ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!
ರಾಜ್ಯದ ಆರ್ಥಿಕತೆ ಮೇಲೆ ಕೊರೋನಾ ಕರಿನೆರಳಿನ ಪರಿಣಾಮ | ಸರ್ಕಾರಿ ನೌಕರರು, ಶಾಸಕರ ವೇತನ ಅರ್ಧಕ್ಕರ್ಧ ಕತ್ತರಿ!| ಸರ್ಕಾರದ ಬೊಕ್ಕಸಕ್ಕೆ 12 ಸಾವಿರ ಕೋಟಿ ರು. ಖೋತಾ
ಹೈದರಾಬಾದ್(ಮಾ.31): ದೇಶಾದ್ಯಂತ ಕೊರೋನಾ ಲಾಕ್‌ಡೌನ್ ಬೆನ್ನಲ್ಲೇ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರೀ ಕಡಿತ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯದ ಆರ್ಥಿಕತೆ ಮೇಲೆ ಕೊರೋನಾ ಕರಿನೆರಳಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 12 ಸಾವಿರ ಕೋಟಿ ರು. ಖೋತಾ ಆಗಿದೆ. ಹೀಗಾಗಿ, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸೋಮವಾರ ಪ್ರಗತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರ ಹೇಳಿದೆ.
ಏ.14ರ ವರೆಗೆ ನೌಕರರ ರಜೆ ವಿಸ್ತರಿಸಿ ಕರ್ನಾಟಕ ಸರ್ಕಾರ ಆದೇಶ
ಇದರನ್ವಯ, ಏಪ್ರಿಲ್ ತಿಂಗಳಲ್ಲಿ ಮುಖ್ಯಮಂತ್ರಿ, ಸಂಪುಟ ದರ್ಜೆ ಸಚಿವರು, ಶಾಸಕರು, ಮೇಲ್ಮನೆ ಸದಸ್ಯರು, ರಾಜ್ಯ ಕಾರ್ಪೊರೇಷನ್ ಮುಖ್ಯಸ್ಥರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ವೇತನದಲ್ಲಿ ಶೇ.75ರಷ್ಟುಕಡಿತವಾಗಲಿದೆ. ಅಲ್ಲದೆ, ಐಎಎಸ್ ಅಧಿಕಾರಿಗಳ ಶೇ.60, ಇತರೆ ನೌಕರರ ವೇತನದಲ್ಲಿ ಶೇ.50 ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ.10ರಷ್ಟುವೇತನವನ್ನು ಕಡಿತಗೊಳಿಸಲಾಗುತ್ತದೆ.
ಜೊತೆಗೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಿಗೆ ಸರ್ಕಾರ ನೀಡುವ ಅನುದಾನದಲ್ಲೂ ಕಡಿತ ಮಾಡಲಾಗುವುದು.