ನವದೆಹಲಿ(ಮಾ 28): ಕೊರೋನಾ ವೈರಸ್ ಅಟ್ಟಹಾಸಕ್ಕೆ ಭಾರತ ನಲುಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಹೇರಿದ್ದು, ಇದು ಜನರನ್ನು ಇನ್ನಷ್ಟು ಭಯ ಭೀತರನ್ನಾಗಿಸಿದೆ. ಸದ್ಯ ಜಿಮ್, ಪಾರ್ಕ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. ಜನರಿಗೆಲ್ಲಾ ಹೊರಬಾರದಂತೆ ಖಡಕ್ ಸೂಚನೆ ನೀಡಲಾಗಿದೆ. ಹಲವಾರು ಕಂಪನಿಗಳು ವರ್ಕ್ ಫ್ರಂ ಹೋಂ ನೀಡಿದೆ. 

ಹೀಗಿರುವಾಗ ಜನರೆಲ್ಲಾ ಮನೆಯೊಳಗೆ ಕೈದಿಗಳಂತಿದ್ದಾರೆ. ದಿನಸಿಗಳನ್ನೆಲ್ಲಾ ಖರೀದಿಸಿ ಕೂಡಿಟ್ಟುಕೊಂಡಿದ್ದಾರೆ. ಆದರೆ ಇವೆಲ್ಲದರ ನಡುವೆ ಭಾರತದಲ್ಲಿ ಮತ್ತೊಂದು ಅಚ್ಚರಿಯ ಬೆಳವಣಿಗೆ ಬೆಳಕಿಗೆ ಬಂದಿದೆ. ಹೌದು ಭಾರತದಲ್ಲೀಗ ಕಾಂಡೋಂಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ. ಕಳೆದೊಂದು ವಾರದಲ್ಲೇ ಕಾಂಡೋಂ ಬೇಡಿಕೆ ಶೇ. 25 ರಿಂದ ಶೇ.50ಕ್ಕೇರಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ ದಕ್ಷಿಣ ಮುಂಬೈನ ಮೆಡಿಕಲ್ ಶಾಪ್ ಸಿಬ್ಬಂದಿಯೊಬ್ಬರು ಜನರಿಗೀಗ ಬಢಕಾದಷ್ಟು ಟೈಂ ಇದೆ. ಮನೆಯಲ್ಲಿದ್ದೇ ಅವರಿಗಗೆ ಬೋರ್ ಆಗುತ್ತದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದದೆ. ಸಾಮಾನ್ಯವಾಗಿ ಎರಡ್ಮೂರು ಪ್ಯಾಕ್ ತೆಗೆದುಕೊಳ್ಳುವ ಗ್ರಾಹಕರು, ಕಳೆದ ವಾರ ಹತ್ತರಿಂದ ಇಪ್ಪತ್ತು ಪ್ಯಾಕ್ ಖರೀದಿಸಿದ್ದಾರೆ ಎಂದಿದ್ದಾರೆ.

Fact Check| ಚೀನಾದಲ್ಲಿ ಬಾವಲಿಯೊಂದಿಗೇ ಸೆಕ್ಸ್: ಕೊರೋನಾ ಹುಟ್ಟಿಗೆ ಇದೇ ಕಾರಣನಾ?

ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಅದರಲ್ಲೂ ಹೆಚ್ಚಾಗಿ ಹೊಸ ವರ್ಷದ ವೇಳೆ ಕಾಂಡೋಂ ಬೇಡಿಕೆ ಹೆಚ್ಚಾಗುತ್ತದೆ. ಆದರೀಗ ಇಂತಹ ಸಮಯದಲ್ಲಿ ಕಾಂಡೋಂ ಖರೀದಿ ಜೋರಾಗಿರುವುದು ಅಚ್ಚರಿಯ ವಿಚಾರ. ಅದರಲ್ಲೂ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಖರೀದಿಸುತ್ತಿದ್ದಾರೆ ಎಂಬುವುದು ಮತ್ತೊಂದು ಮೆಡಿಕಲ್ ಶಾಪ್ ಸಿಬ್ಬಂದಿ ಮಾತಾಗಿದೆ. 

ಇನ್ನು ಸೆಕ್ಸ್ ಟಾಯ್ಸ್ ಖರೀದಿಯೂ ಜೋರಾಗಿದೆ. ಅಲ್ಲದೇ ಪೋರ್ನ್ ಸೈಟ್‌ ವೀಕ್ಷಿಸುವವರ ಸಂಖ್ಯೆಯೂ ಗಣನೀಯವಾಗಿ ಏರಿದೆ. ಭಾರತದಲ್ಲಿ ಪೋರ್ಸ್ ಸೈಟ್ ವೀಕ್ಷಿಸುವವರ ಸಂಖ್ಯೆ ಶೇ. 11 ರಷ್ಟು ಏರಿಕೆಯಾಗಿದೆ.