ನವದೆಹಲಿ(ಮಾ.24): ಕೊರೋನಾ ವೈರಸ್‌ ಭೀತಿ ಲೋಕಸಭೆ ಹಾಗೂ ರಾಜ್ಯಸಭೆಗಳನ್ನೂ ಕಾಡಿದ್ದು, ನಿಗದಿತ ಅವಧಿಯ 2 ವಾರ ಮೊದಲೇ ಕಲಾಪಗಳನ್ನು ಸೋಮವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದ ಬಳಿಕ ಲೋಕಸಭೆಯಲ್ಲಿ, ಸರ್ಕಾರದ 1 ವರ್ಷದ ಖರ್ಚುವೆಚ್ಚಕ್ಕೆ ಅನುವು ಮಾಡಿಕೊಡುವ ‘ಹಣಕಾಸು ಮಸೂದೆ-2020’ ಅನ್ನು ಚರ್ಚೆ ಇಲ್ಲದೇ ಪಾಸು ಮಾಡಲಾಯಿತು. ‘ಇದು ಅಸಾಧಾರಣ ಪರಿಸ್ಥಿತಿ. ಹೀಗಾಗಿ ಚರ್ಚೆ ಇಲ್ಲದೇ ಮಸೂದೆ ಪಾಸು ಮಾಡಲಾಗುತ್ತಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ಹೇಳಿದರು. ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರು ಅನಿರ್ದಿಷ್ಟಮುಂದೂಡಿಕೆ ಪ್ರಕಟಿಸಿದರು. ಇನ್ನು ರಾಜ್ಯಸಭೆಯನ್ನು ಕೂಡ ‘ಪರಿಸ್ಥಿತಿಯ ಗಂಭೀರತೆ’ ಅರಿತು ಮುಂದೂಡಲು ಸದಸ್ಯರು ಒ್ಪಪಿಗೆ ಸೂಚಿಸಿದರು.

ಪೂರ್ವನಿಗದಿಯಂತೆ ಏಪ್ರಿಲ್‌ 3ರವರೆಗೆ ಸದನ ನಡೆಯಬೇಕಿತ್ತು.