ಮೈಸೂರು(ಎ.02): ಕೊರೋನಾ ವೈರಸ್‌ ಸೋಂಕು ಹರಡುವ ಆತಂಕದಿಂದ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆ ತರಕಾರಿ ಸಾಗಣೆ ವೆಚ್ಚ ದುಬಾರಿಯಾದ್ದರಿಂದ ಹತಾಶರಾಗಿ ಕಟಾವಿಗೆ ಬಂದಿದ್ದ ಹೂ ಕೋಸನ್ನು ಜಾನುವಾರುಗಳಿಗೆ ಮೇಯಲು ಬಿಟ್ಟಿದ್ದಾರೆ.

ಹನಗೋಡು ಹೋಬಳಿಯ ಹೆಮ್ಮಿಗೆ ಗ್ರಾಮದ ರೈತ ತಮ್ಮೇಗೌಡರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಹೂ ಕೋಸನ್ನು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗೆಟ್ಟು, ಕುರಿ, ಮೇಕೆ, ಜಾನುವಾರುಗಳಿಗೆ ಮೇಯಲು ಬಿಟ್ಟಿದ್ದಾರೆ, ಇದರಿಂದ ಸುಮಾರು 2 ಲಕ್ಷ ರು. ನಷ್ಟಉಂಟಾಗಿದೆ.

ವಲಸೆ ಬಂದ ಹಕ್ಕಿಗಳಿಗೆ ತುತ್ತಿನ ವ್ಯವಸ್ಥೆ

ಹನಗೋಡು ಹೋಬಳಿಯ ಅಬ್ಬೂರು, ಸಿಂಡೇನಹಳ್ಳಿ, ಕಚುವಿನಹಳ್ಳಿ, ಬಿ.ಆರ್‌. ಕಾವಲ್‌ ಕಣಗಾಲು, ಕಿರಂಗೂರು ಹರಳಳ್ಳಿ ಸೇರಿದಂತೆ ಈ ಭಾಗದಲ್ಲಿ ಹೆಚ್ಚಾಗಿ ಕೆಲ ರೈತರು ತರಕಾರಿ ಬೆಳೆಯನ್ನು ಅವಲಂಭಿಸಿದ್ದು, ಲಾಕ್‌ಡೌನ್‌ನಿಂದಾಗಿ ಕೇರಳ, ಮಂಗಳೂರು, ಕೊಡಗು ಭಾಗಕ್ಕೆ ತರಕಾರಿ ಸರಬರಾಜು ಮಾಡುವ ದಳ್ಳಾಳಿಗಳು ಬಾರದೆ, ಕಾರ್ಮಿಕರ ಕೊರತೆ, ದುಬಾರಿಯಾದ ಸಾಗಾಟ ವೆಚ್ಚದಿಂದ ಹುಣಸೂರಿಗೆ ಸಾಗಿಸಲು ಆಗದಂತಹ ಪರಿಸ್ಥಿತಿ ಇದ್ದು, ಹತಾಶರಾಗಿರುವ ರೈತರು ಅನ್ಯ ಮಾರ್ಗ ಕಾಣದೆ ತಮ್ಮ ಜಮೀನಿನಲ್ಲಿ ಬೆಳೆದಿರುವ ತರಕಾರಿಯನ್ನು ಕುರಿ, ಮೇಕೆ, ಜಾನುವಾರುಗಳು ಜಾನುವಾರುಗಳನ್ನು ಮೇಯಲು ಬಿಟ್ಟಿದ್ದು, ಲಕ್ಷಾಂತರ ರು. ನಷ್ಟಉಂಟಾಗಿದೆ.