14 ದಿನದ ಕ್ವಾರಂಟೈನ್‌ ಅವಧಿ ಮುಗಿದ ಮಾರನೇ ದಿನವೇ ಕೊರೋನಾ ಪತ್ತೆ!| ಈ ಅಪರೂಪದ ಘಟನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ

ಚಂಡೀಗಢ(ಮಾ.28): ಇದೇ ಮೊದಲ ಬಾರಿಗೆ 14 ದಿನಗಳ ಕ್ವಾರಂಟೈನ್‌ ಅವಧಿ ಮುಕ್ತಾಯವಾದ ಮಾರನೇ ದಿನ ವ್ಯಕ್ತಿಯೋರ್ವ ಕೊರೋನಾ ಸೋಂಕಿಗೆ ಸಿಲುಕಿದ ಅಪರೂಪದ ಘಟನೆ ಚಂಡೀಗಢದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುಬೈನಿಂದ ಮಾ.11ರಂದು ತಾಯ್ನಾಡಿಗೆ ಬಂದಿದ್ದ 22 ವರ್ಷದ ವ್ಯಕ್ತಿ 14 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ನಲ್ಲಿದ್ದರು. ಈ ಅವಧಿಯಲ್ಲಿ ಅವರಿಗೆ ಯಾವುದೇ ಕೊರೋನಾ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೆ, 15ನೇ ದಿನಕ್ಕೆ ಜ್ವರ ಕಾಣಿಸಿಕೊಂಡಿದೆ.

ಇದುವರೆಗೂ 14 ದಿನಗಳ ದಿಗ್ಬಂಧನ ಅವಧಿಯಲ್ಲಿ ವ್ಯಕ್ತಿ ಈ ವ್ಯಾಧಿಗೆ ಸಿಲುಕಿದ್ದಾರೆಯೇ ಎಂಬುದು ಗೊತ್ತಾಗುತ್ತಿತ್ತು. ಈ ಅಪರೂಪದ ಘಟನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.