಮು- ಕಾಶ್ಮೀರ, ಜಾರ್ಖಂಡ್‌, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಅಂಡಮಾನ್‌- ನಿಕೋಬಾರ್‌ನಲ್ಲಿ ಒಟ್ಟು 647 ಕೊರೋನಾ ಸೋಂಕು ದೃಢಪಟ್ಟಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲವೊಂದು ದಿನಗಳಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೆ, ಅದಕ್ಕೆ ಬಹುಮುಖ್ಯವಾಗಿ ಒಂದು ನಿರ್ದಿಷ್ಟಮಟ್ಟದ ಹೆಚ್ಚಳ ಕಾರಣ ಎಂದು ಅವರು ಪರೋಕ್ಷವಾಗಿ ತಬ್ಲೀಘಿ ಜಮಾತ್‌ ಕುರಿತು ಪ್ರಸ್ತಾಪ ಮಾಡಿದ್ದಾರೆ.