Asianet Suvarna News Asianet Suvarna News

ಕ್ಯಾತೆ ತೆಗೆದ ಕೇರಳಕ್ಕೆ ಕರ್ನಾಟಕ ಕೊಟ್ಟ ಠಕ್ಕರ್

ಕೊರೋನಾ ವೈರಾಣು ವಿರುದ್ಧದ ಹೋರಾಟ/ ಕೇರಳದ ಸರ್ಕಾರದ ಕ್ಯಾತೆಗೆ ರಾಜ್ಯ ಸರ್ಕಾರದ ಠಕ್ಕರ್/ ಕಾಸರಗೋಡಿನ ಸೋಂಕಿತರಿಗೆ ನಮ್ಮಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ/ ನಮ್ಮ ಆಸ್ಪತ್ರೆಯಯಲ್ಲೇ ಅವರಿಗೆ ಚಿಕಿತ್ಸೆ ನೀಡಿದ್ದೇವೆ

coronavirus affect road transportation stop karnataka hits back kerala
Author
Bengaluru, First Published Mar 30, 2020, 8:45 PM IST

ಬೆಂಗಳೂರು(ಮಾ. 30)  ಕರ್ನಾಟಕ ಗಡಿ ಬಂದ್ ಮಾಡಿರುವ ಕುರಿತು ಕೇರಳ ಎಂಪಿಯೊಬ್ಬರು ಕೇರಳ  ಸರ್ಕಾರ ಕ್ಯಾತೆ ತೆಗೆದಿದೆ.  ಕೇರಳ ತನ್ನ ವೈಫಲ್ಯತೆ ಮುಚ್ಚಿಕೊಳ್ಳಲು ರಿಟ್ ಅರ್ಜಿ ಸಲ್ಲಿಸಿದೆ. 

ಕೇರಳ ರಾಜ್ಯದ ಕಾಸರಗೋಡಿನ ನಾಲ್ವರು ಕೊರೋನಾ ಪಾಸಿಟಿವ್ ಇರುವ ರೋಗಿಗಳನ್ನ ರಾಜ್ಯದ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಕೊರೋನಾ ಪ್ರಕರಣಗಳ ಬಗ್ಗೆ ನಮಗೆ ಸಂಶಯವಿದೆ.  ನಾವು ಈಗಾಗಲೇ ಕಾಸರಗೋಡಿನ ಹಲವು ಶಂಕಿತ ಕೊರೋನಾ ಪ್ರಕರಣಗಳನ್ನ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡ್ತಿದ್ದೇವೆ. ಆದರೆ ಕೇರಳ ತನ್ನ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಕಾಸರಗೋಡಿನ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ವಿಫಲವಾಗಿದೆ.

ಸಿಇಟಿ ಪರೀಕ್ಷೆಯೂ ಮುಂದಕ್ಕೆ, ಯಾವಾಗ ವೇಳಾಪಟ್ಟಿ?

ನಮ್ಮ ರಾಜ್ಯದಲ್ಲಿ ಹೆಚ್ವು ಕೊರೋನಾ ಪಾಸಿಟಿವ್ ಇರುವವರನ್ನ ಸೇರಿಸಿಕೊಂಡು ನಮ್ಮ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಲು ನಾವು ತಯಾರಿಲ್ಲ. ನಮಗೂ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗುತ್ತದೆ.

ಆರೋಗ್ಯ ಕ್ಷೇತ್ರ ರಾಜ್ಯ ಸರ್ಕಾರದ ವ್ಯಪ್ತಿಯಲ್ಲಿದೆ. ಕೊರೋನಾ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಜನರ ಆರೋಗ್ಯ ಕಾಪಾಡಲು ನಾವು ಕ್ರಮ ಕೈಗೊಂಡಿದ್ದೇವೆ.

ಗಡಿ ಬಂದ್ ಮಾಡಿರೋದು ಜನರನ್ನ ಕೊರೋನಾ ಪೀಡಿತರಿಂದ ಸುರಕ್ಷಿಸುವ ಒಂದು ಕ್ರಮ. ಕೇಂದ್ರ ಸರ್ಕಾರ ಕೂಡ ರಾಜ್ಯದ ಗಡಿ ಬಂದ್ ಮಾಡಲು ನಿರ್ದೇಶನ ನೀಡಿದೆ. ಅಲ್ಲದೇ ಜಿಲ್ಲೆಗಳ ಗಡಿಗಳನ್ನ ಬಂದ್ ಮಾಡಲು ಸೂಚಿಸಿತ್ತು. ರಾಜ್ಯ ಸರ್ಕಾರ ಮುಂಜಾಗೃತವಾಗಿ ಗಡಿ ಬಂದ್ ಮಾಡುವ ನಿರ್ಧಾರ ತಗೊಂಡಿತ್ತು. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಸ್ ವಾದ ಮಂಡಿಸಲಿದ್ದಾರೆ. ಕೇರಳ ರಿಟ್ ವಿರುದ್ಧ ರಾಜ್ಯ ಸರ್ಕಾರ ಸಮರ್ಥವಾಗಿ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

 

"

 

Follow Us:
Download App:
  • android
  • ios