ಗಂಭೀರವಾಗಿ ಪರಿಗಣಿಸಿ, ಜನತಾ ಕರ್ಫ್ಯೂ ಬಳಿಕ ಜನರ ಮೇಲೆ ಕೋಪಗೊಂಡ ಪಿಎಂ!
ಜನತಾ ಕರ್ಫ್ಯೂಗೆ ದೇಶವೇ ಸ್ತಬ್ಧ| ಪಿಎಂ ಕರೆಗೆ ಒಂದಾದ ಭಾರತ| ಒಂದೇ ದಿನದಲ್ಲಿ ಸಮರ ಮುಗೀತಾ?| ರಸ್ತೆಗಳಲ್ಲಿ ಮತ್ತೆ ಜನರ ಓಡಾಟ| ಗಂಭೀರವಾಗಿ ಪರಿಗಣಿಸಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ
ನವದೆಹಲಿ(ಮಾ.23): ಕೊರೋನಾ ವೈರಸ್ ನಿಂದಾಗಿ 16 ರಾಜ್ಯಗಳ 331 ನಗರಗಳು ಲಾಕ್‌ಡೌನ್ ಆಗಿವೆ. ೬೦ಕೋಟಿಗೂ ಹೆಚ್ಚು ಜನರು ತಮಗೆ ತಾವು ದಿಗ್ಬಂಧನ ಹೇರಿದ್ದಾರೆ.. ಹೀಗಿರುವಾಗ ಪಿಎಂ ಮೋದಿ ಮತ್ತೊಂದು ಬಾರಿ ಟ್ವೀಟ್ ಮಾಡಿ ಜನರಿಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮೋದಿ 'ಲಾಕ್‌ಡೌನ್‌ನ್ನು ಅನೇಕ ಮಂದಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದಯವಿಟ್ಟು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ನಿಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಿ. ಸರ್ಕಾರ ನೀಡಿರುವ ನಿರ್ದೇಶನಗಳನ್ನು ಗಂಭೀರವಾಗಿ ಪಾಲಿಸಿ. ಜನರು ನಿಯಮ ಹಾಗೂ ಕಾನೂನನ್ನು ಪಾಲಿಸುವಂತೆ ರಾಜ್ಯ ಸರ್ಕಾರಗಳು ನಿಗಾ ವಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ಮೂರನೇ ಹಂತ ತಲುಪಿದ್ದ, ಮೃತರ ಸಂಖ್ಯೆ 7ಕ್ಕೆ ಏರಿದೆ. ಅತ್ತ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದ್ದು, ಇದು 415ಕ್ಕೇರಿದೆ.
ಮಾರ್ಚ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ